Vikrant Rona: ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಮೊದಲಾರ್ಧದ ವಿಮರ್ಶೆ ಇಲ್ಲಿದೆ

Vikrant Rona First Half Review: ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಮೊದಲಾರ್ಧ ವಿಮರ್ಶೆ ಇಲ್ಲಿದೆ.

Vikrant Rona: ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಮೊದಲಾರ್ಧದ ವಿಮರ್ಶೆ ಇಲ್ಲಿದೆ
ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 28, 2022 | 7:45 AM

ಕಿಚ್ಚ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಇಂದು (ಜುಲೈ 28) ರಿಲೀಸ್ ಆಗಿದೆ. ಕನ್ನಡದಲ್ಲಿ 3ಡಿ ಸಿನಿಮಾ ಬಂದಿದ್ದು ಅತೀ ಕಡಿಮೆ. ಈ ಸಾಲಿಗೆ ‘ವಿಕ್ರಾಂತ್ ರೋಣ’ (Vikrant Rona Movie) ಚಿತ್ರ ಕೂಡ ಸೇರ್ಪಡೆ ಆಗಿದೆ. ಹಾಡು ಹಾಗೂ ಟ್ರೇಲರ್ ಮೂಲಕ ಸುದೀಪ್ ಅಭಿನಯದ ಈ ಚಿತ್ರ ಸಾಕಷ್ಟು ಗಮನ ಸೆಳೆದಿತ್ತು. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದು ಕೂತಿದ್ದರು. ಕೊನೆಗೂ ಆ ದಿನ ಬಂದಿದೆ. ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದ ಮೊದಲಾರ್ಧ ವಿಮರ್ಶೆ(Vikrant Rona First Half Review) ಇಲ್ಲಿದೆ.

  1. ಅನೂಪ್​ ಭಂಡಾರಿ ಅವರ ಈ ಹಿಂದಿನ ‘ರಂಗಿತರಂಗ’ ಶೈಲಿಯಲ್ಲಿಯೇ ‘ವಿಕ್ರಾಂತ್​ ರೋಣ’ ಸಿನಿಮಾ ಮೂಡಿಬಂದಿದೆ. ಸಾಕಷ್ಟು ದೃಶ್ಯಗಳಲ್ಲಿ ಆ ವೈಭವ ಕಾಣಿಸುತ್ತದೆ.
  2. ಕಿಚ್ಚ ಸುದೀಪ್​ ಅವರು ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಎಂಟ್ರಿ ಸೀನ್​ ಅಭಿಮಾನಿಗಳಿಗೆ ಮೆಚ್ಚುಗೆ ಆಗುವಂತಿದೆ.
  3. ಚಿತ್ರದ ಮೊದಲಾರ್ಧದ ಕಥೆ ಸಸ್ಪೆನ್ಸ್​ ಮತ್ತು ಕಾಮಿಡಿ ಜೊತೆಯಲ್ಲಿ ಸಾಗುತ್ತದೆ. ಪ್ರತಿ ದೃಶ್ಯವೂ ಅದ್ದೂರಿಯಾಗಿ ಮೂಡಿಬಂದಿದೆ.
  4. ಸಖತ್​ ಹಿಟ್​ ಆಗಿರುವ ‘ರಾ ರಾ​ ರಕ್ಕಮ್ಮ..’ ಸಾಂಗ್​ ಮೊದಲಾರ್ಧದಲ್ಲಿ ಬರುವುದಿಲ್ಲ. ಆದರೆ ಜಾಕ್ವೆಲಿನ್​ ಫರ್ನಾಂಡಿಸ್​ ನಟನೆಯ ದೃಶ್ಯ ಫಸ್ಟ್​ ಹಾಫ್​ನಲ್ಲಿಯೇ ಬರುತ್ತದೆ. ‘ರಾ ರಾ​ ರಕ್ಕಮ್ಮ..’ ಹಾಡಿಗಾಗಿ ಪ್ರೇಕ್ಷಕರು ಸೆಕೆಂಡ್​ ಹಾಫ್​ಗೆ ಕಾಯಬೇಕು.
  5. ಇದನ್ನೂ ಓದಿ
    Image
    ‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಕತ್ರಿನಾ ಜಪ ಮಾಡಿದ ಸಲ್ಮಾನ್​ ಖಾನ್​; ಕಾರಣ ಏನು?
    Image
    Salman Khan: ‘ವಿಕ್ರಾಂತ್​ ರೋಣ’ ವೇದಿಕೆಯಲ್ಲಿ ಸುದೀಪ್​-ಸಲ್ಮಾನ್​​; ಕಿಚ್ಚನ ಜತೆಗಿನ ಬಾಂಧವ್ಯದ ಬಗ್ಗೆ ಸಲ್ಲು ಮಾತು
    Image
    Kichcha Sudeep: ಮುಂಬೈ, ಚೆನ್ನೈನಿಂದಲೂ ಸುದೀಪ್​ ಕಟೌಟ್​ಗೆ ಬಂತು ಬೇಡಿಕೆ; ಹೇಗಿದೆ ನೋಡಿ ‘ವಿಕ್ರಾಂತ್​ ರೋಣ’ ಕ್ರೇಜ್​
    Image
    Kichcha Sudeep: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡ ‘ವಿಕ್ರಾಂತ್​ ರೋಣ’ ಟ್ರೇಲರ್​
  6. ಬೃಹತ್​ ಸೆಟ್​ಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಆ ದೃಶ್ಯಗಳು 3ಡಿಯಲ್ಲಿ ತುಂಬ ಅದ್ಭುತವಾಗಿ ಕಾಣಿಸುತ್ತವೆ. ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ.
  7. ಕಿಚ್ಚ ಸುದೀಪ್​ ಅವರು ಹಿಂದೆಂದಿಗಿಂತಲೂ ಡಿಫರೆಂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಮ್ಯಾನರಿಸಂ ಕೂಡ ಬೇರೆ ರೀತಿ ಇದೆ.
  8. ನಿರೂಪ್​ ಭಂಡಾರಿ ಮತ್ತು ನೀತಾ ಅಶೋಕ್​ ಅವರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರಿಗೆ ಇಬ್ಬರ ಕಾಂಬಿನೇಷನ್​ ಇಷ್ಟ ಆಗುತ್ತದೆ.
  9. ಸಿನಿಮಾದ ಬಹುತೇಕ ದೃಶ್ಯಗಳನ್ನು ಕತ್ತಲ ವಾತಾವರಣದಲ್ಲಿ ಸೆರೆ ಹಿಡಿಯಲಾಗಿದೆ. ಇದು ಪ್ರೇಕ್ಷಕರಿಗೆ ಡಿಫರೆಂಟ್​ ಫೀಲ್​ ನೀಡುತ್ತದೆ.
  10. ಫಸ್ಟ್​ ಹಾಫ್​ ಕೊನೆಯಲ್ಲಿ ಒಂದು ಸಸ್ಪೆನ್ಸ್​ ನೀಡಲಾಗಿದೆ. ಅದನ್ನು ನೋಡಿದಾಗ ಪ್ರೇಕ್ಷಕರು ಥ್ರಿಲ್​ ಆಗುವುದು ಗ್ಯಾರಂಟಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ