- Kannada News Photo gallery Vikrant Rona Mumbai press meet: Kichcha Sudeep and Jacqueline Fernandez photos
Vikrant Rona: ಮುಂಬೈನಲ್ಲಿ ಸುದೀಪ್ ಜತೆ ರಕ್ಕಮ್ಮ ಜಾಕ್ವೆಲಿನ್ ಫರ್ನಾಂಡಿಸ್ ಮಿರಿಮಿರಿ ಮಿಂಚಿಂಗ್
‘ವಿಕ್ರಾಂತ್ ರೋಣ’ ಟ್ರೇಲರ್ ಲಾಂಚ್ ಸಲುವಾಗಿ ಮುಂಬೈನಲ್ಲಿ ಸುದ್ದಿಗೋಷ್ಠಿ ಮಾಡಲಾಗಿದೆ. ಇದರಲ್ಲಿ ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಇಡೀ ತಂಡದವರು ಭಾಗಿ ಆಗಿದ್ದಾರೆ.
Updated on:Jun 23, 2022 | 3:56 PM

Vikranth Rona Mumbai press meet: Kichcha Sudeep and Jacqueline Fernandez photos

Vikranth Rona Mumbai press meet: Kichcha Sudeep and Jacqueline Fernandez photos

ಗಡಂಗ್ ರಕ್ಕಮ್ಮ ಎಂಬ ಪಾತ್ರವನ್ನು ಜಾಕ್ವೆಲಿನ್ ಫರ್ನಾಂಡಿಸ್ ಮಾಡಿದ್ದಾರೆ. ಅವರು ನರ್ತಿಸಿರುವ ‘ರಾರಾ ರಕ್ಕಮ್ಮ..’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಎಲ್ಲ ವೇದಿಕೆಗಳಲ್ಲೂ ಈ ಸ್ಟೆಪ್ ಹಾಕುವ ಮೂಲಕ ಅವರು ಕ್ರೇಜ್ ಹೆಚ್ಚಿಸಿದ್ದಾರೆ.

ಹಾಡಿನಲ್ಲಿ ಮಾತ್ರವಲ್ಲದೇ ಒಂದು ದೃಶ್ಯದಲ್ಲಿಯೂ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಇದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ಕನ್ನಡದಲ್ಲಿ ಇದು ಅವರ ಮೊದಲ ಚಿತ್ರ. ಈ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.

‘ವಿಕ್ರಾಂತ್ ರೋಣ’ ಚಿತ್ರ 3ಡಿಯಲ್ಲಿ ಮೂಡಿಬಂದಿರುವುದರಿಂದ ಸಾಕಷ್ಟು ಹೈಪ್ ಸೃಷ್ಟಿ ಆಗಿದೆ. ಜಾಕ್ ಮಂಜು ಅವರು ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ.
Published On - 3:15 pm, Thu, 23 June 22




