Chiranjeevi Sarja: ಚಿತ್ರರಂಗಕ್ಕೆ ಚಿರು ಪುತ್ರ ರಾಯನ್​ ರಾಜ್​ ಸರ್ಜಾ ಎಂಟ್ರಿ ನೀಡುವ ಬಗ್ಗೆ ಅರ್ಜುನ್​ ಸರ್ಜಾ ಹೇಳಿದ್ದೇನು?

Chiranjeevi Sarja: ಚಿತ್ರರಂಗಕ್ಕೆ ಚಿರು ಪುತ್ರ ರಾಯನ್​ ರಾಜ್​ ಸರ್ಜಾ ಎಂಟ್ರಿ ನೀಡುವ ಬಗ್ಗೆ ಅರ್ಜುನ್​ ಸರ್ಜಾ ಹೇಳಿದ್ದೇನು?

TV9 Web
| Updated By: ಮದನ್​ ಕುಮಾರ್​

Updated on: Jun 08, 2022 | 9:14 AM

Raayan Raj Sarja: ಚಿರಂಜೀವಿ ಸರ್ಜಾ ರೀತಿಯಲ್ಲಿ ಅವರ ಪುತ್ರ ರಾಯನ್​ ರಾಜ್​ ಸರ್ಜಾನನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸಲು ಅರ್ಜುನ್​ ಸರ್ಜಾ ಕನಸು ಕಂಡಿದ್ದಾರೆ. ಆ ಬಗ್ಗೆ ಅವರು ಮಾತನಾಡಿದ್ದಾರೆ.

ಅರ್ಜುನ್ ಸರ್ಜಾ ಅವರದ್ದು ಸಿನಿಮಾ ಹಿನ್ನೆಲೆಯ ಕುಟುಂಬ. ಅವರ ಸೋದರಳಿಯ ಚಿರಂಜೀವಿ ಸರ್ಜಾ (Chiranjeevi Sarja) ಅವರು ಚಿತ್ರರಂಗದಲ್ಲಿ ಸ್ಟಾರ್​ ನಟ ಆಗಿದ್ದರು. ಆದರೆ ಅವರು ಹೃದಯಾಘಾತದಿಂದ ಅಕಾಲಿಕ ಮರಣಹೊಂದಿದ್ದು ನೋವಿನ ಸಂಗತಿ. ಚಿರು ಅವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯವನ್ನು ಕುಟುಂಬದವರು ಮಂಗಳವಾರ (ಜೂನ್​ 7) ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ ದಂಪತಿಯ ಪುತ್ರ ರಾಯನ್​ ರಾಜ್​ ಸರ್ಜಾ (Raayan Raj Sarja)​ ಕುರಿತು ಅರ್ಜುನ್​ ಸರ್ಜಾ ಅವರು ಮಾತನಾಡಿದ್ದಾರೆ. ‘ರಾಜಮಾರ್ತಾಂಡ’ ಸಿನಿಮಾದಲ್ಲಿ ರಾಯನ್ ನಟಿಸಿದ್ದಾನೆ. ಮುಂದಿನ ದಿನಗಳಲ್ಲಿ ಆತನನ್ನು ಅದ್ದೂರಿಯಾಗಿ ಚಿತ್ರರಂಗದಲ್ಲಿ ಲಾಂಚ್​ ಮಾಡುವ ಕನಸನ್ನು ಅರ್ಜುನ್​ ಸರ್ಜಾ ಇಟ್ಟುಕೊಂಡಿದ್ದಾರೆ. ‘ಶಕ್ತಿ ಇದ್ದರೆ ನಾನೇ ಅವನನ್ನು ಲಾಂಚ್​ ಮಾಡುತ್ತೇನೆ. ಆಗ ಅವನ 100 ಅಡಿ ಕಟೌಟ್​ ನೋಡುತ್ತೇನೆ’ ಎಂದು ಅರ್ಜುನ್​ ಸರ್ಜಾ (Arjun Sarja) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.