‘ಹರ್ಷ ಭುವಿ ಮದುವೆ ಅದೇ ಮುಹೂರ್ತದಲ್ಲಿ ನಡೆಯುತ್ತೆ’; ಸಾನಿಯಾ ವಿರುದ್ಧ ತಿರುಗಿ ಬಿದ್ದ ವರುಧಿನಿ

TV9 Digital Desk

| Edited By: Rajesh Duggumane

Updated on: May 28, 2022 | 7:50 AM

ಹರ್ಷ ಹಾಗೂ ಭುವಿ ಮದುವೆ ಆಗೋದು ವರುಧಿನಿಗೂ ಇಷ್ಟ ಇಲ್ಲ. ಭುವಿ ಹಾಗೂ ಹರ್ಷ ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಕೇಳಿ ವರುಧಿನಿ ಕೋಪಗೊಂಡಿದ್ದಳು. ಆದರೆ, ದಿನಕಳೆದಂತೆ ಆಕೆ ಕೊಂಚ ಬದಲಾಗುತ್ತಿದ್ದಾಳೆ.

‘ಹರ್ಷ ಭುವಿ ಮದುವೆ ಅದೇ ಮುಹೂರ್ತದಲ್ಲಿ ನಡೆಯುತ್ತೆ’; ಸಾನಿಯಾ ವಿರುದ್ಧ ತಿರುಗಿ ಬಿದ್ದ ವರುಧಿನಿ
ವರು-ಸಾನಿಯಾ

‘ಕನ್ನಡತಿ’ ಧಾರಾವಾಹಿಯ (Kannadathi Serial) ಪ್ರಮುಖ ಪಾತ್ರಧಾರಿಗಳಾದ ಹರ್ಷ ಹಾಗೂ ಭುವಿ ಮದುವೆಗೆ (Harsha And Bhuvi Wedding) ಹಲವು ವಿಘ್ನಗಳು ಎದುರಾಗುವ ಸೂಚನೆ ಸಿಕ್ಕಿದೆ. ಹರ್ಷನ ತಾಯಿ ರತ್ನಮಾಲಾಗೆ ಆರೋಗ್ಯ ಕೈ ಕೊಟ್ಟಿದೆ. ಅವರು ಯಾವಾಗ ಬೇಕಾದರೂ ಕೊನೆಯುಸಿರು ತೆಗೆಯಬಹುದು ಎನ್ನುವ ಎಚ್ಚರಿಕೆ ವೈದ್ಯರಿಂದ ಬಂದಿದೆ. ಇದು ಹರ್ಷ ಹಾಗೂ ಭುವಿ ಮದುವೆಗೆ ಇರುವ ಮೊದಲ ಕಂಟಕ. ಇದಲ್ಲದೆ ಸಾನಿಯಾ ಹಾಗೂ ವರುಧಿನಿ ಒಟ್ಟಾಗಿ ಮದುವೆ ನಿಲ್ಲಿಸಲು ಪ್ಲ್ಯಾನ್ ರೂಪಿಸುತ್ತಿದ್ದಾರೆ. ಆದರೆ, ಕೊನೇ ಕ್ಷಣದಲ್ಲಿ ಸಾನಿಯಾಗೆ ವರುಧಿನಿ ಕೈ ಕೊಟ್ಟಿದ್ದಾಳೆ. ಮದುವೆ ಯಾವುದೇ ಕಾರಣಕ್ಕೂ ನಡೆದೇ ನಡೆಯುತ್ತದೆ ಎನ್ನುವ ಮಾತನ್ನು ಹೇಳಿದ್ದಾಳೆ. ಇದರಿಂದ ಸಾನಿಯಾ ಆತಂಕಕ್ಕೆ ಒಳಗಾಗಿದ್ದಾಳೆ. ಮುಂದೇನಾಗುತ್ತದೆ ಅನ್ನೋದು ಸದ್ಯದ ಕುತೂಹಲ.

ಹರ್ಷ ಹಾಗೂ ಭುವಿ ಮದುವೆ ಆಗೋದು ವರುಧಿನಿಗೂ ಇಷ್ಟ ಇಲ್ಲ. ಭುವಿ ಹಾಗೂ ಹರ್ಷ ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಕೇಳಿ ವರುಧಿನಿ ಕೋಪಗೊಂಡಿದ್ದಳು. ಆದರೆ, ದಿನಕಳೆದಂತೆ ಆಕೆ ಕೊಂಚ ಬದಲಾಗುತ್ತಿದ್ದಾಳೆ. ಹರ್ಷ ಹಾಗೂ ಭುವಿ ಜೋಡಿಯನ್ನು ಒಪ್ಪಿಕೊಳ್ಳುತ್ತಿದ್ದಾಳೆ. ಇದು ಸಾನಿಯಾ ಚಿಂತೆಗೆ ಕಾರಣವಾಗಿದೆ. ಅಲ್ಲದೆ, ಈಗ ಆಕೆ ಹೇಳಿರುವ ನೇರ ಮಾತಿನಿಂದ ಸಾನಿಯಾ ಚಿಂತೆಗೀಡಾಗಿದ್ದಾಳೆ.

ಹರ್ಷನ ಮದುವೆ ಜವಾಬ್ದಾರಿಯನ್ನು ವರುಧಿನಿ ವಹಿಸಿಕೊಂಡಿದ್ದಾಳೆ. ಇದಕ್ಕೆ ದೊಡ್ಡ ಮಟ್ಟದಲ್ಲಿ ತಯಾರಿ ನಡೆಯುತ್ತಿದೆ. ಇದನ್ನು ಕಂಡು ಸಾನಿಯಾ ಅಚ್ಚರಿಗೊಂಡಳು. ನಿಲ್ಲಿಸುವ ಮದುವೆಗೆ ಯಾಕಿಷ್ಟು ತಯಾರಿ ಎಂದು ಕೇಳಿದಳು. ಇದಕ್ಕೆ ಉತ್ತರಿಸಿದ ವರುಧಿನಿ, ‘ಹೀರೋನ ಮದುವೆ ನಡೆದೇ ನಡೆಯುತ್ತದೆ. ಯಾವುದೇ ಅಡ್ಡಿ ಆಗೋಕೆ ನಾನು ಬಿಡುವುದಿಲ್ಲ’ ಎಂದಿದ್ದಾಳೆ. ಈ ಮಾತನ್ನು ಕೇಳಿ ಸಾನಿಯಾ ಚಿಂತೆಗೆ ಒಳಗಾಗಿದ್ದಾಳೆ.

ಇದನ್ನೂ ಓದಿ

ವರುಧಿನಿ ಹಾಗೂ ಭುವಿ ಮೊದಲಿನಿಂದಲೂ ಗೆಳತಿಯರು. ವರುಧಿನಿಯನ್ನು ಹೆಚ್ಚು ನಂಬಬೇಡ ಎಂದು ಸಾನಿಯಾ ತಾಯಿ ಮೊದಲೇ ಎಚ್ಚರಿಕೆ ನೀಡಿದ್ದಳು. ಆದರೆ, ಸಾನಿಯಾ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಈಗ ಅವಳಿಗೆ ಸಂಕಟ ಎದುರಾಗಿದೆ.

ಇದನ್ನೂ ಓದಿ:  ಬೆಟ್ಟದಿಂದ ಭುವಿಯನ್ನು ತಳ್ಳೇ ಬಿಟ್ಟ ಕಿಲ್ಲರ್; ವರುಧಿನಿಯಿಂದ ಮತ್ತಷ್ಟು ದೂರವಾದ ಹರ್ಷ

ಹರ್ಷ ಹಾಗೂ ಭುವಿ ಮದುವೆಗೂ ಮುನ್ನ ಭುವನೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಶೀಘ್ರದಲ್ಲೇ ಇವರ ಮದುವೆ ನಡೆಯಲಿದೆ. ಮದುವೆ ಆದ ಬಳಿಕ ಸಂಪೂರ್ಣ ಆಡಳಿತ ಭುವಿಯ ಪಾಲಾಗಲಿದೆ. ಇದನ್ನು ಸಾನಿಯಾ ಹೇಗೆ ಸ್ವೀಕರಿಸುತ್ತಾಳೆ ಅನ್ನೋದು ಸದ್ಯದ ಕುತೂಹಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada