Kichcha Sudeep: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡ ‘ವಿಕ್ರಾಂತ್​ ರೋಣ’ ಟ್ರೇಲರ್​

Vikrant Rona Trailer: ಕಿಚ್ಚ ಸುದೀಪ್​ ಅವರ ಅಭಿಮಾನಿಗಳ ವಲಯದಲ್ಲಿ ‘ವಿಕ್ರಾಂತ್​ ರೋಣ’ ಟ್ರೇಲರ್​ ವೈರಲ್​ ಆಗಿದೆ. ಪರಭಾಷೆ ಪ್ರೇಕ್ಷಕರು ಕೂಡ ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ.

Kichcha Sudeep: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡ ‘ವಿಕ್ರಾಂತ್​ ರೋಣ’ ಟ್ರೇಲರ್​
ಕಿಚ್ಚ ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on: Jun 24, 2022 | 10:17 AM

ಬಹುನಿರೀಕ್ಷಿತ ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿ ಧೂಳೆಬ್ಬಿಸುತ್ತಿದೆ. ಕರ್ನಾಟಕ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳ ಸಿನಿಪ್ರಿಯರು ಕೂಡ ಈ ಟ್ರೇಲರ್​ ನೋಡಿ ಫಿದಾ ಆಗಿದ್ದಾರೆ. ಕಿಚ್ಚ ಸುದೀಪ್​ (Kichcha Sudeep) ಅಭಿನಯದ ಈ ಚಿತ್ರದ ಟ್ರೇಲರ್​ ಗುರುವಾರ (ಜೂನ್​ 23) ರಿಲೀಸ್​ ಆಯಿತು. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ಅತ್ಯುತ್ತಮ ಗುಣಮಟ್ಟದಲ್ಲಿ ಮೂಡಿಬಂದಿರುವ ಟ್ರೇಲರ್​ನಲ್ಲಿ ಅನೇಕ ಅಂಶಗಳು ಹೈಲೈಟ್​ ಆಗಿವೆ. ಅನೂಪ್​ ಭಂಡಾರಿ ನಿರ್ದೇಶನ, ಜಾಕ್​ ಮಂಜು ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾ ಜುಲೈ 28ರಂದು ಬಿಡುಗಡೆ ಆಗಲಿದೆ. ರಿಲೀಸ್​ ದಿನಾಂಕ ಹತ್ತಿರ ಆದಂತೆಲ್ಲ ಫ್ಯಾನ್ಸ್​ ನಿರೀಕ್ಷೆ ಕೂಡ ಹೆಚ್ಚುತ್ತಿದೆ. ಟ್ರೇಲರ್ (Vikrant Rona Trailer)​ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ. ಇದರಿಂದ ಚಿತ್ರತಂಡಕ್ಕೆ ಹೊಸ ಹುಮ್ಮಸ್ಸು ಬಂದಿದೆ.

‘ವಿಕ್ರಾಂತ್​ ರೋಣ’ ಸಿನಿಮಾ 3ಡಿಯಲ್ಲಿ ಮೂಡಿಬಂದಿದೆ. ದೇಶದ ಪ್ರಮುಖ ನಗರಗಳಲ್ಲಿ ಸುದ್ದಿಗೋಷ್ಠಿ ಆಯೋಜಿಸುವ ಮೂಲಕ ಆಯ್ದ ಸೆಲೆಬ್ರಿಟಿಗಳಿಗೆ 3ಡಿ ಟ್ರೇಲರ್​ ತೋರಿಸಲಾಗಿದೆ. ಇನ್ನು, ಯೂಟ್ಯೂಬ್​ನಲ್ಲಿ ಜನರು ಮುಗಿಬಿದ್ದು ಟ್ರೇಲರ್​ ನೋಡಿದ್ದಾರೆ. ರಿಲೀಸ್​ ಆಗಿ 16 ಗಂಟೆ ಕಳೆಯುವುದರೊಳಗೆ ಕನ್ನಡದಲ್ಲಿ 5.5 ಮಿಲಿಯನ್​ (55 ಲಕ್ಷ) ಬಾರಿ ವೀಕ್ಷಣೆ ಕಂಡಿದೆ. ಅದೇ ರೀತಿ, ಹಿಂದಿಯಲ್ಲಿ 20 ಲಕ್ಷ, ತೆಲುಗಿನಲ್ಲಿ 33 ಲಕ್ಷ, ತಮಿಳಿನಲ್ಲಿ 13 ಲಕ್ಷ, ಮಲಯಾಳಂನಲ್ಲಿ 12 ಲಕ್ಷ ಹಾಗೂ ಇಂಗ್ಲಿಷ್​ನಲ್ಲಿ 3 ಲಕ್ಷ ವೀವ್ಸ್​ ಆಗಿದೆ. ಎಲ್ಲ ಸೇರಿ 1.36 ಕೋಟಿಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಬಹಳ ಅದ್ದೂರಿಯಾಗಿ ‘ವಿಕ್ರಾಂತ್​ ರೋಣ’ ಬಿಡುಗಡೆಗೆ ಪ್ಲ್ಯಾನ್​ ಮಾಡಲಾಗಿದೆ. ಈ ಸಿನಿಮಾದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಕೂಡ ನಟಿಸಿದ್ದಾರೆ. ‘ರಾರಾ ರಕ್ಕಮ್ಮ..’ ಹಾಡಿನ ಜೊತೆಗೆ ಒಂದು ದೃಶ್ಯದಲ್ಲೂ ಅವರು ಅಭಿನಯಿಸಿದ್ದಾರೆ ಎಂಬುದು ವಿಶೇಷ. ಎಲ್ಲ ಕಡೆ ಸುದ್ದಿಗೋಷ್ಠಿಗೆ ಬಂದು ಅವರು ಚಿತ್ರದ ಪರ ಪ್ರಚಾರ ಮಾಡುತ್ತಿದ್ದಾರೆ. ನಿರೂಪ್​ ಭಂಡಾರಿ, ನೀತಾ ಅಶೋಕ್​ ಮುಂತಾದವರು ಕೂಡ ನಟಿಸಿದ್ದಾರೆ.

ಇದನ್ನೂ ಓದಿ
Image
‘ವಿಕ್ರಾಂತ್ ರೋಣ’ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಿಂಚಿದ ಸುದೀಪ್​-ಜಾಕ್ವೆಲಿನ್
Image
Vikranth Rona Press Meet: ಸುದೀಪ್ ಜತೆ​ ‘ವಿಕ್ರಾಂತ್​ ರೋಣ’ ಟ್ರೇಲರ್​ ನೋಡಲು ಬಂದ ಸೆಲೆಬ್ರಿಟಿಗಳು; ಇಲ್ಲಿದೆ ಲೈವ್​ ವಿಡಿಯೋ
Image
‘ವಿಕ್ರಾಂತ್​ ರೋಣ’ ರಿಲೀಸ್​ ಸಮಯದಲ್ಲಿ ಸುದೀಪ್​ಗೆ ಸ್ಟ್ರೆಸ್​ ಇದೆಯಾ? ನೇರ ಉತ್ತರ ನೀಡಿದ ಕಿಚ್ಚ
Image
‘ಮತ್ತೊಂದು ದೊಡ್ಡ ಚಿತ್ರ ಬರ್ತಿದೆ’: ‘ವಿಕ್ರಾಂತ್​ ರೋಣ’ ಬಗ್ಗೆ ಪರಭಾಷೆ ಮಂದಿಗೆ ಮೊದಲೇ ಎಚ್ಚರಿಕೆ ನೀಡಿದ ಆರ್​ಜಿವಿ

ಸುದೀಪ್​ ಅವರ ಅಭಿಮಾನಿಗಳ ವಲಯದಲ್ಲಿ ಈ ಟ್ರೇಲರ್​ ವೈರಲ್​ ಆಗಿದೆ. ಪರಭಾಷೆ ಪ್ರೇಕ್ಷಕರು ಕೂಡ ಇದನ್ನು ಮೆಚ್ಚಿಕೊಂಡಿದ್ದು, ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಇದರ ಛಾಯಾಗ್ರಹಣ, ಕಲಾ ನಿರ್ದೇಶನ, ಹಿನ್ನೆಲೆ ಸಂಗೀತ ಮುಂತಾದ ಅಂಶಗಳ ಬಗ್ಗೆ ಸಿನಿಪ್ರಿಯರು ಮಾತನಾಡುತ್ತಿದ್ದಾರೆ. ಕಿಚ್ಚ ಸುದೀಪ್​ ಅವರ ವೃತ್ತಿಜೀವನಕ್ಕೆ ಈ ಚಿತ್ರ ದೊಡ್ಡ ಮೈಲೇಜ್​ ನೀಡುವ ನಿರೀಕ್ಷೆ ಇದೆ.

ಇದನ್ನೂ ಓದಿ: Vikrant Rona: ಮುಂಬೈನಲ್ಲಿ ಸುದೀಪ್​ ಜತೆ ರಕ್ಕಮ್ಮ ಜಾಕ್ವೆಲಿನ್​ ಫರ್ನಾಂಡಿಸ್​ ಮಿರಿಮಿರಿ ಮಿಂಚಿಂಗ್

ಸಿನಿಮಾ ಕೆಲಸಕ್ಕೆ ಬ್ರೇಕ್​ ನೀಡಿ ಫೀಲ್ಡ್​ಗೆ ಇಳಿದು ಕ್ರಿಕೆಟ್​ ಆಡಿದ ಸುದೀಪ್​; ಮ್ಯಾಚ್ ಯಾರ ಜೊತೆ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ