‘ವಿಕ್ರಾಂತ್​ ರೋಣ’ ಸೂಪರ್​ ಹಿಟ್​; ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ‘ಕಬ್ಜ’ ಮೇಲೆ ಹೆಚ್ಚಿತು ನಿರೀಕ್ಷೆ

Vikran Rona | Kabza Movie: ‘ವಿಕ್ರಾಂತ್​ ರೋಣ’ ರೀತಿಯೇ ‘ಕಬ್ಜ’ ಚಿತ್ರ ಕೂಡ ಬಹುಭಾಷೆಯಲ್ಲಿ ಮೂಡಿಬರುತ್ತಿದೆ. ಉಪೇಂದ್ರ ಮತ್ತು ಕಿಚ್ಚ ಸುದೀಪ್​ ನಟಿಸುತ್ತಿರುವ ಈ ಚಿತ್ರಕ್ಕೆ ಆರ್​. ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ.

‘ವಿಕ್ರಾಂತ್​ ರೋಣ’ ಸೂಪರ್​ ಹಿಟ್​; ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ‘ಕಬ್ಜ’ ಮೇಲೆ ಹೆಚ್ಚಿತು ನಿರೀಕ್ಷೆ
ವಿಕ್ರಾಂತ್ ರೋಣ, ಕಬ್ಜ
TV9kannada Web Team

| Edited By: Madan Kumar

Aug 01, 2022 | 7:15 AM

ಕಿಚ್ಚ ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ (Vikran Rona) ಸಿನಿಮಾ ಗೆಲುವಿನ ನಗೆ ಬೀರಿದೆ. ಎಲ್ಲ ಕಡೆಗಳಲ್ಲಿ ಈ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಎಸ್​ಎಸ್​ ರಾಜಮೌಳಿ ಅವರಂತಹ ದಿಗ್ಗಜ ನಿರ್ದೇಶಕರು ಕೂಡ ಭೇಷ್​ ಎಂದಿದ್ದಾರೆ. ಕಿಚ್ಚ ಸುದೀಪ್​ (Kichcha Sudeep) ಅವರ ವೃತ್ತಿಜೀವನದಲ್ಲಿ ಬಿಗ್ಗೆಸ್ಟ್​ ಓಪನಿಂಗ್​ ಪಡೆದ ಸಿನಿಮಾ ಎಂಬ ಖ್ಯಾತಿಗೆ ‘ವಿಕ್ರಾಂತ್​ ರೋಣ’ ಪಾತ್ರವಾಗಿದೆ. ಇದರಿಂದಾಗಿ ಸುದೀಪ್​ ಅವರ ಮುಂಬರುವ ಸಿನಿಮಾಗಳ ಬಗ್ಗೆ ಇರುವ ನಿರೀಕ್ಷೆ ಹೆಚ್ಚಿದೆ. ಅಷ್ಟೇ ಅಲ್ಲದೇ, ಕನ್ನಡ ಚಿತ್ರರಂಗದಿಂದ ಬರಲಿರುವ ಎಲ್ಲ ಪ್ಯಾನ್​ ಇಂಡಿಯಾ ಚಿತ್ರಗಳ ಬಗ್ಗೆ ಉತ್ತರ ಭಾರತದ ಮಂದಿ ಕಾಯುವಂತಾಗಿದೆ. ಆ ಪೈಕಿ ‘ಕಬ್ಜ’ ಚಿತ್ರದ (Kabza Movie) ಮೇಲೆ ಎಲ್ಲರ ಗಮನ ನೆಟ್ಟಿದೆ.

ಆರ್​. ಚಂದ್ರು ಅವರು ‘ಕಬ್ಜ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಉಪೇಂದ್ರ ಹೀರೋ. ಅವರ ಜೊತೆ ಸುದೀಪ್​ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. ‘ಇಡೀ ಕಬ್ಜ ಸಿನಿಮಾ ಒಂದು ಬಂಗಾರದ ಕಿರೀಟವಾದರೆ ಅದರಲ್ಲಿ ಸುದೀಪ್​ ಪಾತ್ರ ವಜ್ರದ ಹರಳು ಇದ್ದಂತೆ’ ಎಂದಿದ್ದಾರೆ ಆರ್​. ಚಂದ್ರು. ‘ವಿಕ್ರಾಂತ್​ ರೋಣ’ ಚಿತ್ರದ ಮೂಲಕ ಭರ್ಜರಿಯಾಗಿ ಸುದೀಪ್​ ಅವರನ್ನು ತೆರೆಮೇಲೆ ನೋಡಿ ಎಂಜಾಯ್​ ಮಾಡಿದ ಪ್ರೇಕ್ಷಕರು ‘ಕಬ್ಜ’ ಯಾವಾಗ ರಿಲೀಸ್​ ಆಗಲಿದೆ ಎಂದು ಕಾಯುತ್ತಿದ್ದಾರೆ.

ಅದ್ದೂರಿ ಬಜೆಟ್​, ರೆಟ್ರೋ ಕಾಲದ ಕಥೆ, ಘಟಾನುಘಟಿ ತಾರಾ ಬಳಗ, ಪ್ರಬಲ ತಂತ್ರಜ್ಞರ ತಂಡ.. ಹೀಗೆ ‘ಕಬ್ಜ’ ಚಿತ್ರದಲ್ಲಿ ಅನೇಕ ವಿಶೇಷತೆಗಳಿವೆ. ಈ ಸಿನಿಮಾ ಕೂಡ ಬಹುಭಾಷೆಯಲ್ಲಿ ಮೂಡಿಬರುತ್ತಿದೆ. ಉಪೇಂದ್ರ ಅವರ ಲುಕ್​ ಎಲ್ಲರಿಗೂ ಇಷ್ಟ ಆಗಿದೆ. ಈ ಸಿನಿಮಾ ಕೂಡ ಕನ್ನಡದ ಕೀರ್ತಿ ಪತಾಕೆ ಹಾರಿಸಲಿದೆ ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅದನ್ನು ನಿಜವಾಗಿಸುವ ಪ್ರಯತ್ನದಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ.

2022ರ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಸಖತ್​​ ಸ್ಪೆಷಲ್​. ‘ಕೆಜಿಎಫ್​: ಚಾಪ್ಟರ್​ 2’ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ಈಗ ‘ವಿಕ್ರಾಂತ್​ ರೋಣ’ ಧೂಳೆಬ್ಬಿಸುತ್ತಿದೆ. ಹಾಗಾಗಿ ಇದೇ ವರ್ಷವೇ ‘ಕಬ್ಜ’ ಕೂಡ ತೆರೆಕಾಣಲಿ ಎಂದು ಪ್ರೇಕ್ಷಕರು ಹಂಬಲಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada