Tamannaah Bhatia: ತೆಲುಗಿನಲ್ಲಿ ‘ನಿಧಿಮಾ‘ ಆಗಿ ಕಾಣಿಸಿಕೊಳ್ಳುತ್ತಿರುವ ತಮನ್ನಾ ಭಾಟಿಯಾ; ನಟಿಯ ಅಂದದ ಫೋಟೋಗಳು ಇಲ್ಲಿವೆ
Tamannaah Bhatia Photos: ಕಳೆದ 16 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ತಮನ್ನಾ ಈಗಲೂ ಬಹುಬೇಡಿಕೆಯ ನಟಿಯರಲ್ಲಿ ಓರ್ವರು. ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿ ಸಕ್ರಿಯರಾಗಿದ್ದಾರೆ. ಅವರ ಕ್ಯೂಟ್ ಫೋಟೋಗಳು ಇಲ್ಲಿವೆ.
Updated on:Jun 07, 2022 | 9:45 AM


ಕನ್ನಡದ ಸೂಪರ್ ಹಿಟ್ ಚಿತ್ರ ‘ಲವ್ ಮಾಕ್ಟೇಲ್’ ತೆಲುಗಿಗೆ ರಿಮೇಕ್ ಆಗುತ್ತಿದೆ. ನಾಗಶೇಖರ್ ನಿರ್ದೇಶಿಸುತ್ತಿರುವ ಆ ಚಿತ್ರಕ್ಕೆ ತಮನ್ನಾ ನಾಯಕಿಯಾಗಿದ್ದಾರೆ.

‘ಗುರ್ತುಂದ ಶೀತಕಾಲಂ’ ಎಂದು ಹೆಸರಿಡಲಾಗಿರುವ ಆ ಚಿತ್ರದಲ್ಲಿ ‘ನಿಧಿಮಾ’ ಪಾತ್ರದಲ್ಲಿ ತಮನ್ನಾ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ.

ಇದಲ್ಲದೇ ತಮನ್ನಾ ಮತ್ತೂ ನಾಲ್ಕು ಚಿತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಅವುಗಳಲ್ಲಿ ಮೂರು ಹಿಂದಿ ಚಿತ್ರಗಳು.

‘ಬೋಲೆ ಚುಡಿಯಾ’, ‘ಪ್ಲಾನ್ ಎ ಪ್ಲಾನ್ ಬಿ’, ‘ಬಬ್ಲಿ ಬೌನ್ಸರ್’ ಚಿತ್ರಗಳಲ್ಲಿ ನಟಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಗಳ ಚಿತ್ರೀಕರಣವೂ ಮುಕ್ತಾಯವಾಗಿದೆ.

ಚಿರಂಜೀವಿ ಅಭಿನಯದ ‘ಭೋಲಾ ಶಂಕರ್’ನಲ್ಲೂ ತಮನ್ನಾ ಬಣ್ಣಹಚ್ಚುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆಗಳಿವೆ.

ಸಾಮಾಜಿಕ ಜಾಲತಾಣಗಳಲ್ಲೂ ಆಕ್ಟಿವ್ ಇರುವ ತಮನ್ನಾ, ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿಯ ಸ್ಟೈಲಿಶ್ ಲುಕ್ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

ತಮನ್ನಾ ಭಾಟಿಯಾ
Published On - 9:42 am, Tue, 7 June 22




