‘ಐಫಾ 2022’ ಸಮಾರಂಭದಲ್ಲಿ ಎಸ್​ಪಿಬಿ, ಲತಾಜೀ, ಕೆಕೆ ನಿಧನದ ಬಗ್ಗೆ ಮಾತನಾಡಿದ ಎ.ಆರ್​. ರೆಹಮಾನ್​

‘ಐಫಾ 2022’ ಸಮಾರಂಭದಲ್ಲಿ ಎಸ್​ಪಿಬಿ, ಲತಾಜೀ, ಕೆಕೆ ನಿಧನದ ಬಗ್ಗೆ ಮಾತನಾಡಿದ ಎ.ಆರ್​. ರೆಹಮಾನ್​

TV9 Web
| Updated By: ಮದನ್​ ಕುಮಾರ್​

Updated on:Jun 05, 2022 | 1:53 PM

IIFA 2022: ‘ಸಂಗೀತಗಾರರು ನಮ್ಮನ್ನು ಬೇರೆ ಜಗತ್ತಿಗೆ ಕೊಂಡೊಯ್ಯುತ್ತಾರೆ. ಅಂಥವರನ್ನು ಕಳೆದುಕೊಂಡಿದ್ದಕ್ಕೆ ತೀವ್ರ ನೋವಾಗಿದೆ’ ಎಂದು ಎ.ಆರ್​. ರೆಹಮಾನ್​ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಅನೇಕ ಸಮಾರಂಭಗಳಿಗೆ ಬ್ರೇಕ್​ ಬಿದ್ದಿದ್ದವು. ಈಗ ಜನಜೀವನ ಸಹಜ ಸ್ಥಿತಿಗೆ ಬಂದಿರುವುದರಿಂದ ‘ಐಫಾ’ ರೀತಿಯ ಕಾರ್ಯಕ್ರಮಗಳು ಮತ್ತೆ ನಡೆಯಲು ಸಾಧ್ಯವಾಗಿದೆ. ‘ಐಫಾ 2022’ (IIFA 2022) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಗೀತ ಮಾಂತ್ರಿಕ ಎ.ಆರ್​. ರೆಹಮಾನ್​ ಅವರು ಪಾಲ್ಗೊಂಡಿದ್ದಾರೆ. ಈ ವೇಳೆ ಅವರು ಅಗಲಿದ ಸಾಧಕರನ್ನು ನೆನಪು ಮಾಡಿಕೊಂಡಿದ್ದಾರೆ. ಸಂಗೀತ ಲೋಕದ ಅನೇಕ ದಿಗ್ಗಜರನ್ನು ಕಳೆದುಕೊಂಡಿದ್ದು ನೋವಿನ ಸಂಗತಿ. ಎಸ್​.ಪಿ. ಬಾಲಸುಬ್ರಹ್ಮಣ್ಯಂ (SPB), ಲತಾ ಮಂಗೇಶ್ಕರ್​ ಹಾಗೂ ಕೆಕೆ ನಿಧನದ ಬಗ್ಗೆ ಎ.ಆರ್​. ರೆಹಮಾನ್​ (A R Rahman) ಮಾತನಾಡಿದ್ದಾರೆ. ‘ಸಂಗೀತಗಾರರು ನಮ್ಮನ್ನು ಬೇರೆ ಜಗತ್ತಿಗೆ ಕೊಂಡೊಯ್ಯುತ್ತಾರೆ. ಅಂಥವರನ್ನು ಕಳೆದುಕೊಂಡಿದ್ದಕ್ಕೆ ತೀವ್ರ ನೋವಾಗಿದೆ’ ಎಂದು ಅವರು​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Jun 05, 2022 01:46 PM