ಭುವಿಗೆ ತಿಳಿದೇ ಹೋಯ್ತು ಸಾನಿಯಾ ಅಸಲಿ ಮುಖ; ಮದುವೆಗೂ ಮುನ್ನ ಎಲ್ಲವನ್ನೂ ಅರಿತುಕೊಂಡ ಹರ್ಷನ ಪ್ರೇಯಸಿ

TV9 Digital Desk

| Edited By: Rajesh Duggumane

Updated on: May 13, 2022 | 7:00 AM

ರತ್ನಮಾಲಾ ಆರೋಗ್ಯ ಹೀಗೆಯೇ ಇದ್ದರೆ ಅವರು ಶೀಘ್ರವೇ ಕೊನೆಯುಸಿರು ಎಳೆಯಬಹುದು ಎಂಬುದು ವೈದ್ಯರ ಅಭಿಪ್ರಾಯ. ಈ ವಿಚಾರ ಸಾನಿಯಾಗೆ ತಿಳಿದಿದೆ. ರತ್ನಮಾಲಾ ಸತ್ತರೆ ಮದುವೆ ನಿಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿ ಅವಳಿದ್ದಾಳೆ.

ಭುವಿಗೆ ತಿಳಿದೇ ಹೋಯ್ತು ಸಾನಿಯಾ ಅಸಲಿ ಮುಖ; ಮದುವೆಗೂ ಮುನ್ನ ಎಲ್ಲವನ್ನೂ ಅರಿತುಕೊಂಡ ಹರ್ಷನ ಪ್ರೇಯಸಿ
ಭುವಿ-ಸಾನಿಯಾ

Follow us on

‘ಕನ್ನಡತಿ’ ಧಾರಾವಾಹಿ (Kannadathi Serial) ಹೊಸಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಭುವಿಯನ್ನು (Bhuvi) ಹರ್ಷ ಪ್ರೀತಿಸಲು ಆರಂಭಿಸಿದ್ದ. ಆಕೆಯ ಎದುರು ಪ್ರೀತಿಯನ್ನೂ ವ್ಯಕ್ತಪಡಿಸಿದ್ದ. ಭುವಿ ಇದನ್ನು ಒಪ್ಪಿಯೂ ಆಗಿದೆ. ಎಲ್ಲರ ಸಮ್ಮುಖದಲ್ಲೇ ಹರ್ಷ ಹಾಗೂ ಭುವಿ ನಿಶ್ಚಿತಾರ್ಥ ನೆರವೇರಿತ್ತು. ಈಗ ಭುವಿ ಹಾಗೂ ಹರ್ಷನ ಮದುವೆ ನೆರವೇರುತ್ತಿದೆ. ಲಗ್ನ ಪತ್ರಿಕೆ ಶಾಸ್ತ್ರ ನೆರವೇರಿದೆ. ಹೀಗಾಗಿ, ಶೀಘ್ರವೇ ಹರ್ಷ ಹಾಗೂ ಭುವಿ ಹಸೆಮಣೆ ಏರಲಿದ್ದಾರೆ. ಇವರ ವಿವಾಹವನ್ನು ತಡೆಯಲು ಸಾನಿಯಾ ಹಾಗೂ ವರುಧಿನಿ ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಸಾನಿಯಾ ಅಸಲಿ ಮುಖ ಏನು ಎಂಬುದು ಭುವಿಗೆ ಮನದಟ್ಟಾಗಿದೆ.

ಹರ್ಷನ ತಾಯಿ, ಭುವಿಯ ಭಾವಿ ಅತ್ತೆ ರತ್ನಮಾಲಾಗೆ ಆರೋಗ್ಯ ಕೆಟ್ಟಿದೆ. ರತ್ನಮಾಲಾ ಆರೋಗ್ಯ ಹೀಗೆಯೇ ಇದ್ದರೆ ಅವರು ಶೀಘ್ರವೇ ಕೊನೆಯುಸಿರು ಎಳೆಯಬಹುದು ಎಂಬುದು ವೈದ್ಯರ ಅಭಿಪ್ರಾಯ. ಈ ವಿಚಾರ ಸಾನಿಯಾಗೆ ತಿಳಿದಿದೆ. ರತ್ನಮಾಲಾ ಸತ್ತರೆ ಮದುವೆ ನಿಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿ ಅವಳಿದ್ದಾಳೆ. ಈ ಮಧ್ಯೆ ನಡೆದಿರುವ ಒಂದು ಘಟನೆ ಸಾನಿಯಾಳ ನಿಜವಾದ ಮುಖವನ್ನು ಬಯಲು ಮಾಡಿದೆ.

ಸಾನಿಯಾ ಸಮಯಕ್ಕೆ ತಕ್ಕಂತೆ ಬದಲಾಗುವವಳು. ತನಗೆ ಲಾಭ ಇದೆ ಎಂದರೆ ಏನೂ ಬೇಕಾದರೂ ಮಾಡುತ್ತಾಳೆ. ಭುವಿಯ ಗೆಳೆತನ ಬೆಳೆಸಿಕೊಳ್ಳುವಂತೆ ಸಾನಿಯಾ ತಾಯಿ ಸೂಚನೆ ನೀಡಿದ್ದಾಳೆ. ಅದರಂತೆ ಪ್ರಯತ್ನ ಮಾಡುತ್ತಿದ್ದಾಳೆ. ಮಂಗಳ ಪತ್ರದ ಶಾಸ್ತ್ರದ ದಿನ ಸಾನಿಯಾ ಆಡಿದ ಮಾತುಗಳು ಭುವಿಗೆ ಬೇರೆಯದೇ ಅರ್ಥ ನೀಡಿದೆ.

ಇದನ್ನೂ ಓದಿ

ಸಾಲದಿಂದಾಗಿ ಬೇರೆಯವರ ಕೈಯಲ್ಲಿರುವ ತನ್ನ ತಂದೆಗೆ ಸೇರಿದ ಮನೆಯನ್ನು ಮರಳಿ ಪಡೆಯಲು ಭುವಿ ಪ್ರಯತ್ನಿಸಿದ್ದಳು. ಆದರೆ, ಹಣ ಇಲ್ಲದ ಕಾರಣ ಅದು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಹರ್ಷನೇ ಹಣ ಕೊಟ್ಟು ಆ ಮನೆ ಪಡೆದುಕೊಂಡಿದ್ದ. ಆ ಸಂದರ್ಭದಲ್ಲಿ ಭುವಿಗೆ ಸಾನಿಯಾ ಚುಚ್ಚಿ ಮಾತನಾಡಿದ್ದಳು. ಮದುವೆ ಆಗುವ ಮೊದಲೇ ಹಣ ಪಡೆದೆಯಲ್ಲ ಎಂಬರ್ಥದಲ್ಲಿ ಮಾತನಾಡಿದ್ದಳು. ಈಗ ಭುವಿ ಫ್ರೆಂಡ್​ಶಿಪ್​ ಬೆಳೆಸಿಕೊಳ್ಳಲು ಹವಣಿಸುತ್ತಿರುವ ಸಾನಿಯಾ ಆ ದಿನ ಹೇಳಿದ ಮಾತಿಗೆ ತದ್ವಿರುದ್ಧವಾಗಿ ಮಾತನಾಡಿದ್ದಾಳೆ. ಇದರಿಂದ ಸಾನಿಯಾ ಅಸಲಿ ಮುಖ ಯಾವುದು ಎಂಬುದು ಭುವಿಗೆ ಗೊತ್ತಾಗಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Related Stories

Click on your DTH Provider to Add TV9 Kannada