ಐಸಿಯುನಲ್ಲಿ ಭುವಿ: ಸಾನಿಯಾಗೆ ತಿರುಮಂತ್ರ ಆಯ್ತು ಪ್ಲ್ಯಾನ್​; ಮುಂದಿದೆ ಮಾರಿ ಹಬ್ಬ

ಸಾನಿಯಾಗೆ ವುರಧಿನಿ ಮೇಲೆ ಎಲ್ಲಿಲ್ಲದ ನಂಬಿಕೆ. ಹರ್ಷನಿಗೋಸ್ಕರ ಆಕೆ ಏನೂ ಮಾಡೋಕೂ ರೆಡಿ ಎಂದುಕೊಂಡಿದ್ದಾಳೆ. ವರುಧಿನಿಗೆ ಹರ್ಷನ ಮೇಲಿರುವಷ್ಟೇ ಪ್ರೀತಿ ಭುವಿ ಮೇಲೂ ಇದೆ.

ಐಸಿಯುನಲ್ಲಿ ಭುವಿ: ಸಾನಿಯಾಗೆ ತಿರುಮಂತ್ರ ಆಯ್ತು ಪ್ಲ್ಯಾನ್​; ಮುಂದಿದೆ ಮಾರಿ ಹಬ್ಬ
ಕನ್ನಡತಿ ಧಾರಾವಾಹಿ ಪಾತ್ರಗಳು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 22, 2022 | 1:18 PM

‘ಕನ್ನಡತಿ’ ಧಾರಾವಾಹಿ (Kannadathi Serial) ಪ್ರಮುಖ ಘಟ್ಟ ತಲುಪಿದೆ. ಸಾನಿಯಾ ಮಾಡಿದ ಪ್ಲ್ಯಾನ್ ಆಕೆಗೆ ತಿರುಮಂತ್ರವಾಗುವ ಸೂಚನೆ ಸಿಕ್ಕಿದೆ. ಭುವಿಯನ್ನು ಹತ್ಯೆ ಮಾಡಲು ಸಾನಿಯಾ ಪ್ಲ್ಯಾನ್ ಒಂದನ್ನು ರೂಪಿಸಿದ್ದಳು. ಆದರೆ, ಅವಳ ದುರಾದೃಷ್ಟವೋ ಏನೋ ಭುವಿ ಬದುಕಿದ್ದಾಳೆ. ಸದ್ಯ ಐಸಿಯುನಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಭುವಿಯನ್ನು ಹತ್ಯೆ ಮಾಡಿದ್ರೆ ವರುಗೆ ಹರ್ಷ ಹತ್ತಿರ ಆಗುತ್ತಾನೆ ಅನ್ನೋದು ಸಾನಿಯಾ ಪ್ಲ್ಯಾನ್ ಆಗಿತ್ತು. ಆದರೆ, ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಭುವಿ ಈ ಸ್ಥಿತಿಗೆ ಬರಲು ವರುಧಿನಿ ಕಾರಣ ಅನ್ನೋದು ಹರ್ಷನ ನಂಬಿಕೆ. ಈ ಕಾರಣಕ್ಕೆ ಆತ ವರುಧಿನಿ ಜತೆಗೆ ಸರಿಯಾಗಿ ಮಾತನಾಡುತ್ತಿಲ್ಲ. ಇದರಿಂದ ವರುಗೆ ಸಿಟ್ಟು ನೆತ್ತಿಗೇರಿದೆ. ಸಾನಿಯಾ ವಿರುದ್ಧ ತಿರುಗಿ ಬೀಳುವ ಸೂಚನೆ ನೀಡಿದ್ದಾಳೆ.

ಹರ್ಷ ಹಾಗೂ ಭುವಿಯ ನಿಶ್ಚಿತಾರ್ಥ ನೆರವೇರಿದೆ. ಈ ವಿಚಾರದಲ್ಲಿ ಅತಿ ಹೆಚ್ಚು ಉರಿದುಕೊಂಡಿದ್ದು ಸಾನಿಯಾ ಹಾಗೂ ವರುಧಿನಿ. ಈಗ ಇಬ್ಬರೂ ಒಂದಾಗಿದ್ದಾರೆ. ಭುವಿಯನ್ನು ಹತ್ಯೆ ಮಾಡಲು ಸಾನಿಯಾ ಪ್ಲ್ಯಾನ್​ ರೂಪಿಸಿದ್ದಳು. ಅಂತೆಯೇ ಬೆಟ್ಟದ ಮೇಲಿರುವಾಗ ಭುವಿಯನ್ನು ಸುಪಾರಿ ಕಿಲ್ಲರ್ ತಳ್ಳಿದ್ದಾನೆ. ಭುವಿಯ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಆಕೆಯನ್ನು ಐಸಿಯುನಲ್ಲಿ ಅಡ್ಮಿಟ್ ಮಾಡಲಾಗಿದೆ. ಭುವಿ ಬೀಳುವ ಸಂದರ್ಭದಲ್ಲಿ ಆಕೆಯ ಜತೆ ಇದ್ದಿದ್ದು ವರುಧಿನಿ. ಈ ಕಾರಣಕ್ಕೆ ವರುಧಿನಿ ವಿರುದ್ಧ ಹರ್ಷ ಸಿಟ್ಟಾಗಿದ್ದಾನೆ.

‘ಭುವಿ ಬೆಟ್ಟದಿಂದ ಬೀಳುವಾಗ ನಾನು ಅಲ್ಲಿರಲಿಲ್ಲ. ಯಾರೋ ಬಂದು ತಳ್ಳಿದ್ದಾರೆ’ ಎಂದು ಹರ್ಷನಿಗೆ ವಿವರಿಸಲು ಹೋದಳು ವರು. ಆದರೆ, ಇದನ್ನು ಆತ ಕೇಳುವ ಸ್ಥಿತಿಯಲ್ಲಿರಲಿಲ್ಲ. ‘ಭುವಿಯ ಪ್ರಾಣಕ್ಕೆ ಏನಾದರೂ ತೊಂದರೆ ಆದರೆ ಅದಕ್ಕೆ ನೇರ ಹೊಣೆ ನಿಮ್ಮದೆ’ ಎಂದು ವರುಧಿನಿಗೆ ಹರ್ಷ ಹೇಳಿದ್ದಾನೆ.

ಹರ್ಷನಿಗೆ ಹತ್ತಿರ ಆಗಬೇಕು ಎಂಬುದು ವರುಧಿನಿಯ ಆಲೋಚನೆ ಆಗಿತ್ತು. ಆದರೆ, ಈ ಘಟನೆಯಿಂದ ವರುನಿಂದ ದೂರ ಆಗುತ್ತಿದ್ದಾನೆ ಹರ್ಷ. ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿಲ್ಲ. ಇದು ವರುವಿನ ಅಸಮಾಧಾನಕ್ಕೆ ಕಾರಣ ಆಗಿದೆ. ಇದಕ್ಕೆ ಕಾರಣ ಸಾನಿಯಾ ಅನ್ನೋದು ಆಕೆಗೆ ಸ್ಪಷ್ಟವಾಗಿದೆ. ಹೀಗಾಗಿ, ಆಕೆಯ ವಿರುದ್ಧ ಸಿಡಿದೆದ್ದಿದ್ದಾಳೆ ವರು. ಮುಂದಿನ ದಿನಗಳಲ್ಲಿ ಸಾನಿಯಾ ವಿರುದ್ಧ ಸಮರ ಸಾರಿದರೂ ಅಚ್ಚರಿ ಏನಿಲ್ಲ.

ಸಾನಿಯಾಗೆ ವುರಧಿನಿ ಮೇಲೆ ಎಲ್ಲಿಲ್ಲದ ನಂಬಿಕೆ. ಹರ್ಷನಿಗೋಸ್ಕರ ಆಕೆ ಏನೂ ಮಾಡೋಕೂ ರೆಡಿ ಎಂದುಕೊಂಡಿದ್ದಾಳೆ. ವರುಧಿನಿಗೆ ಹರ್ಷನ ಮೇಲಿರುವಷ್ಟೇ ಪ್ರೀತಿ ಭುವಿ ಮೇಲೂ ಇದೆ. ‘ವರುಧಿನಿಯನ್ನು ನಂಬಬೇಡ’ ಎನ್ನುವ ಎಚ್ಚರಿಕೆಯನ್ನು ಸಾನಿಯಾಗೆ ಆಕೆಯ ತಾಯಿ ಮೊದಲೇ ನೀಡಿದ್ದಳು. ಆದರೆ, ಅದನ್ನು ಆಕೆ ಕೇಳಿರಲಿಲ್ಲ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:  ಬೆಟ್ಟದಿಂದ ಭುವಿಯನ್ನು ತಳ್ಳೇ ಬಿಟ್ಟ ಕಿಲ್ಲರ್; ವರುಧಿನಿಯಿಂದ ಮತ್ತಷ್ಟು ದೂರವಾದ ಹರ್ಷ

ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ