‘ಕೆಲವೊಂದು ಯುದ್ಧಗಳನ್ನು ನಾನೇ ಗೆಲ್ಲಬೇಕಿದೆ’; ಸಹಾಯ ಮಾಡಲು ಬಂದ ಹರ್ಷನಿಗೆ ಒಂದೇ ಮಾತಲ್ಲಿ ಉತ್ತರಿಸಿದ ಭುವಿ

ಭುವಿಯನ್ನು ರತ್ನಮಾಲಾ ಸೊಸೆಯಾಗಿ ಸ್ವೀಕರಿಸುತ್ತಿರುವ ವಿಚಾರ ಅನೇಕರಿಗೆ ಇಷ್ಟವಿಲ್ಲ. ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಭುವಿ ಈಗ ಎಲ್ಲದಕ್ಕೂ ಒಡತಿ ಆಗುತ್ತಾಳೆ ಅನ್ನುವ ವಿಚಾರ ಅನೇಕರಿಂದ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಈ ಕಾರಣಕ್ಕೆ ಸಾನಿಯಾ ಉರಿದುಕೊಳ್ಳುತ್ತಿದ್ದಾಳೆ.

‘ಕೆಲವೊಂದು ಯುದ್ಧಗಳನ್ನು ನಾನೇ ಗೆಲ್ಲಬೇಕಿದೆ’; ಸಹಾಯ ಮಾಡಲು ಬಂದ ಹರ್ಷನಿಗೆ ಒಂದೇ ಮಾತಲ್ಲಿ ಉತ್ತರಿಸಿದ ಭುವಿ
ಭುವಿ-ಹರ್ಷ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 07, 2022 | 8:30 PM

ಕನ್ನಡತಿ ಧಾರಾವಾಹಿಯಲ್ಲಿ (Kannadathi Serial) ಭುವಿ ಹಾಗೂ ಹರ್ಷನ (Harsha) ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಭುವಿಯನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವ ಸಾನಿಯಾ ಪ್ರಯತ್ನ ಯಶಸ್ವಿ ಆಗಿದೆ. ಸೀರೆ ಖರೀದಿ ವೇಳೆ ಹೆಚ್ಚಿನ ಮೊತ್ತದ ಸೀರೆ ಖರೀದಿಸುವಂತೆ ಮಾಡಿ ಭುವಿಯನ್ನು ಕಷ್ಟಕ್ಕೆ ಸಿಲುಕಿಸಿದ್ದಾಳೆ ಸಾನಿಯಾ. ಇದರಿಂದ ಭುವಿ ಹೆಣಗಾಡುತ್ತಿದ್ದಾಳೆ. ‘ದೊಡ್ಡವರ ಮನೆಯ ಸಹಾವಾಸ ಬೇಡವೇ ಬೇಡ’ ಎಂದು ಭುವಿ ಹೇಳುವಂತೆ ಆಗಬೇಕು ಎಂಬುದು ಸಾನಿಯಾ ಆಸೆ. ಆದರೆ, ಭುವಿ ಹಾಗೆಲ್ಲ ಸೋಲುವವಳು ಅಲ್ಲವೇ ಅಲ್ಲ. ಸ್ವಾಭಿಮಾನವನ್ನೂ ಬಿಡುವವಳಲ್ಲ. ಈ ಯುದ್ಧವನ್ನು ತಾನೇ ಗೆಲ್ಲುವ ಹಠಕ್ಕೆ ಬಿದ್ದಿದ್ದಾಳೆ.

ಭುವಿಯನ್ನು ರತ್ನಮಾಲಾ ಸೊಸೆಯಾಗಿ ಸ್ವೀಕರಿಸುತ್ತಿರುವ ವಿಚಾರ ಅನೇಕರಿಗೆ ಇಷ್ಟವಿಲ್ಲ. ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಭುವಿ ಈಗ ಎಲ್ಲದಕ್ಕೂ ಒಡತಿ ಆಗುತ್ತಾಳೆ ಅನ್ನುವ ವಿಚಾರ ಅನೇಕರಿಂದ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಈ ಕಾರಣಕ್ಕೆ ಸಾನಿಯಾ ಉರಿದುಕೊಳ್ಳುತ್ತಿದ್ದಾಳೆ. ಆಕೆಗೆ ಇದನ್ನು ಅರಗಿಸಿಕೊಳ್ಳೋಕೆ ಸಾಧ್ಯವೇ ಆಗುತ್ತಿಲ್ಲ. ಹೀಗಾಗಿ, ಭುವಿಯ ವಿರುದ್ಧ ಮಸಲತ್ತು ನಡೆಸುತ್ತಿದ್ದಾಳೆ.

ಭುವಿಯ ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದೆ. ಮದುವೆ ಹಿಂದಿನ ದಿನದ ನಾಂದಿ ಕಾರ್ಯಕ್ಕೆ ಊಟ ಸೇರಿ ಮತ್ತಿತ್ಯಾದಿ ಕಾರ್ಯಗಳಿಗೆ ಹೆಚ್ಚಿನ ಖರ್ಚು ಎದುರಾಗುತ್ತಿದೆ. ಇದನ್ನು ಭರಿಸೋಕೆ ಭುವಿಗೆ ಸಾಧ್ಯವೇ ಆಗುತ್ತಿಲ್ಲ. ಆದರೆ, ಇದನ್ನು ಆಕೆ ಒಬ್ಬಂಟಿಯಾಗಿ ಎದುರಿಸಬೇಕಾಗಿದೆ.

ಇದನ್ನೂ ಓದಿ
Image
‘ಹರ್ಷ ಭುವಿ ಮದುವೆ ಅದೇ ಮುಹೂರ್ತದಲ್ಲಿ ನಡೆಯುತ್ತೆ’; ಸಾನಿಯಾ ವಿರುದ್ಧ ತಿರುಗಿ ಬಿದ್ದ ವರುಧಿನಿ
Image
ಮತ್ತೊಂದು ಚಿತ್ರ ಒಪ್ಪಿಕೊಂಡ ನಟ ಕಿರಣ್ ರಾಜ್; ‘ಭರ್ಜರಿ ಗಂಡು’ ನಿರ್ದೇಶಕನ ಜತೆ ಹೊಸ ಸಿನಿಮಾ
Image
‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?
Image
‘ಕನ್ನಡತಿ’ ಹೀರೋ ಕಿರಣ್​ ರಾಜ್​ ದುಡಿಮೆಯ ಶೇ.40ರಷ್ಟು ಹಣ ಬಡವರಿಗೆ ಮೀಸಲು

ಇದನ್ನೂ ಓದಿ: ಭುವಿ-ಹರ್ಷನ ಮದುವೆಗೆ ವಿಶೇಷ ಅತಿಥಿ ಎಂಟ್ರಿ; ವಿವಾಹ ಕೆಲಸಕ್ಕೆ ‘ಗೀತಾ’ ಧಾರಾವಾಹಿ ವಿಜಯ್ ಹಾಜರಿ

ಹರ್ಷ ಹಾಗೂ ಭುವಿ ದೂರವಾಣಿ ಮೂಲಕ ಮಾತನಾಡುತ್ತಿದ್ದರು. ಆಗ, ‘ಹಾಲಿನವರಿಗೆ ಕೊಡುವ ಹಣ ಇಷ್ಟು ಬಾಕಿ ಇದೆ’ ಎಂದು ಭುವಿಯ ಬಳಿ ಆಕೆಯ ತಂಗಿ ಬಿಂದು ಹೇಳಿದಳು. ಇದು ಹರ್ಷನಿಗೆ ಕೇಳಿದೆ. ಈ ವೇಳೆ ಹರ್ಷ ‘ಏನಾದರೂ ತೊಂದರೆ ಇದ್ದರೆ ನನಗೆ ಹೇಳಿ. ಚಿಕ್ಕದಾಗಿ ಹರ್ಷ ಎಂದು ಕೂಗಿದರೂ ಸಾಕು. ನಾನು ನಿಮ್ಮ ಎದುರು ಬಂದು ನಿಲ್ಲುತ್ತೇನೆ’ ಎಂದಿದ್ದಾನೆ. ಇದಕ್ಕೆ ಭುವಿ ನೇರವಾಗಿಯೇ ಉತ್ತರ ನೀಡಿದ್ದಾಳೆ. ‘ನನಗೆ ಏನೇ ತೊಂದರೆ ಆದರೂ ನೀವು ಬರ್ತೀರಾ ಅನ್ನೋದು ಗೊತ್ತಿದೆ. ಆ ವಿಷಯದಲ್ಲಿ ಸಂಶಯ ಇಲ್ಲ. ಆದರೆ, ಕೆಲ ಯುದ್ಧಗಳನ್ನು ನಾನೇ ಗೆಲ್ಲಬೇಕಿದೆ’ ಎಂದಿದ್ದಾಳೆ ಭುವಿ. ಈ ಮೂಲಕ ಈ ಸಮಸ್ಯೆಯಿಂದ ತಾವೇ ಹೊರ ಬರುವ ಬಗ್ಗೆ ಹೇಳಿಕೊಂಡಿದ್ದಾಳೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ