AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shilpa Shetty Birthday: ಶಿಲ್ಪಾ ಶೆಟ್ಟಿಗೆ ಬರ್ತ್​ಡೇ ಸಂಭ್ರಮ; ಆ ಒಂದು ವಿಚಾರಕ್ಕೆ ಭಿನ್ನವಾಗಿ ನಿಲ್ಲುತ್ತಾರೆ ಕರಾವಳಿ ಬೆಡಗಿ

ರಾಜ್​ ಕುಂದ್ರಾ ಬಂಧನಕ್ಕೆ ಒಳಗಾದ ನಂತರದಲ್ಲಿ ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾದಿಂದ ಹಾಗೂ ಕಿರುತೆರೆ ಕಾರ್ಯಕ್ರಮದಿಂದ ಬ್ರೇಕ್ ಪಡೆದುಕೊಂಡರು. ಈ ಸಂದರ್ಭದಲ್ಲಿ ಅವರು ತುಂಬಾನೇ ಕುಗ್ಗಿದ್ದರು. ಆದರೆ, ಒಂದೇ ತಿಂಗಳು, ಶಿಲ್ಪಾ ಶೆಟ್ಟಿ ಕಂಬ್ಯಾಕ್ ಮಾಡಿದರು.

Shilpa Shetty Birthday: ಶಿಲ್ಪಾ ಶೆಟ್ಟಿಗೆ ಬರ್ತ್​ಡೇ ಸಂಭ್ರಮ; ಆ ಒಂದು ವಿಚಾರಕ್ಕೆ ಭಿನ್ನವಾಗಿ ನಿಲ್ಲುತ್ತಾರೆ ಕರಾವಳಿ ಬೆಡಗಿ
ಶಿಲ್ಪಾ
TV9 Web
| Edited By: |

Updated on: Jun 08, 2022 | 7:00 AM

Share

ನಟಿ ಶಿಲ್ಪಾ ಶೆಟ್ಟಿ ಅವರು (Shilpa Shetty) ಇಂದು (ಜೂನ್ 8) 47ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳ ವಲಯದಿಂದ ಶುಭಾಶಯ ಬರುತ್ತಿದೆ. ಬಾಲಿವುಡ್ (Bollywood) ಮಾತ್ರವಲ್ಲದೆ, ಬೇರೆ ಬೇರೆ ಸಿನಿಮಾ ಇಂಡಸ್ಟ್ರಿಗಳ ಸೆಲೆಬ್ರಿಟಿಗಳು ಕೂಡ ಅವರಿಗೆ ಬರ್ತ್​ಡೇ ವಿಶ್ ತಿಳಿಸುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಅವರು ಒಂದು ವಿಚಾರದಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ಅವರ ಈ ಗುಣ ಅನೇಕರಿಗೆ ಇಷ್ಟವಾಗಿದೆ.

ಕಳೆದ ವರ್ಷ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಬಂಧನವಾಯಿತು. ವಂಚನೆ ಪ್ರಕರಣ ಮತ್ತಿತ್ಯಾದಿ ಕೇಸ್​ನಲ್ಲಿ ಅವರು ಅರೆಸ್ಟ್ ಆಗಿದ್ದರೂ ಶಿಲ್ಪಾಗೆ ಅಷ್ಟು ಮುಜುಗರ ಆಗುತ್ತಿರಲಿಲ್ಲವೇನೋ. ಆದರೆ, ಅವರು ಬಂಧನಕ್ಕೆ ಒಳಗಾಗಿದ್ದು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ. ರಾತ್ರೋರಾತ್ರಿ ಅವರನ್ನು ಬಂಧಿಸಲಾಯಿತು. ಇದು ಶಿಲ್ಪಾ ಶೆಟ್ಟಿ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ.

ರಾಜ್​ ಕುಂದ್ರಾ ಬಂಧನಕ್ಕೆ ಒಳಗಾದ ನಂತರದಲ್ಲಿ ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾದಿಂದ ಹಾಗೂ ಕಿರುತೆರೆ ಕಾರ್ಯಕ್ರಮದಿಂದ ಬ್ರೇಕ್ ಪಡೆದುಕೊಂಡರು. ಈ ಸಂದರ್ಭದಲ್ಲಿ ಅವರು ತುಂಬಾನೇ ಕುಗ್ಗಿದ್ದರು. ಆದರೆ, ಒಂದೇ ತಿಂಗಳು, ಶಿಲ್ಪಾ ಶೆಟ್ಟಿ ಕಂಬ್ಯಾಕ್ ಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆದರು. ರಿಯಾಲಿಟಿ ಶೋನಲ್ಲಿ ಜಡ್ಜ್​ ಆಗಿ ಮುಂದುವರಿದರು. ಈ ಕಷ್ಟದ ಸಂದರ್ಭದಲ್ಲೂ ನಗುತ್ತಾ ಇರುವುದು ಹೇಗೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ
Image
Nikamma trailer: ದೇವಿ ಅವತಾರದಲ್ಲಿ ದರ್ಶನ ಕೊಟ್ಟ ಶಿಲ್ಪಾ ಶೆಟ್ಟಿ; ಯಾವುದು ಈ ಹೊಸ ಸಿನಿಮಾ?
Image
ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡ ಶಿಲ್ಪಾ ಶೆಟ್ಟಿ; ನಟಿಗೆ ಬೇಸರ ತರಿಸಿದ್ದೇನು?
Image
Shilpa Shetty: ವಿವಾದಗಳ ಬಗ್ಗೆ ಕೊನೆಗೂ ಮೌನ ಮುರಿದ ಜಾಕ್ವೆಲಿನ್; ಸಮಾಧಾನ ಹೇಳಿದ ಶಿಲ್ಪಾ ಶೆಟ್ಟಿ
Image
Shilpa Shetty: ಕಿಸ್ಸಿಂಗ್​ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಗೆ ರಿಲೀಫ್​ ನೀಡಿದ ಕೋರ್ಟ್​

ಇದನ್ನೂ ಓದಿ:  ದೇವಿ ಅವತಾರದಲ್ಲಿ ದರ್ಶನ ಕೊಟ್ಟ ಶಿಲ್ಪಾ ಶೆಟ್ಟಿ; ಯಾವುದು ಈ ಹೊಸ ಸಿನಿಮಾ? 

ರಾಜ್​ ಕುಂದ್ರಾ ಬಂಧನದ ನಂತರ ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಸಂದೇಶಗಳು ಕಮೆಂಟ್​ಗಳು ಬಂದವು. ಆದರೆ, ಅವರು ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ಅವರು ಯೋಗಾಸನ ಮಾಡುವ ಮೂಲಕ ಮನಶಾಂತಿ ಕಾಪಾಡಿಕೊಂಡರು. ಈ ವಿಚಾರದಲ್ಲಿ ಅವರ ಬಗ್ಗೆ ಫ್ಯಾನ್ಸ್​ಗೆ ನಿಜಕ್ಕೂ ಖುಷಿ ಇದೆ.

ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಸಿನಿಮಾ ವಿಚಾರದಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಆಗೊಂದು ಈಗೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಅವರು ರೋಹಿತ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ ‘ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸರಣಿಯಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ. ಈ ಬಗ್ಗೆ ಫ್ಯಾನ್ಸ್​ಗೆ ಸಖತ್ ನಿರೀಕ್ಷೆ ಇದೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಲುಕ್ ರಿವೀಲ್ ಆಗಿತ್ತು. ಇಂದು ಈ ವೆಬ್​ ಸೀರಿಸ್​ನ ಟೀಸರ್ ಅಥವಾ ಮೋಷನ್ ಪೋಸ್ಟರ್ ರಿಲೀಸ್ ಆಗುವ ನಿರೀಕ್ಷೆ ಇದೆ. ಈ ಮೂಲಕ ಶಿಲ್ಪಾ ಫ್ಯಾನ್ಸ್​ಗೆ ವೆಬ್​ ಸೀರಿಸ್ ತಂಡ ಗಿಫ್ಟ್ ನೀಡುವ ಆಲೋಚನೆಯಲ್ಲಿ ಇದೆ ಎಂದು ವರದಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.