AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salman Khan: ಬಾಲಿವುಡ್​ ಚಿತ್ರಗಳ ಸೋಲಿನ ಬೆನ್ನಲ್ಲೇ ತಮ್ಮ ಮುಂದಿನ ಚಿತ್ರದ ಬಗ್ಗೆ ಮಹತ್ವದ ನಿರ್ಧಾರ ತಳೆದ್ರಾ ಸಲ್ಮಾನ್ ಖಾನ್?

Kabhi Eid Kabhi Diwali | Bhaijaan Movie: ಇತ್ತೀಚೆಗೆ ಬಾಲಿವುಡ್ ಸ್ಟಾರ್ ಚಿತ್ರಗಳು ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ಈ ನಡುವೆ ಸಲ್ಮಾನ್ ಖಾನ್ ಅಭಿನಯದ ‘ಕಭಿ ಈದ್ ಕಭಿ ದಿವಾಲಿ’ ಚಿತ್ರ ಹಲವು ಕಾರಣಗಳಿಗೆ ಇತ್ತೀಚೆಗ ಸುದ್ದಿಯಲ್ಲಿತ್ತು. ಇದೀಗ ಸಲ್ಮಾನ್ ಚಿತ್ರದ ಶೀರ್ಷಿಕೆಯನ್ನೇ ಬದಲಾಯಿಸಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.

Salman Khan: ಬಾಲಿವುಡ್​ ಚಿತ್ರಗಳ ಸೋಲಿನ ಬೆನ್ನಲ್ಲೇ ತಮ್ಮ ಮುಂದಿನ ಚಿತ್ರದ ಬಗ್ಗೆ ಮಹತ್ವದ ನಿರ್ಧಾರ ತಳೆದ್ರಾ ಸಲ್ಮಾನ್ ಖಾನ್?
ಸಲ್ಮಾನ್ ಖಾನ್
Follow us
TV9 Web
| Updated By: shivaprasad.hs

Updated on:Jun 07, 2022 | 9:43 AM

ಸಲ್ಮಾನ್ ಖಾನ್ (Salman Khan) ಅಭಿನಯದ ‘ಕಭಿ ಈದ್ ಕಭಿ ದಿವಾಲಿ’ (Kabhi Eid Kabhi Diwali) ಚಿತ್ರ ಮೊದಲಿನಿಂದಲೂ ಸುದ್ದಿಯಾಗುತ್ತಿದೆ. ಅಲ್ಲದೇ ಇತ್ತೀಚೆಗೆ ಚಿತ್ರತಂಡ ಹಲವು ಕಾರಣಗಳಿಗೆ ಸುದ್ದಿಯಲ್ಲಿದೆ. ಇದೀಗ ಸಲ್ಲು ಅಭಿನಯದ ಈ ಸಿನಿಮಾದ ಬಗ್ಗೆ ಹೊಸ ಗುಸುಗುಸು ಶುರುವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಚಿತ್ರತಂಡದಲ್ಲಿ ಹಲವು ಬದಲಾವಣೆಗಳಾಗಿವೆ. ಇದೀಗ ಚಿತ್ರದ ಶೀರ್ಷಿಕೆಯನ್ನೇ ಬದಲಾಯಿಸಲು ಸಲ್ಮಾನ್ ಮುಂದಾಗಿದ್ದಾರಂತೆ. ಈ ಬಗ್ಗೆ ಇಟೈಮ್ಸ್ ವರದಿ ಮಾಡಿದೆ. ಈ ಹಿಂದೆ ಚಿತ್ರಕ್ಕೆ ಇಡಲಾಗಿದ್ದ ‘ಭಾಯಿಜಾನ್​’ (Bhaijaan) ಹೆಸರನ್ನೇ ಮತ್ತೆ ಇಡಲಾಗುತ್ತದೆ ಎಂದು ಹೇಳಲಾಗಿದೆ. ಈ ವರ್ಷದ ಆರಂಭದವರೆಗೆ ಚಿತ್ರಕ್ಕೆ ‘ಭಾಯಿಜಾನ್’ ಎಂದೇ ಹೆಸರಿಡಲಾಗಿತ್ತು. ಆದರೆ ಕಳೆದ ಕೆಲವು ತಿಂಗಳ ಹಿಂದೆ ಹೆಸರನ್ನು ‘ಕಭಿ ಈದ್ ಕಭಿ ದಿವಾಲಿ’ ಎಂದು ಬದಲಾಯಿಸಲಾಗಿತ್ತು. ಇದೀಗ ನಿರ್ಮಾಣದ ಜವಾಬ್ದಾರಿ ಸಾಜಿದ್​ ನಾಡಿಯಾದ್ವಾಲಾರಿಂದ ಮತ್ತೆ ಸಲ್ಮಾನ್​ಗೆ ವರ್ಗಾವಣೆಗೊಂಡಿದೆ. ಹೀಗಾಗಿ ಸಲ್ಮಾನ್​ ಚಿತ್ರದ ಶೀರ್ಷಿಕೆ ಮತ್ತೆ ಮೊದಲಿನಂತೆ ಇಡಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.

ಸಲ್ಮಾನ್ ಖಾನ್ ಈಗಾಗಲೇ ಚಿತ್ರದಲ್ಲಿ ಹಲವು ಬದಲಾವಣೆ ತಂದಿದ್ದಾರೆ. ಅವರ ಸಂಬಂಧಿ ಆಯುಷ್ ಶರ್ಮಾ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಅವರೀಗ ಚಿತ್ರದಲ್ಲಿಲ್ಲ. ಜತೆಗೆ ಜಹೀರ್ ಇಕ್ಬಾಲ್​ ಕೂಡ ಸಿನಿಮಾ ತಂಡದಿಂದ ಹೊರನಡೆದಿದ್ದಾರೆ. ಈ ಬಗ್ಗೆ ಕಾರಣಗಳು ಸ್ಪಷ್ಟವಾಗಿಲ್ಲ. ಇವರ ಸ್ಥಾನಕ್ಕೆ ಜೆಸ್ಸಿ ಗಿಲ್ ಹಾಗೂ ಸಿದ್ಧಾರ್ಥ್ ನಿಗಮ್​ರನ್ನು ಕರೆತರಲಾಗಿದೆ.

ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಳವಿಕಾ ಶರ್ಮಾ, ವೆಂಕಟೇಶ್ ಕೂಡ ಬಣ್ಣಹಚ್ಚುತ್ತಿದ್ದಾರೆ ಎಂದು ವರದಿಯಾಗಿದೆ. ಈ ವರ್ಷದ ಆರಂಭದಲ್ಲಿ ಸಲ್ಮಾನ್ ಸೂಪರ್ ಹಿಟ್ ಚಿತ್ರವಾದ ‘ಭಜರಂಗಿ ಭಾಯಿಜಾನ್’ ಸೀಕ್ವೆಲ್ ಘೋಷಿಸಿದ್ದರು. ಇದೀಗ ‘ಭಾಯಿಜಾನ್’ ಹಾಗೂ ‘ಭಜರಂಗಿ ಭಾಯಿಜಾನ್’ ಟೈಟಲ್​ ಒಂದೇ ಮಾದರಿಯಲ್ಲಿದ್ದು, ಕತೆ ಹೇಗೆ ಇರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ
Image
Ekta Kapoor Birthday: ಏಕ್ತಾ ಕಪೂರ್ ನಿರ್ಮಾಣ ಮಾಡಿರೋ ಈ ಚಿತ್ರಗಳನ್ನು ವೀಕ್ಷಿಸಿದ್ದೀರಾ? ಮಿಸ್ ಮಾಡಲೇಬೇಡಿ
Image
ಎರಡು ಶೇಡ್​ ಪಾತ್ರದಲ್ಲಿ ಸಾಯಿ ಪಲ್ಲವಿ; ನಿರೀಕ್ಷೆ ಮೂಡಿಸಿದ ‘ವಿರಾಟ ಪರ್ವಂ’ ಸಿನಿಮಾ
Image
Ashika Ranganatha: ಕ್ಯೂಟ್​ ಫೋಟೋಶೂಟ್​ನಲ್ಲಿ ಮಿಂಚಿದ ಆಶಿಕಾ ರಂಗನಾಥ್
Image
ರಕ್ಷಿತ್ ಶೆಟ್ಟಿಗೆ ಬರ್ತ್​ಡೇ ಗಿಫ್ಟ್​; ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಟೀಸರ್ ರಿಲೀಸ್

ಸಲ್ಮಾನ್ ಟೈಟಲ್ ಬದಲಾಯಿಸಲು ಕಾರಣವೇನು?

ಇತ್ತೀಚೆಗೆ ಬಾಲಿವುಡ್​ ಸ್ಟಾರ್ ನಟರ ಚಿತ್ರಗಳು ನಿರೀಕ್ಷಿತ ಪ್ರದರ್ಶನ ಕಾಣುತ್ತಿಲ್ಲ. ಸಲ್ಮಾನ್​ ನಟಿಸಿರುವ ಇತ್ತೀಚಿನ ಚಿತ್ರಗಳದ್ದೂ ಅದೇ ಕತೆ. ಆದರೆ ಅವರ ‘ಟೈಗರ್ 3’ ಮೇಲೆ ಅಪಾರ ನಿರೀಕ್ಷೆ ಇದೆ. ಹೀಗಿರುವಾಗ ಸಲ್ಮಾನ್ ‘ಭಾಯಿಜಾನ್’ ಎಂದು ಚಿತ್ರದ ಟೈಟಲ್ ಬದಲಾಯಿಸಿರುವುದು ಕುತೂಹಲ ಮೂಡಿಸಿದೆ. ಬಾಲಿವುಡ್​ನ ತಾರೆಯರು ಹಿಟ್ ಚಿತ್ರಗಳನ್ನು ನೀಡಲು ಬಹಳ ಶ್ರಮವಹಿಸುತ್ತಿದ್ದಾರೆ. ಇವುಗಳಿಗೆ ನಿರೀಕ್ಷಿತ ಫಲಿತಾಂಶ ಲಭ್ಯವಾಗುತ್ತಿಲ್ಲ. ಹೀಗಾಗಿ ಸಲ್ಮಾನ್ ತಮ್ಮ ಯಶಸ್ವಿ ಚಿತ್ರವಾದ ‘ಭಜರಂಗಿ ಭಾಯಿಜಾನ್’ ಹೆಸರು ಹಾಗೂ ತಮ್ಮ ಅಡ್ಡ ಹೆಸರಾದ ‘ಭಾಯಿ’ಗೆ ಹತ್ತಿರವಾದ ‘ಭಾಯಿಜಾನ್’ ಎಂಬ ಶೀರ್ಷಿಕೆ ಇಟ್ಟು ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಚರ್ಚೆಗಳು ಶುರುವಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 am, Tue, 7 June 22