AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಕ್ರಮ್’ ಸಿನಿಮಾ ನಿರ್ದೇಶಕ ಲೋಕೇಶ್​ ಕನಗರಾಜ್​ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್

ಸಿನಿಮಾ ಗೆದ್ದಾಗ ನಿರ್ದೇಶಕರಿಗೆ ಹೀರೋಗಳು ಅಥವಾ ನಿರ್ಮಾಪಕರು ದುಬಾರಿ ಉಡುಗೊರೆ ನೀಡುತ್ತಾರೆ. ಈ ಮೊದಲು ಕೂಡ ಈ ರೀತಿ ಆಗಿದೆ. ಈಗ ಕಮಲ್ ಹಾಸನ್ ಅವರು ಲೋಕೇಶ್​ಗೆ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಲೆಕ್ಸಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

‘ವಿಕ್ರಮ್’ ಸಿನಿಮಾ ನಿರ್ದೇಶಕ ಲೋಕೇಶ್​ ಕನಗರಾಜ್​ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್
ಲೋಕೇಶ್​ ಕನಗರಾಜ್​ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್Image Credit source: Twitter
TV9 Web
| Edited By: |

Updated on:Jun 07, 2022 | 8:59 PM

Share

‘ವಿಕ್ರಮ್​’ ಸಿನಿಮಾ (Vikram Movie) ಸೂಪರ್ ಹಿಟ್ ಆಗಿದೆ. ನಟ ಕಮಲ್ ಹಾಸನ್ ಅವರು (Kamal Haasan) ಈ ಸಿನಿಮಾ ಮೂಲಕ ಒಂದೊಳ್ಳೆಯ ಕಂಬ್ಯಾಕ್ ಮಾಡಿದ್ದಾರೆ. ಓರ್ವ ಹೀರೋಗೆ ಕಂಬ್ಯಾಕ್ ಮಾಡೋಕೆ ಯಾವೆಲ್ಲ ಅಂಶಗಳು ಬೇಕೋ ಅದು ಈ ಸಿನಿಮಾದಲ್ಲಿತ್ತು. ಹೀಗಾಗಿ, ಚಿತ್ರ ಸೂಪರ್ ಹಿಟ್ ಆಯಿತು. ವಿಶ್ವ ಮಟ್ಟದಲ್ಲಿ ಈ ಸಿನಿಮಾ ಕೇವಲ ನಾಲ್ಕು ದಿನದಲ್ಲಿ 200 ಕೋಟಿ ಕ್ಲಬ್​ ಸಮೀಪದಲ್ಲಿದೆ. ಈ ಸಿನಿಮಾದಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಶ್ರಮ ತುಂಬಾನೇ ದೊಡ್ಡದು. ಈ ಕಾರಣಕ್ಕೆ ಅವರಿಗೆ ನಟ ಕಮಲ್ ಹಾಸನ್ ಕಾರನ್ನು ಗಿಫ್ಟ್ ನೀಡಿದ್ದಾರೆ.

ಸಿನಿಮಾ ಗೆದ್ದಾಗ ನಿರ್ದೇಶಕರಿಗೆ ಹೀರೋಗಳು ಅಥವಾ ನಿರ್ಮಾಪಕರು ದುಬಾರಿ ಉಡುಗೊರೆ ನೀಡುತ್ತಾರೆ. ಈ ಮೊದಲು ಕೂಡ ಈ ರೀತಿ ಆಗಿದೆ. ಈಗ ಕಮಲ್ ಹಾಸನ್ ಅವರು ಲೋಕೇಶ್​ಗೆ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಲೆಕ್ಸಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಲೋಕೇಶ್​ಗೆ ಕಮಲ್ ಕೀ ಕೊಡುತ್ತಿರುವ ಫೋಟೋ ವೈರಲ್ ಆಗಿದೆ. ಈ ಕಾರು ಪಡೆಯಲು ಅವರು ಅರ್ಹರು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಮಾಸ್ ಮಸಾಲ ಅಂಶ ಇದ್ದ ಮಾತ್ರಕ್ಕೆ ಸಿನಿಮಾ ಗೆಲ್ಲುವುದಿಲ್ಲ. ‘ವಿಕ್ರಮ್​’ ಸಿನಿಮಾದಲ್ಲಿ ಮಾಸ್ ಅಂಶಗಳ ಜತೆಗೆ ಹಳೆಯ ಸಿನಿಮಾಗಳಿಗೆ ಕನೆಕ್ಷನ್​, ಭಾವನಾತ್ಮಕ ಅಂಶಗಳನ್ನು ಕೂಡ ಬೆರೆಸಲಾಗಿತ್ತು. ಈ ಕಾರಣಕ್ಕೆ ಸಿನಿಮಾ ಸೂಪರ್ ಹಿಟ್ ಆಗಿದೆ.

ಕಮಲ್​ ಹಾಸನ್​ಗೆ ದುಬಾರಿ ಸಂಭಾವನೆ:

ಇದನ್ನೂ ಓದಿ
Image
‘ವಿಕ್ರಮ್​’ ಚಿತ್ರಕ್ಕೆ ಭರ್ಜರಿ ಓಪನಿಂಗ್​; ಮೊದಲ ದಿನ ಕಮಲ್​ ಹಾಸನ್​ ಸಿನಿಮಾ ಗಳಿಸಿದ್ದೆಷ್ಟು?
Image
ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 200 ಕೋಟಿ ರೂಪಾಯಿ ಲಾಭ ಮಾಡಿದ ‘ವಿಕ್ರಮ್​’ ಸಿನಿಮಾ
Image
Vikram Twitter Review: ಮುಂಜಾನೆಯೇ ‘ವಿಕ್ರಮ್​’ ಚಿತ್ರ ನೋಡಿ ‘ಮ್ಯಾಜಿಕ್​’ ಅಂತ ಹೊಗಳಿದ ಪ್ರೇಕ್ಷಕರು
Image
ಕಮಲ್​ ಹಾಸನ್​ ನಟನೆಯ ‘ವಿಕ್ರಮ್​’ ಚಿತ್ರಕ್ಕೆ 13 ಕಡೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; ಸಿಕ್ಕ ಪ್ರಮಾಣಪತ್ರ ಯಾವುದು?

ಕಮಲ್​ ಹಾಸನ್​ ಅವರ ‘ರಾಜ್​ ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​’ ಬ್ಯಾನರ್​ ಮೂಲಕ ‘ವಿಕ್ರಮ್​’ ಸಿನಿಮಾ ಮೂಡಿಬಂದಿದೆ. ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಮೇಕಿಂಗ್​ ಕಂಡು ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಲಾವಿದರು ಮತ್ತು ತಂತ್ರಜ್ಞರ ಸಂಭಾವನೆಗೂ ಕೋಟ್ಯಂತರ ರೂಪಾಯಿ ಸುರಿಯಲಾಗಿದೆ. ಮೂಲಗಳ ಪ್ರಕಾರ, ಕಮಲ್​ ಹಾಸನ್​ ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಈ ಮೊದಲು ವರದಿ ಆಗಿತ್ತು.

ಕರ್ನಾಟಕದಲ್ಲಿ ಹೊಸ ದಾಖಲೆ

ತಮಿಳು ಹಾಗೂ ತೆಲುಗು ಸಿನಿಮಾಗಳಿಗೆ ಕರ್ನಾಟಕದಲ್ಲಿ ದೊಡ್ಡ ಮಾರುಕಟ್ಟೆ ಇದೆ ಎಂಬುದು ಈ ಮೊದಲೇ ಸಾಬೀತಾಗಿದೆ. ‘ವಿಕ್ರಮ್​’ ಸಿನಿಮಾದಲ್ಲಿ ಈ ಟ್ರೆಂಡ್ ಮುಂದುವರಿದಿದೆ. ಬೆಂಗಳೂರು ಸೇರಿ ಕರ್ನಾಟಕದ ಅನೇಕ ಕಡೆಗಳಲ್ಲಿ ‘ವಿಕ್ರಮ್’ ಸಿನಿಮಾ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಈ ವರ್ಷ ಕರ್ನಾಟಕದ ಬಾಕ್ಸ್ ಆಫೀಸ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತಮಿಳು ಸಿನಿಮಾ ಎನ್ನುವ ಖ್ಯಾತಿ ‘ವಿಕ್ರಮ್’ಗೆ ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:16 pm, Tue, 7 June 22

Follow Us
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!