Vikrant Rona Review: ವಿದೇಶಿ ಸೆನ್ಸಾರ್​ ಸದಸ್ಯರಿಂದ ‘ವಿಕ್ರಾಂತ್​ ರೋಣ’ ವಿಮರ್ಶೆ; ಕ್ಲೈಮ್ಯಾಕ್ಸ್​ ಬಗ್ಗೆ ವಿಶೇಷ ಮೆಚ್ಚುಗೆ

Vikrant Rona First Review: ವಿದೇಶದಲ್ಲೂ ‘ವಿಕ್ರಾಂತ್​ ರೋಣ’ ಸಿನಿಮಾ ಭರ್ಜರಿಯಾಗಿ ಬಿಡುಗಡೆ ಆಗಿದೆ. ಅದಕ್ಕೂ ಮುನ್ನ ಸೆನ್ಸಾರ್​ ಮಂಡಳಿ ಸದಸ್ಯರೊಬ್ಬರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

Vikrant Rona Review: ವಿದೇಶಿ ಸೆನ್ಸಾರ್​ ಸದಸ್ಯರಿಂದ ‘ವಿಕ್ರಾಂತ್​ ರೋಣ’ ವಿಮರ್ಶೆ; ಕ್ಲೈಮ್ಯಾಕ್ಸ್​ ಬಗ್ಗೆ ವಿಶೇಷ ಮೆಚ್ಚುಗೆ
ಕಿಚ್ಚ ಸುದೀಪ್
Follow us
TV9 Web
| Updated By: Digi Tech Desk

Updated on:Jul 28, 2022 | 9:25 AM

ಸಖತ್​ ನಿರೀಕ್ಷೆ ಮೂಡಿಸಿದ್ದ ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾ ಇಂದು (ಜುಲೈ 28) ಎಲ್ಲೆಡೆ ರಿಲೀಸ್​ ಆಗಿದೆ. ಅಭಿಮಾನಿಗಳು ಮುಗಿಬಿದ್ದು ಈ ಸಿನಿಮಾವನ್ನು ನೋಡುತ್ತಿದ್ದಾರೆ. ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ ಪಡೆದ ಪ್ರೇಕ್ಷಕರ ಸಡಗರ ಜೋರಾಗಿದೆ. ಕಿಚ್ಚ ಸುದೀಪ್ (Kichcha Sudeep)​ ಅವರ ನಟನೆ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದ್ದೂರಿ ಮೇಕಿಂಗ್​, 3ಡಿ ದೃಶ್ಯ ವೈಭವದ ಬಗ್ಗೆಯೂ ಉತ್ತಮ ಮಾತುಗಳು ಕೇಳಿಬರುತ್ತಿವೆ. ಅದಕ್ಕೂ ಮುನ್ನ ವಿದೇಶಿ ಸೆನ್ಸಾರ್​ ಮಂಡಳಿ ಸದಸ್ಯ ಉಮೈರ್​ ಸಂಧು ಅವರಿಂದ ಬೆಸ್ಟ್​ ವಿಮರ್ಶೆ (Vikrant Rona Review) ಸಿಕ್ಕಿದೆ. ‘ವಿಕ್ರಾಂತ್​ ರೋಣ’ ನೋಡಿದ ಅವರು ಭೇಷ್​ ಎಂದಿದ್ದಾರೆ. ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಚಿತ್ರದ ಮುಖ್ಯ ಅಂಶವೇ ಕ್ಲೈಮ್ಯಾಕ್ಸ್​ ಎಂದು ಅವರು ಹೇಳಿದ್ದಾರೆ.

ವಿದೇಶದಲ್ಲಿ ರಿಲೀಸ್​ ಆಗುವ ಭಾರತದ ಬಹುತೇಕ ಸಿನಿಮಾಗಳ ಬಗ್ಗೆ ಉಮೈರ್​ ಸಂಧು ಅವರು ವಿಮರ್ಶೆ ಹಂಚಿಕೊಳ್ಳುತ್ತಾರೆ. ‘ಕೆಜಿಎಫ್​: ಚಾಪ್ಟರ್​ 2’ ಬಳಿಕ ಕನ್ನಡ ಚಿತ್ರರಂಗದಿಂದ ಮತ್ತೊಂದು ಅದ್ಭುತ ಸಿನಿಮಾ ಬಂದಿದೆ. ಅಭಿಮಾನಿಗಳು ಮತ್ತು ಪ್ರೇಕ್ಷಕರು ಸಂಭ್ರಮಿಸಬೇಕಾದ ಸಮಯ ಇದು. ಕನ್ನಡ ಚಿತ್ರರಂಗಕ್ಕೆ ಇದು ಅತ್ಯುತ್ತಮ ಕಾಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
Vikrant Rona: ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಮೊದಲಾರ್ಧದ ವಿಮರ್ಶೆ ಇಲ್ಲಿದೆ
Image
Vikrant Rona: ವಿಶ್ವಾದ್ಯಂತ ಘರ್ಜಿಸುತ್ತಿರುವ ‘ವಿಕ್ರಾಂತ್​ ರೋಣ’; ಸುದೀಪ್​ ಎಂಟ್ರಿಗೆ ಫ್ಯಾನ್ಸ್​ ಫಿದಾ
Image
‘ವಿಕ್ರಾಂತ್​ ರೋಣ’ ರಿಲೀಸ್​ಗೂ ಮುನ್ನ ಸುದೀಪ್​ಗೆ ಪ್ರೀತಿಯಿಂದ ವಿಶ್ ಮಾಡಿದ ನಿರ್ದೇಶಕ ರಾಜಮೌಳಿ
Image
‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಕತ್ರಿನಾ ಜಪ ಮಾಡಿದ ಸಲ್ಮಾನ್​ ಖಾನ್​; ಕಾರಣ ಏನು?

‘ದಕ್ಷಿಣ ಭಾರತದಲ್ಲಿ ಕಿಚ್ಚ ಸುದೀಪ್​ ಅವರು ಸೂಪರ್​ ಸ್ಟಾರ್​. ಉತ್ತರ ಭಾರತದಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ವಿಕ್ರಾಂತ್​ ರೋಣ ಸಿನಿಮಾದಿಂದ ಅವರು ಹಿಂದಿ ಪ್ರೇಕ್ಷಕರಿಗೂ ಹೆಚ್ಚು ಇಷ್ಟ ಆಗುತ್ತಾರೆ. ಈ ಚಿತ್ರದಲ್ಲಿ ಅವರ ಸಾಹಸ ದೃಶ್ಯಗಳು ಉತ್ಕೃಷ್ಟವಾಗಿವೆ’ ಎಂದು ಉಮೈರ್​ ಸಂಧು ಟ್ವೀಟ್​ ಮಾಡಿದ್ದಾರೆ. ಅವರ ಮಾತುಗಳನ್ನು ಕೇಳಿದ ಬಳಿಕ ಚಿತ್ರದ ಮೇಲಿನ ಹೈಪ್​ ಇನ್ನಷ್ಟು ಹೆಚ್ಚಿದೆ.

‘ಇದು ಪಕ್ಕಾ ಪೈಸಾ ವಸೂಲ್​ ಸಿನಿಮಾ. ಅನೂಪ್​ ಭಂಡಾರಿ ಅವರ ನಿರ್ದೇಶನ ಚೆನ್ನಾಗಿದೆ. ಕಥೆ, ಸಾಹಸದೃಶ್ಯ, ಛಾಯಾಗ್ರಹಣ ಎಲ್ಲವೂ ಉತ್ತಮ ಗಣಮಟ್ಟದಲ್ಲಿ ಇವೆ’ ಎಂದು ಉಮೈರ್​ ಸಂಧು ಹೇಳಿದ್ದಾರೆ. ಅವರು ಹಿಂದಿ ಅವತರಣಿಕೆಯನ್ನು ನೋಡಿ ಈ ವಿಮರ್ಶೆ ತಿಳಿಸಿದ್ದಾರೆ.

Published On - 8:08 am, Thu, 28 July 22

News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ