Updated on: Jun 24, 2022 | 7:30 AM
ಎಳನೀರಿನಲ್ಲಿ ಆರೋಗ್ಯ ಪ್ರಯೋಜಕ ಅಂಶಗಳಿವೆ. ಜೊತೆಗೆ ದೇಹದ ಉಷ್ಣಾಂಶವನ್ನು ಕಡಿಮೆಗೊಳಿಸುತ್ತದೆ. ಬಾಡಿ ಹೀಟ್ ಆಗಿದ್ದರೆ ದಿನಕ್ಕೆ ಒಂದೊಂದು ಎಳನೀರು ಸೇವಿಸಿ.
ಮಜ್ಜಿಗೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ದೇಹ ಹೀಟ್ ಆಗಿದ್ದರೆ ಒಂದು ಲೋಟ ಮಜ್ಜಿಗೆ ಸೇವಿಸಿ.
ಸೌತೆಕಾಯಿ ಹೆಚ್ಚು ನೀರಿನಾಂಶದಿಂದ ಕೂಡಿರುತ್ತದೆ. ದೇಹದ ಉಷ್ಣತೆ ಹೆಚ್ಚಾದರೆ ಸೌತೆಕಾಯಿ ಸೇವಿಸಿ.
ನಿಂಬೆಹಣ್ಣಿನ ಜ್ಯೂಸ್ ಕುಡಿದರೆ ದೇಹ ತಂಪಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶದಿಂದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ.
ಮೆಂತೆ ದೇಹಕ್ಕೆ ತಂಪು. ಬಾಡಿ ಹೀಟ್ ಆಗಿದಾಗ ಮೆಂತೆಯಿಂದ ಮಾಡುವ ರೈಸ್ (ಮೆಂತೆ ಅನ್ನ) ಸೇವಿಸಿ. ಅಥವಾ ನೀರಿನ ಜೊತೆ ಮೆಂತೆ ಸೇವಿಸಿ.