Vikrant Rona Twitter Review: ‘ಇದು ಬೆಸ್ಟ್​​ 3ಡಿ ಅನುಭವ’: ವಿಕ್ರಾಂತ್​ ರೋಣ ನೋಡಿ ಮೆಚ್ಚಿದ ಫ್ಯಾನ್ಸ್​

Vikrant Rona Kichcha Sudeep: ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರು ‘ವಿಕ್ರಾಂತ್​ ರೋಣ’ ಚಿತ್ರದ ಬಗ್ಗೆ ವಿಮರ್ಶೆ ಹಂಚಿಕೊಂಡಿದ್ದಾರೆ. 3ಡಿ ಮತ್ತು 2ಡಿ ಅವತರಣಿಕೆಯಲ್ಲಿ ಈ ಸಿನಿಮಾ ಮೂಡಿಬಂದಿದೆ.

Vikrant Rona Twitter Review: ‘ಇದು ಬೆಸ್ಟ್​​ 3ಡಿ ಅನುಭವ’: ವಿಕ್ರಾಂತ್​ ರೋಣ ನೋಡಿ ಮೆಚ್ಚಿದ ಫ್ಯಾನ್ಸ್​
ಕಿಚ್ಚ ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on:Jul 28, 2022 | 10:40 AM

‘ರಂಗಿತರಂಗ’ ಮೂಲಕ ದೊಡ್ಡ ಹಿಟ್​ ಪಡೆದಿದ್ದ ನಿರ್ದೇಶಕ ಅನೂಪ್​ ಭಂಡಾರಿ ಅವರ ಬತ್ತಳಿಕೆಯಿಂದ ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾ ಮೂಡಿಬಂದಿದೆ. ಕಿಚ್ಚ ಸುದೀಪ್​ (Kichcha Sudeep) ಅಭಿಮಾನಿಗಳಿಗೆ ಈ ಸಿನಿಮಾ ಸಖತ್​ ಇಷ್ಟ ಆಗುತ್ತಿದೆ. ಮೊದಲ ದಿನವೇ ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇದು 3ಡಿ ಚಿತ್ರ ಎಂಬ ಕಾರಣಕ್ಕೆ ಹೈಪ್​ ಹೆಚ್ಚಿದೆ. ಬೃಹತ್​ ಸೆಟ್​ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾದ ದೃಶ್ಯಗಳು 3ಡಿಯಲ್ಲಿ ಕಣ್ಮನ ಸೆಳೆಯುವಂತಿವೆ. ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಅನೇಕರು ಟ್ವಿಟರ್​ ಮೂಲಕ ವಿಮರ್ಶೆ (Vikrant Rona Twitter Review) ಹಂಚಿಕೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್​ ಮಾತ್ರವಲ್ಲದೇ ಚಿತ್ರತಂಡದ ಅನೇಕರಿಗೆ ಮೆಚ್ಚುಗೆ ಸಿಗುತ್ತಿದೆ.

ಭಾರತ ಮಾತ್ರವಲ್ಲದೇ ಅನೇಕ ದೇಶಗಳಲ್ಲಿ ‘ವಿಕ್ರಾಂತ್​ ರೋಣ’ ಬಿಡುಗಡೆ ಆಗಿದೆ. ದುಬೈನಲ್ಲಿ ಸಿನಿಮಾ ನೋಡಿದ ಅಭಿಮಾನಿಯೊಬ್ಬರು 5ಕ್ಕೆ 4.5 ಅಂಕ ನೀಡಿದ್ದಾರೆ. ಇದು ಸೂಪರ್​ ಸಿನಿಮಾ ಎಂದು ಟ್ವಿಟರ್​ನಲ್ಲಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ‘3ಡಿ ಹೇಗಿದೆ’ ಎಂದು ಕೇಳಿದ್ದಾರೆ. ‘ತುಂಬ ಚೆನ್ನಾಗಿದೆ. ನಿರ್ದೇಶಕ ಅನೂಪ್​ ಭಂಡಾರಿ ಸೆನ್ಸೇಷನ್​ ಸೃಷ್ಟಿ ಮಾಡಿದ್ದಾರೆ’ ಎಂದು ಅವರು ಉತ್ತರಿಸಿದ್ದಾರೆ.

ಇದನ್ನೂ ಓದಿ
Image
Vikrant Rona: ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಮೊದಲಾರ್ಧದ ವಿಮರ್ಶೆ ಇಲ್ಲಿದೆ
Image
Vikrant Rona: ವಿಶ್ವಾದ್ಯಂತ ಘರ್ಜಿಸುತ್ತಿರುವ ‘ವಿಕ್ರಾಂತ್​ ರೋಣ’; ಸುದೀಪ್​ ಎಂಟ್ರಿಗೆ ಫ್ಯಾನ್ಸ್​ ಫಿದಾ
Image
‘ವಿಕ್ರಾಂತ್​ ರೋಣ’ ರಿಲೀಸ್​ಗೂ ಮುನ್ನ ಸುದೀಪ್​ಗೆ ಪ್ರೀತಿಯಿಂದ ವಿಶ್ ಮಾಡಿದ ನಿರ್ದೇಶಕ ರಾಜಮೌಳಿ
Image
‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಕತ್ರಿನಾ ಜಪ ಮಾಡಿದ ಸಲ್ಮಾನ್​ ಖಾನ್​; ಕಾರಣ ಏನು?

ಖಂಡಿತವಾಗಿಯೂ ‘ವಿಕ್ರಾಂತ್​ ರೋಣ’ ಅತ್ಯುತ್ತಮ ಕಲೆಕ್ಷನ್​ ಮಾಡಲಿದೆ ಎಂದು ಪ್ರೇಕ್ಷಕರೊಬ್ಬರು ಅನಿಸಿಕೆ ಹಂಚಿಕೊಂಡಿದ್ದಾರೆ. ‘ಭಾರತದಿಂದ ಬಂದ ದಿ ಬೆಸ್ಟ್​ 3ಡಿ ಸಿನಿಮಾ ಇದು. ಥ್ರಿಲ್​ ಮತ್ತು ಸಸ್ಪೆನ್ಸ್​ ಸೂಪರ್​ ಆಗಿದೆ. ಕನ್ನಡ ಚಿತ್ರರಂಗ ಬೇರೆ ಹಂತಕ್ಕೆ ಹೋಗಿದೆ. ಪಕ್ಕಾ ಪೈಸಾ ವಸೂಲ್​ ಸಿನಿಮಾ’ ಎಂದು ಟ್ವೀಟ್​ ಮಾಡಲಾಗಿದೆ.

‘ಇಂಟರೆಸ್ಟಿಂಗ್ ಆದ ಒಂದು ಕಥೆಯನ್ನು ಚೆನ್ನಾಗಿ ನಿರೂಪಿಸಲಾಗಿದೆ. ಸುದೀಪ್​ ತುಂಬ ಚೆನ್ನಾಗಿ ನಟಿಸಿದ್ದಾರೆ. ಕೆಲವು ದೃಶ್ಯಗಳನ್ನು ಕತ್ತರಿಸಬಹುದಿತ್ತು. ಆದರೂ ಕೂಡ ಇದು ಒಂದು ಉತ್ತಮ ಸಿನಿಮಾ’ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ಪರಭಾಷೆಯ ಅನೇಕ ಸೆಲೆಬ್ರಿಟಿಗಳು ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಶುಭ ಕೋರಿದ್ದಾರೆ. ರಾಜಮೌಳಿ, ಕಾರ್ತಿ ಮುಂತಾದವರು ಸುದೀಪ್​ಗೆ ವಿಶ್​ ಮಾಡಿದ್ದಾರೆ. ಮೊದಲ ದಿನ ಎಲ್ಲ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿದೆ.

Published On - 10:40 am, Thu, 28 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ