‘ವಿಕ್ರಾಂತ್ ರೋಣ’ ಸಿನಿಮಾ ಕಲೆಕ್ಷನ್​ ಎಷ್ಟಾಗಲಿದೆ? ‘ಕಿಚ್ಚ’ ಸುದೀಪ್ ಕೊಟ್ರು ಲೆಕ್ಕಾಚಾರ

ಇಂದು (ಜೂನ್​ 23) ಮುಂಬೈನಲ್ಲಿ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸುದೀಪ್​, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ಪಾಲ್ಗೊಂಡಿದ್ದರು. ಈ ವೇಳೆ ನಾನಾ ರೀತಿಯ ಪ್ರಶ್ನೆಗಳು ಅವರನ್ನು ಎದುರುಗೊಂಡವು.

‘ವಿಕ್ರಾಂತ್ ರೋಣ’ ಸಿನಿಮಾ ಕಲೆಕ್ಷನ್​ ಎಷ್ಟಾಗಲಿದೆ? ‘ಕಿಚ್ಚ’ ಸುದೀಪ್ ಕೊಟ್ರು ಲೆಕ್ಕಾಚಾರ
ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 23, 2022 | 10:41 PM

‘ವಿಕ್ರಾಂತ್​ ರೋಣ’ ಸಿನಿಮಾದ (Vikrant Movie) ಟ್ರೇಲರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಈ ಚಿತ್ರದಿಂದ ಸಿನಿಮಾದ ಬಗ್ಗೆ ಇದ್ದ ನಿರೀಕ್ಷೆ ಹೆಚ್ಚಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಪರಭಾಷೆಯಲ್ಲಿ ದೊಡ್ಡದೊಡ್ಡ ಸ್ಟಾರ್​ಗಳು ಚಿತ್ರವನ್ನು ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ. ಇದರಿಂದ ಚಿತ್ರಕ್ಕೆ ಬೂಸ್ಟ್ ಸಿಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಹಲವು ಚಿತ್ರಗಳು ನೂರಾರು ಕೋಟಿ ಕಲೆಕ್ಷನ್ ಮಾಡುತ್ತಿವೆ. ಹೀಗಾಗಿ, ‘ವಿಕ್ರಾಂತ್​ ರೋಣ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಎಲ್ಲರಿಗೂ ಒಂದು ನಿರೀಕ್ಷೆ ಇದೆ. ಈ ವಿಚಾರಗಳ ಬಗ್ಗೆ ಸುದೀಪ್ (Kichcha Sudeep) ಮಾತನಾಡಿದ್ದಾರೆ.

ಇಂದು (ಜೂನ್​ 23) ಮುಂಬೈನಲ್ಲಿ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸುದೀಪ್​, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ಪಾಲ್ಗೊಂಡಿದ್ದರು. ಈ ವೇಳೆ ನಾನಾ ರೀತಿಯ ಪ್ರಶ್ನೆಗಳು ಅವರನ್ನು ಎದುರುಗೊಂಡವು. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನೀವು ಐಷಾರಾಮಿ ಹೋಟೆಲ್​ಗೆ ಹೋಗುತ್ತಿದ್ದೀರಿ ಎಂದರೆ ನಿಮಗೆ ಅಂತಹ ತಟ್ಟೆಯೇ ಬೇಕು. ನಮ್ಮ ಸಿನಿಮಾವನ್ನು ನಾವೇ ಗೌರವಿಸಿಲ್ಲ ಎಂದರೆ ಇನ್ನು ಯಾರು ಗೌರವಿಸುತ್ತಾರೆ? ಇದು ದೊಡ್ಡ ಸಿನಿಮಾ, ದೊಡ್ಡ ಆಲೋಚನೆ. ನಮಗೆ ದೊಡ್ಡ ಫಲಿತಾಂಶ ಬೇಕು ಎಂದರೆ ಇದೇ ರೀತಿಯ ಮಾರ್ಗದಲ್ಲಿ ಹೋಗಬೇಕು’ ಎಂದಿದ್ದಾರೆ. ಈ ಮೂಲಕ ಈ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇದೆ ಎಂದಿದ್ದಾರೆ.

‘ಕೊವಿಡ್ ಬಂದಿರಲಿಲ್ಲ ಎಂದರೆ ಅನೇಕರಿಗೆ ಕೊರಿಯನ್ ಸೀರಿಸ್ ಹಾಗೂ ಸಿನಿಮಾ ಬಗ್ಗೆ ಅರಿವೇ ಇರುತ್ತಿರಲಿಲ್ಲ. ಲಾಕ್​ಡೌನ್ ಸಂದರ್ಭದಲ್ಲಿ ನಮಗೆ ಸಾಕಷ್ಟು ಸಮಯ ಸಿಕ್ಕಿತು. ತೆಲುಗು ಇಂಡಸ್ಟ್ರಿಯಿಂದ ಒಂದು ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ ಎಂದರೆ ನಾವು ಅದನ್ನು ಕಾಂಪಿಟೇಷನ್ ಎಂದು ಭಾವಿಸಬಾರದು. ನಾವೂ ಇಲ್ಲಿದ್ದೇವೆ (ಬಾಲಿವುಡ್​) ಎಂದು ಹೇಳುವಷ್ಟು ಕನ್ನಡ ಇಂಡಸ್ಟ್ರಿ ಬೆಳೆದಿದೆ. ಕೇವಲ ದಕ್ಷಿಣ ಭಾರತವಲ್ಲ ಎಲ್ಲಾ ಭಾಷೆಯ ಚಿತ್ರಗಳು ಥಿಯೇಟರ್ ರಿಲೀಸ್​ಗೆ ಅರ್ಹವಾಗಿದೆ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ
Image
Kichcha Sudeep: ಭಯಾನಕ ಕಥೆಯಲ್ಲಿ ಹೊಸ ಅಧ್ಯಾಯ ಆರಂಭ; ಗಮನ ಸೆಳೆದ ‘ವಿಕ್ರಾಂತ್ ರೋಣ’ ಟ್ರೇಲರ್
Image
‘ಮತ್ತೊಂದು ದೊಡ್ಡ ಚಿತ್ರ ಬರ್ತಿದೆ’: ‘ವಿಕ್ರಾಂತ್​ ರೋಣ’ ಬಗ್ಗೆ ಪರಭಾಷೆ ಮಂದಿಗೆ ಮೊದಲೇ ಎಚ್ಚರಿಕೆ ನೀಡಿದ ಆರ್​ಜಿವಿ
Image
Vikrant Rona: ಬಿಡುಗಡೆಗೂ ಮುನ್ನ ವಿದೇಶದಲ್ಲಿ 10 ಕೋಟಿ ರೂ. ಬಿಸ್ನೆಸ್​ ಮಾಡಿದ ‘ವಿಕ್ರಾಂತ್​ ರೋಣ’: ಸುದೀಪ್​ ಫ್ಯಾನ್ಸ್​ ಖುಷ್​
Image
ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಚಿತ್ರದ 3ಡಿ ದೃಶ್ಯ ನೋಡಿ ವಿಮರ್ಶೆ ನೀಡಿದ ಆರ್​ಜಿವಿ

‘ವಿಕ್ರಾಂತ್ ರೋಣ’ ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎನ್ನುವ ನಿರೀಕ್ಷೆ ಇದೆಯೇ ಎಂದು ಕೇಳಲಾಯಿತು. ಇದಕ್ಕೆ ಸುದೀಪ್​ ನಗುತ್ತಲೇ ಉತ್ತರಿಸಿದರು. ‘ಒಂದು ಲಕ್ಷ ರೂಪಾಯಿಯ ಕಾರನ್ನು ಚಲಾಯಿಸುವ ವ್ಯಕ್ತಿ ಸಂತೋಷವಾಗಿರುವುದನ್ನು ನಾನು ನೋಡಿದ್ದೇನೆ. ಅದೇ ರೀತಿ ಸಾಮಾನ್ಯ ಕಾರು ಹೊಂದಿರುವವರು ಸಂತೋಷವಾಗಿರುವುದನ್ನು ನಾನು ನೋಡಿದ್ದೇನೆ. 1000 ಕೋಟಿ ಒಬ್ಬ ವ್ಯಕ್ತಿಯನ್ನು ಸಂತೋಷಪಡಿಸುತ್ತದೆ ಎಂದರೆ ಬಹುಶಃ ನಾನು 2000 ಕೋಟಿ ರೂ. ಗಳಿಸಲು ಬಯಸುತ್ತೇನೆ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: ಮುಂಬೈನಲ್ಲಿ ಸುದೀಪ್​ ಜತೆ ರಕ್ಕಮ್ಮ ಜಾಕ್ವೆಲಿನ್​ ಫರ್ನಾಂಡಿಸ್​ ಮಿರಿಮಿರಿ ಮಿಂಚಿಂಗ್

ಭಯಾನಕ ಕಥೆಯಲ್ಲಿ ಹೊಸ ಅಧ್ಯಾಯ ಆರಂಭ; ಗಮನ ಸೆಳೆದ ‘ವಿಕ್ರಾಂತ್ ರೋಣ’ ಟ್ರೇಲರ್ 

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ