AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Singer KK: ಕೆಕೆ ಹಾಡಿದ್ದ ಕೊನೆಯ ಹಾಡು ರಿಲೀಸ್; ನೆಚ್ಚಿನ ಗಾಯಕನ ಗೀತೆಯನ್ನು ಕೇಳಿ ಭಾವುಕರಾದ ಅಭಿಮಾನಿಗಳು

Singer KK last song: ಗಾಯಕ ಕೆಕೆ ಹಾಡಿದ್ದ ಕೊನೆಯ ಹಾಡು ರಿಲೀಸ್ ಆಗಿದೆ. ಇನ್ನಷ್ಟೇ ತೆರೆಕಾಣಬೇಕಿರುವ ಚಿತ್ರವಾದ ‘ಶೆರ್ಡಿಲ್: ದಿ ಪಿಲಿಭಿತ್ ಸಾಗಾ’ದ 'ಧೂಪ್ ಪಾನಿ ಬಹ್ನೆ ದೇ' ಹಾಡನ್ನು ಕೇಳಿ ಅಭಿಮಾನಿಗಳು ಭಾವುಕರಾಗಿದ್ದಾರೆ.

Singer KK: ಕೆಕೆ ಹಾಡಿದ್ದ ಕೊನೆಯ ಹಾಡು ರಿಲೀಸ್; ನೆಚ್ಚಿನ ಗಾಯಕನ ಗೀತೆಯನ್ನು ಕೇಳಿ ಭಾವುಕರಾದ ಅಭಿಮಾನಿಗಳು
ಗಾಯಕ ಕೆಕೆ
TV9 Web
| Updated By: shivaprasad.hs|

Updated on:Jun 07, 2022 | 10:37 AM

Share

ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ (Singer KK) ಅವರು ಮೇ 31 ರಂದು ಕೋಲ್ಕತ್ತಾದಲ್ಲಿ ಕಾರ್ಯಕ್ರಮದಲ್ಲಿ ಹಾಡಿದ ನಂತರ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಧ್ವನಿಯ ಮೋಡಿಗೆ ಮರುಳಾಗದ ಕೇಳುಗರಿಲ್ಲ. ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡಿ, ಜನರ ಪ್ರೀತಿ ಗಳಿಸಿದ್ದ ಅವರ ನಿಧನಕ್ಕೆ ಎಲ್ಲರೂ ಕಂಬನಿ ಮಿಡಿದಿದ್ದರು. ಇದೀಗ ಕೆಕೆ ಅವರ ಗೌರವಾರ್ಥವಾಗಿ ಅವರು ಹಾಡಿದ್ದ ಹಾಡೊಂದನ್ನು ರಿಲೀಸ್ ಮಾಡಲಾಗಿದೆ. ಇದು ಅವರು ಹಾಡಿರುವ ಕೊನೆಯ ಹಾಡೆಂದು ವರದಿಗಳು ಹೇಳಿವೆ. ಇನ್ನಷ್ಟೇ ತೆರೆಕಾಣಬೇಕಿರುವ ಚಿತ್ರವಾದ ‘ಶೆರ್ಡಿಲ್: ದಿ ಪಿಲಿಭಿತ್ ಸಾಗಾ’ದ ಹಾಡನ್ನು ಟಿ-ಸೀರೀಸ್ ಮತ್ತು ರಿಲಯನ್ಸ್​ ಟಂಟರ್​ಟೈನ್​ಮೆಂಟ್ ರಿಲೀಸ್ ಮಾಡಿದೆ. ಪ್ರಸ್ತುತ ರಿಲೀಸ್ ಆಗಿರುವ ‘ಧೂಪ್ ಪಾನಿ ಬಹ್ನೆ ದೇ’ ಹಾಡಿಗೆ ಸಾಹಿತ್ಯ ಬರೆದಿರುವವರು ಗುಲ್ಜಾರ್​. ಮತ್ತು ಸಂಗೀತ ನೀಡಿರುವವರು ಶಂತನು ಮೊಯಿತ್ರಾ. ಪ್ರಕೃತಿ ಮಾತೆಯನ್ನು ಉಳಿಸಲು ಮನವಿ ಮಾಡುವ ಸಾಹಿತ್ಯವನ್ನು ಹೊಂದಿರುವ ಅದ್ಭುತ ಹಾಡು ಇದಾಗಿದೆ. ಕೇಳುಗರು ಗುನುಗುವಂತಿರುವ ಈ ಹಾಡು ಇದೀಗ ಕೆಕೆ ಅಭಿಮಾನಿಗಳನ್ನು ಭಾವುಕರಾಗಿಸಿದೆ.

ಕೆಕೆ ಹಾಡಿರುವ ಹಾಡು ಇಲ್ಲಿದೆ:

ಇದನ್ನೂ ಓದಿ
Image
Samrat Prithviraj BO Collections: ಸೋಮವಾರದಂದು ಕುಸಿದ ‘ಸಾಮ್ರಾಟ್ ಪೃಥ್ವಿರಾಜ್’ ಕಲೆಕ್ಷನ್; ಅಕ್ಷಯ್ ನಟನೆಯ ಚಿತ್ರ ಇದುವರೆಗೆ ಗಳಿಸಿದ್ದೆಷ್ಟು?
Image
Tamannaah Bhatia: ತೆಲುಗಿನಲ್ಲಿ ‘ನಿಧಿಮಾ‘ ಆಗಿ ಕಾಣಿಸಿಕೊಳ್ಳುತ್ತಿರುವ ತಮನ್ನಾ ಭಾಟಿಯಾ; ನಟಿಯ ಅಂದದ ಫೋಟೋಗಳು ಇಲ್ಲಿವೆ
Image
Salman Khan: ಬಾಲಿವುಡ್​ ಚಿತ್ರಗಳ ಸೋಲಿನ ಬೆನ್ನಲ್ಲೇ ತಮ್ಮ ಮುಂದಿನ ಚಿತ್ರದ ಬಗ್ಗೆ ಮಹತ್ವದ ನಿರ್ಧಾರ ತಳೆದ್ರಾ ಸಲ್ಮಾನ್ ಖಾನ್?
Image
Ekta Kapoor Birthday: ಏಕ್ತಾ ಕಪೂರ್ ನಿರ್ಮಾಣ ಮಾಡಿರೋ ಈ ಚಿತ್ರಗಳನ್ನು ವೀಕ್ಷಿಸಿದ್ದೀರಾ? ಮಿಸ್ ಮಾಡಲೇಬೇಡಿ

‘ಶೆರ್ಡಿಲ್’ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ನೀರಜ್ ಕಬಿ, ಸಯಾನಿ ಗುಪ್ತಾ ಮೊದಲಾದವರು ನಟಿಸಿದ್ದಾರೆ. ಹಾಡನ್ನು ಕೇಳಿ ಅಭಿಮಾನಿಗಳು ಭಾವುಕರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ‘ಕೆಕೆ ಅವರ ಸ್ಥಾನ ತುಂಬಲು ಯಾರಿಗೂ ಸಾಧ್ಯವಿಲ್ಲ’ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಅಭಿಮಾನಿಗಳ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ:

ಈ ಹಾಡಿಗೆ ಸಾಹಿತ್ಯ ಬರೆದಿರುವ ಖ್ಯಾತ ಸಾಹಿತಿ ಗುಲ್ಜಾರ್, ಕೆಕೆ ಅವರ ಅಗಲುವಿಕೆಯ ನೋವನ್ನು ತೋಡಿಕೊಂಡಿದ್ದಾರೆ. ‘ಇದು ಕೆಕೆ ಅವರ ಕೊನೆಯ ಹಾಡಾಗಿರುವುದು ಬಹಳ ದುಃಖದ ವಿಚಾರ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 am, Tue, 7 June 22

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ