‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಕತ್ರಿನಾ ಜಪ ಮಾಡಿದ ಸಲ್ಮಾನ್​ ಖಾನ್​; ಕಾರಣ ಏನು?

Salman Khan | Katrina Kaif: ‘ವಿಕ್ರಾಂತ್​ ರೋಣ’ ಚಿತ್ರಕ್ಕೂ ಕತ್ರಿನಾ ಕೈಫ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಹಾಗಿದ್ದರೂ ಕೂಡ ಅವರ ಹೆಸರನ್ನು ಸಲ್ಮಾನ್​ ಖಾನ್​ ಹೇಳಿದ್ದು ಕೇಳಿ ಎಲ್ಲರೂ ನಕ್ಕಿದ್ದಾರೆ.

‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಕತ್ರಿನಾ ಜಪ ಮಾಡಿದ ಸಲ್ಮಾನ್​ ಖಾನ್​; ಕಾರಣ ಏನು?
ಸಲ್ಮಾನ್ ಖಾನ್, ಕಿಚ್ಚ ಸುದೀಪ್, ಕತ್ರಿನಾ ಕೈಫ್
TV9kannada Web Team

| Edited By: Madan Kumar

Jul 26, 2022 | 10:58 AM

ಭಾರಿ ಹೈಪ್​ ಸೃಷ್ಟಿ ಮಾಡಿರುವ ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾದ ಬಿಡುಗಡೆಗೆ ಈಗ ಕ್ಷಣಗಣನೆ ಶುರುವಾಗಿದೆ. ಜುಲೈ 28ರಂದು ಈ ಚಿತ್ರ ಅದ್ದೂರಿಯಾಗಿ ರಿಲೀಸ್​ ಆಗಲಿದೆ. ಈಗಾಗಲೇ ಅನೇಕ ರಾಜ್ಯಗಳಿಗೆ ತೆರಳಿ ಕಿಚ್ಚ ಸುದೀಪ್​ ಅವರು ಪ್ರಚಾರ ಮಾಡುತ್ತಿದ್ದಾರೆ. ಸೋಮವಾರ (ಜುಲೈ 25) ಮುಂಬೈನಲ್ಲಿ ‘ವಿಕ್ರಾಂತ್​ ರೋಣ’ ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮ ನಡೆಯಿತು. ಅದರಲ್ಲಿ ಸಲ್ಮಾನ್​ ಖಾನ್​, ರಿತೇಶ್​ ದೇಶಮುಖ್​, ಸಲ್ಮಾನ್​ ಖಾನ್​ (Salman Khan), ಜಾಕ್ವೆಲಿನ್​ ಫರ್ನಾಂಡಿಸ್​, ಕಿಚ್ಚ ಸುದೀಪ್​ ಮುಂತಾದವರು ಭಾಗಿ ಆಗಿದ್ದರು. ಈ ವೇಳೆ ವೇದಿಕೆ ಮೇಲೆ ಸಲ್ಮಾನ್​ ಖಾನ್​ ಅವರು ಕತ್ರಿನಾ ಕೈಫ್​ (Katrina Kaif) ಹೆಸರು ಎತ್ತಿದ್ದಾರೆ. ಅದಕ್ಕೆ ಕಾರಣ ಆಗಿದ್ದು ಅವರ ಡ್ಯಾನ್ಸ್​!

‘ವಿಕ್ರಾಂತ್​ ರೋಣ’ ಚಿತ್ರಕ್ಕೂ ಕತ್ರಿನಾ ಕೈಫ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಹಾಗಿದ್ದರೂ ಕೂಡ ಅವರ ಹೆಸರನ್ನು ಸಲ್ಮಾನ್​ ಖಾನ್​ ಹೇಳಿದ್ದು ಕೇಳಿ ಎಲ್ಲರೂ ನಕ್ಕಿದ್ದಾರೆ. ಈ ಸಿನಿಮಾದ ‘ರಾ ರಾ ರಕ್ಕಮ್ಮ..’ ಹಾಡಿನಲ್ಲಿ ಜಾಕ್ವೆಲಿನ್​ ಅವರ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಅವರಿಗೆ ಇಷ್ಟು ಚೆನ್ನಾಗಿ ಡ್ಯಾನ್ಸ್​ ಮಾಡಲು ಬರುತ್ತಿರಲಿಲ್ಲ. ಆ ಸಂದರ್ಭವನ್ನು ‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ ವೇಳೆ ಜಾಕ್ವೆಲಿನ್​ ಫರ್ನಾಂಡಿಸ್​ ನೆನಪಿಸಿಕೊಂಡರು.

ಜಾಕ್ವೆಲಿನ್​ ಹೇಳಿದ ಮಾತಿಗೆ ರಿತೇಶ್​ ದೇಶಮುಖ್ ಪ್ರತಿಕ್ರಿಯೆ ನೀಡಿದರು. ‘ತುಂಬ ವರ್ಷಗಳ ಹಿಂದೆ ನಾನು ಮತ್ತು ಜಾಕ್ವೆಲಿನ್​ ಜೊತೆಯಾಗಿ ಕೆಲಸ ಮಾಡಿದ್ದೆವು. ಆಗ ಭಾರತೀಯ ಡ್ಯಾನ್ಸ್​ ಪ್ರಕಾರವನ್ನು ಕಲಿಯಲು ಅವರು ತುಂಬ ಕಷ್ಟಪಟ್ಟಿದ್ದರು. ಆದರೆ ಈಗ ಅವರು ಭಾರತದ ಅತ್ಯುತ್ತಮ ಡ್ಯಾನ್ಸರ್​ಗಳಲ್ಲಿ ಒಬ್ಬರಾಗಿದ್ದಾರೆ’ ಎಂದು ರಿತೇಶ್​ ದೇಶಮುಖ್​ ಹೊಗಳಿದರು.

‘ಜಾಕ್ವೆಲಿನ್​ ಫರ್ನಾಂಡಿಸ್​ ಮಾತ್ರವಲ್ಲ.. ಕತ್ರಿನಾ ಕೈಫ್​ ಕೂಡ ತುಂಬ ಕಷ್ಟಪಟ್ಟಿದ್ದಾರೆ’ ಎಂದು ಸಲ್ಮಾನ್​ ಖಾನ್​ ಹೇಳಿದರು. ಈ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕರು. ಕಿಚ್ಚ ಸುದೀಪ್​ ಮತ್ತು ಸಲ್ಮಾನ್​ ಖಾನ್​ ನಡುವೆ ಉತ್ತಮ ಬಾಂಧವ್ಯ ಇದೆ. ಅದಕ್ಕಾಗಿ ಅವರು ‘ವಿಕ್ರಾಂತ್​ ರೋಣ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ಗೆ ಬಂದು ಶುಭ ಹಾರೈಸಿದ್ದಾರೆ.

‘ವಿಕ್ರಾಂತ್​ ರೋಣ’ ಸಿನಿಮಾಗೆ ಜಾಕ್​ ಮಂಜು ಬಂಡವಾಳ ಹೂಡಿದ್ದು, ಅನೂಪ್​ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಸುದೀಪ್​ ಜೊತೆ ನೀತಾ ಅಶೋಕ್​, ನಿರೂಪ್​ ಭಂಡಾರಿ ಮುಂತಾದವರು ಅಭಿನಯಿಸಿದ್ದಾರೆ ಹಾಡುಗಳಿಗೆ ಅಜನೀಶ್​ ಬಿ. ಲೋಕನಾಥ್​ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada