Ladki: ‘ಹುಡುಗಿ’ ಸಿನಿಮಾ ನೋಡಿ ಸೆನ್ಸಾರ್​ನವರಿಗೇ ಸುಸ್ತ್​; ಹತ್ತಾರು ಕಡೆ ಕತ್ತರಿ ಹಾಕಲು ನಿರ್ದೇಶಕರಿಗೆ ಸೂಚನೆ

Ram Gopal Varma | Ladki Movie: ಇಷ್ಟೆಲ್ಲ ದೃಶ್ಯಗಳನ್ನು ತೆಗೆದು ಹಾಕಿದ ಮೇಲೆ ಸಿನಿಮಾದಲ್ಲಿ ಇನ್ನೇನು ಉಳಿಯಲಿದೆ ಎಂದು ಸಿನಿಪ್ರಿಯರು ಕೇಳುತ್ತಿದ್ದಾರೆ. ‘ಲಡ್ಕಿ’ ಸಿನಿಮಾಗೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ.

Ladki: ‘ಹುಡುಗಿ’ ಸಿನಿಮಾ ನೋಡಿ ಸೆನ್ಸಾರ್​ನವರಿಗೇ ಸುಸ್ತ್​; ಹತ್ತಾರು ಕಡೆ ಕತ್ತರಿ ಹಾಕಲು ನಿರ್ದೇಶಕರಿಗೆ ಸೂಚನೆ
‘ಹುಡುಗಿ’ ಸಿನಿಮಾ ಪೋಸ್ಟರ್​
Follow us
TV9 Web
| Updated By: ಮದನ್​ ಕುಮಾರ್​

Updated on:Jul 14, 2022 | 2:31 PM

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma) ಅವರ ಶೈಲಿಯೇ ಭಿನ್ನ. ಅವರು ಸಿನಿಮಾ ಮಾಡಿದರೆ ಅದರಲ್ಲಿ ಏನಾದರೊಂದು ಕಿರಿಕ್​ ಇದ್ದೇ ಇರುತ್ತದೆ. ಸಿನಿಮಾ ಆದರೂ ಸರಿ, ರಿಯಲ್​ ಲೈಫ್​ ಆದರೂ ಸರಿ.. ಆಗಾಗ ಅವರು ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರು ನಿರ್ದೇಶನ ಮಾಡಿರುವ ‘ಲಡ್ಕಿ’ ಸಿನಿಮಾ (Ladki Movie) ಬಿಡುಗಡೆಗೆ ಸಜ್ಜಾಗಿದೆ. ಕನ್ನಡಕ್ಕೂ ಈ ಚಿತ್ರ ಡಬ್​ ಆಗಿದ್ದು, ‘ಹುಡುಗಿ’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾದಲ್ಲಿ ಪೂಜಾ ಭಾಲೇಕರ್​ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ತುಂಬ ಬೋಲ್ಡ್​ ಆಗಿ ಅವರು ನಟಿಸಿದ್ದಾರೆ ಎಂಬುದಕ್ಕೆ ಟ್ರೇಲರ್​ ಮತ್ತು ಪೋಸ್ಟರ್​ಗಳು ಸಾಕ್ಷಿ ಒದಗಿಸಿವೆ. ಈ ಸಿನಿಮಾ ನೋಡಿದ ಸೆನ್ಸಾರ್​ ಮಂಡಳಿಯವರು (Censor Board) ಸುಸ್ತ್​ ಆಗಿದ್ದಾರೆ. ಹತ್ತು ಹಲವು ಕಡೆಗಳಲ್ಲಿ ಕತ್ತರಿ ಹಾಕುವಂತೆ ನಿರ್ದೇಶಕರಿಗೆ ಸೆನ್ಸಾರ್​ ಮಂಡಳಿ ಸದಸ್ಯರು ಸೂಚನೆ ನೀಡಿದ್ದಾರೆ.

ಮಾರ್ಷಲ್​ ಆರ್ಟ್ಸ್​ ಕುರಿತಾಗಿ ‘ಲಡ್ಕಿ’ ಸಿನಿಮಾ ಮೂಡಿಬಂದಿದೆ. ಆದರೂ ಇದರಲ್ಲಿ ಸಿಕ್ಕಾಪಟ್ಟೆ ಹಸಿಬಿಸಿ ದೃಶ್ಯಗಳು ಇವೆ ಎನ್ನಲಾಗಿದೆ. ಅದೇ ರೀತಿ, ಸಂಭಾಷಣೆಗಳು ಕೂಡ ತುಂಬಾ ಬೋಲ್ಡ್​ ಆಗಿವೆ. ಹಲವು ಸಂಭಾಷಣೆಗಳನ್ನು ಮ್ಯೂಟ್​ ಮಾಡಬೇಕು, ನಾಯಕಿಯ ಎದೆಸೀಳನ್ನು ತೀರಾ ಕ್ಲೋಸಪ್​ನಲ್ಲಿ ತೋರಿಸಿದ 12 ದೃಶ್ಯಗಳನ್ನು ಡಿಲೀಟ್​ ಮಾಡಬೇಕು ಎಂದು ಸೆನ್ಸಾರ್​ ಮಂಡಳಿಯವರು ಸೂಚಿಸಿದ್ದಾರೆ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಇದನ್ನೂ ಓದಿ
Image
‘ಹುಡುಗಿ’ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ರಾಮ್​ ಗೋಪಾಲ್​ ವರ್ಮಾ; ಜುಲೈ 15ಕ್ಕೆ ಸಿನಿಮಾ ರಿಲೀಸ್​
Image
‘ಡೇಂಜರಸ್​’ ಹುಡುಗಿಯರನ್ನು ಬೆಂಗಳೂರಿಗೆ ಕರೆತಂದು ಪರಿಚಯ ಮಾಡಿಸಿದ ರಾಮ್​ ಗೋಪಾಲ್ ವರ್ಮಾ
Image
‘ಕೆಜಿಎಫ್​ 2’, ಉಪೇಂದ್ರ ಮತ್ತು ಸ್ಯಾಂಡಲ್​ವುಡ್​ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಹೇಳೋದು ಏನು?
Image
‘ಪುನೀತ್​ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್​ ಗೋಪಾಲ್​ ವರ್ಮಾ

ನಾಯಕಿಯ ಬಟ್ಟೆಯನ್ನು ವಿಲನ್​ ಕಿತ್ತೆಸೆಯುವ ದೃಶ್ಯ ಇದೆ. ಇದರಲ್ಲಿನ ಶೇ. 50ರಷ್ಟು ಶಾಟ್ಸ್​ ಡಿಲೀಟ್​ ಮಾಡಬೇಕು. ನಾಯಕಿಯ ದೇಹದ ಅಂಗಗಳನ್ನು ವಿಲನ್ ಕೆಟ್ಟದಾಗಿ ನೋಡುವ ದೃಶ್ಯಗಳನ್ನೂ ತೆಗೆದುಹಾಕಬೇಕು ಎಂದು ಸೆನ್ಸಾರ್​ ಮಂಡಳಿಯವರು ತಿಳಿಸಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲ ತೆಗೆದು ಹಾಕಿದ ಮೇಲೆ ಸಿನಿಮಾದಲ್ಲಿ ಇನ್ನೇನು ಉಳಿಯಲಿದೆ ಎಂದು ಸಿನಿಪ್ರಿಯರು ಕೇಳುತ್ತಿದ್ದಾರೆ.

‘ಲಡ್ಕಿ’ ಸಿನಿಮಾಗೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ. ಜುಲೈ 15ರಂದು ರಿಲೀಸ್​ ಆಗುತ್ತಿರುವ ಈ ಸಿನಿಮಾ ಮೇಲೆ ರಾಮ್​ ಗೋಪಾಲ್​ ವರ್ಮಾ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚೀನಾದಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ ಎಂಬುದು ವಿಶೇಷ. ಹಲವು ವರ್ಷಗಳಿಂದ ಮಾರ್ಷಲ್​ ಆರ್ಟ್ಸ್​ ಕಲಿತಿರುವ ಪೂಜಾ ಭಾಲೇಕರ್​ ಅವರಿಗೆ ಈ ಸಿನಿಮಾದಿಂದ ದೊಡ್ಡ ಮಟ್ಟದ ಜನಪ್ರಿಯತೆ ಸಿಗುತ್ತಿದೆ.

Published On - 2:31 pm, Thu, 14 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ