AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭುವಿ-ಹರ್ಷನ ಮದುವೆಗೆ ವಿಶೇಷ ಅತಿಥಿ ಎಂಟ್ರಿ; ವಿವಾಹ ಕೆಲಸಕ್ಕೆ ‘ಗೀತಾ’ ಧಾರಾವಾಹಿ ವಿಜಯ್ ಹಾಜರಿ

ವಿಶೇಷ ಹಬ್ಬದ ಸಂದರ್ಭಗಳಲ್ಲಿ ಅಥವಾ ಯಾರದ್ದಾದರೂ ಮದುವೆ ಇದೆ ಎನ್ನುವಾಗ ಎರಡು ಧಾರಾವಾಹಿಗಳು ಒಂದಾಗುತ್ತವೆ. ಇದರಿಂದ ಪ್ರೇಕ್ಷಕರಿಗೆ ಡಬಲ್ ಮನರಂಜನೆ ಸಿಗುತ್ತದೆ.

ಭುವಿ-ಹರ್ಷನ ಮದುವೆಗೆ ವಿಶೇಷ ಅತಿಥಿ ಎಂಟ್ರಿ; ವಿವಾಹ ಕೆಲಸಕ್ಕೆ ‘ಗೀತಾ’ ಧಾರಾವಾಹಿ ವಿಜಯ್ ಹಾಜರಿ
ಭುವಿ-ಹರ್ಷ-ವಿಜಯ್
TV9 Web
| Edited By: |

Updated on:Jun 06, 2022 | 1:36 PM

Share

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಭುವಿ ಹಾಗೂ ಹರ್ಷ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಹರ್ಷ ಹಾಗೂ ಭುವಿ ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದೆ. ಚಪ್ಪರ ಹಾಕುವ ಕಾರ್ಯಗಳು ಭರದಿಂದ ಸಾಗುತ್ತಿವೆ. ಈ ಮದುವೆ ನಿಲ್ಲಿಸೋಕೆ ಕೆಲ ಪ್ರಯತ್ನಗಳು ತೆರೆಹಿಂದೆ ನಡೆಯುತ್ತಿವೆ. ಹೀಗಿರುವಾಗಲೇ ಹರ್ಷನ ಮನೆಗೆ ವಿಶೇಷ ಅತಿಥಿಯ ಎಂಟ್ರಿ ಆಗಿದೆ. ‘ಗೀತಾ’ ಧಾರಾವಾಹಿಯ (Geetha Serial) ವಿಜಯ್ (ಧನುಷ್ ಗೌಡ) ಮದುವೆಗೆ ಬಂದಿದ್ದಾನೆ. ಈ ಮೂಲಕ ವಿವಾಹದ ಕಳೆಯನ್ನು ಹೆಚ್ಚಿಸಿದ್ದಾನೆ.

ಧಾರಾವಾಹಿ ತಂಡಗಳು ಒಂದು ಕುಟುಂಬದಂತೆ ಆಗಿಬಿಟ್ಟಿವೆ. ತೆರೆಮೇಲೆ ನಡೆಯುವ ಕಥೆಗೂ ವೀಕ್ಷಕರಿಗೂ ಒಂದು ಕನೆಕ್ಷನ್ ಬೆಳೆದಿರುತ್ತದೆ. ಈ ಕಾರಣಕ್ಕೆ ವಿಶೇಷ ಹಬ್ಬದ ಸಂದರ್ಭಗಳಲ್ಲಿ ಅಥವಾ ಯಾರದ್ದಾದರೂ ಮದುವೆ ಇದೆ ಎನ್ನುವಾಗ ಎರಡು ಧಾರಾವಾಹಿಗಳು ಒಂದಾಗುತ್ತವೆ. ಇದರಿಂದ ಪ್ರೇಕ್ಷಕರಿಗೆ ಡಬಲ್ ಮನರಂಜನೆ ಸಿಗುತ್ತದೆ. ಕಲರ್ಸ್​ ಕನ್ನಡ ವಾಹಿನಿ ಈ ಮೊದಲು ಅನೇಕ ಬಾರಿ ಈ ರೀತಿಯ ಪ್ರಯತ್ನಗಳನ್ನು ಮಾಡಿ ಯಶಸ್ಸು ಕಂಡಿದೆ. ಈಗ ‘ಕನ್ನಡತಿ’ ಧಾರಾವಾಹಿಯ ಮದುವೆಯಲ್ಲೂ ಹೀಗೊಂದು ಪ್ರಯತ್ನ ನಡೆದಿದೆ.

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಗೆ ‘ಮುಂಗಾರು ಮಳೆ’ ಸಿನಿಮಾ ಟಚ್; ಹೊಸ ಅವತಾರದಲ್ಲಿ ಹರ್ಷ-ಭುವಿ
Image
ಮತ್ತೊಂದು ಚಿತ್ರ ಒಪ್ಪಿಕೊಂಡ ನಟ ಕಿರಣ್ ರಾಜ್; ‘ಭರ್ಜರಿ ಗಂಡು’ ನಿರ್ದೇಶಕನ ಜತೆ ಹೊಸ ಸಿನಿಮಾ
Image
‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?
Image
‘ಕನ್ನಡತಿ’ ಹೀರೋ ಕಿರಣ್​ ರಾಜ್​ ದುಡಿಮೆಯ ಶೇ.40ರಷ್ಟು ಹಣ ಬಡವರಿಗೆ ಮೀಸಲು

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆ ಆಗುತ್ತಿದ್ದಾರೆ. ಈ ಮದುವೆ ನಿಲ್ಲಿಸೋಕೆ ಸಾನಿಯಾ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾಳೆ. ಭುವಿ ಗೆಳತಿ ವರುಧಿನಿ ಕೂಡ ಒಂದು ಮಾಸ್ಟರ್ ಪ್ಲ್ಯಾನ್ ರೂಪಿಸಲು ಸಂಚು ರೂಪಿಸಿದ್ದಾಳೆ. ಹೀಗಿರುವಾಗಲೇ ‘ಗೀತಾ’ ಧಾರಾವಾಹಿಯ ವಿಜಯ್ ಆಗಮಿಸಿದ್ದಾನೆ.

‘ಗೀತಾ’ ಧಾರಾವಾಹಿಯಲ್ಲಿ ಸದ್ಯ ಗೀತಾ ಜೈಲಿನಿಂದ ಆಗಮಿಸಿದ್ದಾಳೆ. ಕಥೆ ಬೇರೆಯದೇ ಟ್ರ್ಯಾಕ್​ನಲ್ಲಿ ಸಾಗುತ್ತಿದೆ. ಈ ಕಾರಣಕ್ಕೆ ವಿಜಯ್ ಮಾತ್ರ ಮದುವೆಗೆ ಬಂದಿದ್ದಾನೆ. ಇನ್ನು, ‘ದೊರೆಸಾನಿ’ ಧಾರಾವಾಹಿ ಕಲಾವಿದರು ಭುವಿ ಮನೆಗೆ ಬಂದು ಮದುವೆ ಕೆಲಸಗಳಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಸಹಾಯ ನೋಡಿ ಭುವಿ ಭಾವುಕಳಾದಳು.

ಇದನ್ನೂ ಓದಿ: ‘ಹರ್ಷ ಭುವಿ ಮದುವೆ ಅದೇ ಮುಹೂರ್ತದಲ್ಲಿ ನಡೆಯುತ್ತೆ’; ಸಾನಿಯಾ ವಿರುದ್ಧ ತಿರುಗಿ ಬಿದ್ದ ವರುಧಿನಿ

‘ನಾನಿಲ್ಲದೆ ನೀನು ಮದುವೆ ಆಗಲೇಬಾರದು’ ಎಂದು ಭುವಿಯಿಂದ ವರುಧಿನಿ ಪ್ರಾಮಿಸ್ ಮಾಡಿಸಿಕೊಂಡಿದ್ದಾಳೆ. ಹರ್ಷನನ್ನು ತಾನೇ ಮದುವೆ ಆಗಬೇಕು ಎನ್ನುವ ಪ್ರಯತ್ನದಲ್ಲಿ ಅವಳಿದ್ದಾಳೆ. ಇದು ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:33 pm, Mon, 6 June 22

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು