Salman Khan: ‘ವಿಕ್ರಾಂತ್​ ರೋಣ’ ವೇದಿಕೆಯಲ್ಲಿ ಸುದೀಪ್​-ಸಲ್ಮಾನ್​​; ಕಿಚ್ಚನ ಜತೆಗಿನ ಬಾಂಧವ್ಯದ ಬಗ್ಗೆ ಸಲ್ಲು ಮಾತು

Vikrant Rona pre-release event: ‘ಸುದೀಪ್​ ಅವರ ಕೆಲಸವನ್ನು ನಾನು ನೋಡಿದ್ದೇನೆ. ಅವರು ಅದ್ಭುತ ನಟ’ ಎಂದು ಸಲ್ಮಾನ್​ ಖಾನ್​ ಹೊಗಳಿದ್ದಾರೆ. ‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಅವರು ಮಾತನಾಡಿದ್ದಾರೆ.

Salman Khan: ‘ವಿಕ್ರಾಂತ್​ ರೋಣ’ ವೇದಿಕೆಯಲ್ಲಿ ಸುದೀಪ್​-ಸಲ್ಮಾನ್​​; ಕಿಚ್ಚನ ಜತೆಗಿನ ಬಾಂಧವ್ಯದ ಬಗ್ಗೆ ಸಲ್ಲು ಮಾತು
ಸಲ್ಮಾನ್ ಖಾನ್, ಕಿಚ್ಚ ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 26, 2022 | 9:44 AM

ನಟ ಸುದೀಪ್ (Kichcha Sudeep) ಅವರು ‘ವಿಕ್ರಾಂತ್​ ರೋಣ’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಹಗಲಿರುಳು ಎನ್ನದೇ ಅವರು ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಜುಲೈ 28ರಂದು ಅದ್ದೂರಿಯಾಗಿ ‘ವಿಕ್ರಾಂತ್​ ರೋಣ’ (Vikrant Rona) ತೆರೆಕಾಣಲಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ, ತೆಲುಗು ಮುಂತಾದ ಭಾಷೆಗಳಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ. ಜುಲೈ 25ರಂದು ಮುಂಬೈನಲ್ಲಿ ಈ ಚಿತ್ರದ ಪ್ರೀ ರಿಲೀಸ್​ ಇವೆಂಟ್​ ನಡೆದಿದೆ. ಅದರಲ್ಲಿ ಬಾಲಿವುಡ್​ನ ಅನೇಕ ಸ್ಟಾರ್​ ಕಲಾವಿದರು ಭಾಗವಹಿಸಿದ್ದು ವಿಶೇಷ. ಅದರಲ್ಲೂ ಕಿಚ್ಚ ಸುದೀಪ್​ ಅವರ ಆಪ್ತ ಸ್ನೇಹಿತ ಸಲ್ಮಾನ್​ ಖಾನ್ (Salman Khan)​ ಅವರು ಈ ಕಾರ್ಯಕ್ರಮಕ್ಕೆ ಬಂದು ಸ್ಟಾರ್​ ಮೆರುಗು ಹೆಚ್ಚಿಸಿದರು. ಈ ವೇಳೆ ಸುದೀಪ್​ ಜೊತೆಗಿನ ಸ್ನೇಹದ ಬಗ್ಗೆ ಸಲ್ಲು ಮಾತನಾಡಿದರು.

ಕಿಚ್ಚ ಸುದೀಪ್​ ಮತ್ತು ಸಲ್ಮಾನ್​ ಖಾನ್​ ನಡುವೆ ಒಂದಷ್ಟು ವರ್ಷಗಳಿಂದ ಸ್ನೇಹ ಮನೆ ಮಾಡಿದೆ. ಅನೇಕ ಸಂದರ್ಭಗಳಲ್ಲಿ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದಿದೆ. ಪರಸ್ಪರ ಪರಿಚಯ ಬೆಳೆಯುವುದಕ್ಕಿಂತ ಮನ್ನವೇ ಅವರಿಬ್ಬರ ನಡುವೆ ಕೆಲಸ ಸಾಮ್ಯತೆಗಳು ಕಾಣಿಸಿದ್ದವು ಎಂಬುದನ್ನು ಸಲ್ಲು ಹೇಳಿದ್ದಾರೆ. ‘ಸುದೀಪ್​ ಅವರ ‘ಹುಚ್ಚ’ ಚಿತ್ರ ಮಾಡಿದರು. ನಾನು ‘ತೇರೆ ನಾಮ್​’ ಮಾಡಿದೆ. (ಈ ಎರಡೂ ಸಿನಿಮಾಗಳು ತಮಿಳಿನ ‘ಸೇತು’ ಚಿತ್ರದ ರಿಮೇಕ್​). ನಾವಿಬ್ಬರೂ ಬಿಗ್​ ಬಾಸ್​ ನಿರೂಪಣೆ ಮಾಡಿದ್ದೇವೆ’ ಎಂದು ಸಲ್ಲು ಹೇಳಿದ್ದಾರೆ.

2019ರಲ್ಲಿ ಬಂದ ‘ದಬಂಗ್​ 3’ ಚಿತ್ರದಲ್ಲಿ ಸುದೀಪ್​ ಮತ್ತು ಸಲ್ಮಾನ್​ ಖಾನ್​ ಅವರು ತೆರೆಹಂಚಿಕೊಂಡರು. ಅದನ್ನು ಕೂಡ ವೇದಿಕೆಯಲ್ಲಿ ಸಲ್ಲು ನೆನಪು ಮಾಡಿಕೊಂಡರು. ‘ನಾನು ಸುದೀಪ್​ ಅವರ ಕೆಲಸಗಳನ್ನು ನೋಡಿದ್ದೇನೆ. ಅವರು ಅದ್ಭುತ ನಟ. ನಾನು ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಸಹಾಯ ಮಾಡುತ್ತೇನೆ ಎಂಬುದಲ್ಲ. ಅವರು ಅತ್ಯುತ್ತಮ ಸಿನಿಮಾ ಮಾಡಿದಾಗ ಮಾತ್ರ ನಾನು ಬೆಂಬಲ ನೀಡಲು ಸಾಧ್ಯ. ನಾನು ಅವರಿಗೆ ಸಪೋರ್ಟ್​ ಮಾಡ್ತೀನಿ ಅಂತ ಅವರು ತಿಳಿದುಕೊಂಡಿದ್ದಾರೆ. ಅದರೆ ಅದು ನಿಜವಲ್ಲ. ಅವರೇ ನನಗೆ ಸಪೋರ್ಟ್​ ಮಾಡುತ್ತಿದ್ದಾರೆ’ ಎಂಬುದು ಸಲ್ಮಾನ್​ ಖಾನ್​ ಮಾತು.

ಇದನ್ನೂ ಓದಿ
Image
Kichcha Sudeep: ಮುಂಬೈ, ಚೆನ್ನೈನಿಂದಲೂ ಸುದೀಪ್​ ಕಟೌಟ್​ಗೆ ಬಂತು ಬೇಡಿಕೆ; ಹೇಗಿದೆ ನೋಡಿ ‘ವಿಕ್ರಾಂತ್​ ರೋಣ’ ಕ್ರೇಜ್​
Image
Vikrant Rona: ಟಿ-ಶರ್ಟ್​, ಜಾಕೆಟ್​, ಕಾಫಿ ಮಗ್​.. ಎಲ್ಲೆಲ್ಲೂ ಕಿಚ್ಚ; ಹೇಗಿದೆ ನೋಡಿ ‘ವಿಕ್ರಾಂತ್​ ರೋಣ’ ಹವಾ
Image
‘ವಿಕ್ರಾಂತ್​ ರೋಣ’ ಸುದ್ದಿಗೋಷ್ಠಿಯಲ್ಲಿ ವೇದಿಕೆ ಹಂಚಿಕೊಂಡ ಸುದೀಪ್​-ಪ್ರಿಯಾ; ಇಲ್ಲಿವೆ ಫೋಟೋಸ್​
Image
Kichcha Sudeep: ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಅಮಿತಾಭ್​ ಬಚ್ಚನ್​ ಸಾಥ್​; ಕಿಚ್ಚ ಸುದೀಪ್​ ಸಿನಿಮಾಗೆ ‘ಬಿಗ್​ ಬಿ’ ಬೆಂಬಲ

‘ವಿಕ್ರಾಂತ್​ ರೋಣ’ ಚಿತ್ರವನ್ನು ಸಲ್ಮಾನ್​ ಖಾನ್​ ಅವರು ಹಿಂದಿಯಲ್ಲಿ ವಿತರಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಕೂಡ ನಟಿಸಿದ್ದಾರೆ. ರಿತೇಶ್​ ದೇಶಮುಖ್​, ಜೆನಿಲಿಯಾ ಡಿಸೋಜಾ ಮುಂತಾದವರು ಕೂಡ ಪ್ರೀ-ರಿಲೀಸ್​ ಇವೆಂಟ್​ಗೆ ಆಗಮಿಸಿ ಸುದೀಪ್​ಗೆ ಶುಭ ಹಾರೈಸಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ