‘ಹುಡುಗಿ’ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ರಾಮ್​ ಗೋಪಾಲ್​ ವರ್ಮಾ; ಜುಲೈ 15ಕ್ಕೆ ಸಿನಿಮಾ ರಿಲೀಸ್​

Ram Gopal Varma: ‘ಹುಡುಗಿ’ ಚಿತ್ರಕ್ಕೆ ರಾಮ್​ ಗೋಪಾಲ್​ ವರ್ಮಾ ನಿರ್ದೇಶನ ಮಾಡಿದ್ದಾರೆ. ಮೈ ಜುಂ ಎನ್ನುವಂತಹ ಸಾಹಸ ದೃಶ್ಯಗಳಲ್ಲಿ ಪೂಜಾ ಭಾಲೇಕರ್​ ನಟಿಸಿದ್ದಾರೆ ಎಂಬುದಕ್ಕೆ ಪೋಸ್ಟರ್​ಗಳು ಸಾಕ್ಷಿ ಒದಗಿಸುತ್ತಿವೆ.

‘ಹುಡುಗಿ’ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ರಾಮ್​ ಗೋಪಾಲ್​ ವರ್ಮಾ; ಜುಲೈ 15ಕ್ಕೆ ಸಿನಿಮಾ ರಿಲೀಸ್​
ಪೂಜಾ ಭಾಲೇಕರ್​, ರಾಮ್​ ಗೋಪಾಲ್​ ವರ್ಮಾ
Follow us
TV9 Web
| Updated By: ಮದನ್​ ಕುಮಾರ್​

Updated on: Jul 11, 2022 | 7:15 AM

ನಿರ್ದೇಶಕ ರಾಮ್​ ಗೋಪಾಲ್​​ ವರ್ಮಾ (Ram Gopal Varma) ಅವರು ಏನೇ ಮಾಡಿದರೂ ವಿಶೇಷವಾಗಿ ಮಾಡ್ತಾರೆ. ಈಗಾಗಲೇ ಅನೇಕ ಭಿನ್ನ ಸಿನಿಮಾಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಸಲಿಂಗಕಾಮದ ಕುರಿತು ‘ಖತ್ರಾ ಡೇಂಜರಸ್​’ ಚಿತ್ರ ಮಾಡಿ​ದ್ದ ಅವರು ಈಗ ಇನ್ನೊಂದು ಸಿನಿಮಾ ಮೂಲಕ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ರಾಮ್​ ಗೋಪಾಲ್​ ವರ್ಮಾ ನಿರ್ದೇಶನದ ಈ ಹೊಸ ಸಿನಿಮಾ ಹೆಸರು ‘ಲಡ್ಕಿ’. ಹಲವು ಭಾಷೆಗಳಿಗೆ ಡಬ್​ ಆಗಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ಕನ್ನಡದಲ್ಲಿ ‘ಹುಡುಗಿ’ (Hudugi) ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಪ್ರಚಾರಕ್ಕಾಗಿ ಅವರು ಬೆಂಗಳೂರಿಗೆ ಬಂದಿದ್ದರು. ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿರುವ ನಟಿ ಪೂಜಾ ಭಾಲೇಕರ್​ (Pooja Bhalekar) ಕೂಡ ಅವರಿಗೆ ಸಾಥ್​ ನೀಡಿದರು. ಸಿನಿಮಾದ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಒಂದಷ್ಟು ಮಾಹಿತಿ ಹಂಚಿಕೊಂಡರು.

ಈಗಾಗಲೇ ‘ಹುಡುಗಿ’ ಚಿತ್ರದ ಪೋಸ್ಟರ್​ಗಳು ವೈರಲ್​ ಆಗಿವೆ. ಪೂಜಾ ಭಾಲೇಕರ್​ ಅವರು ಸಿಕ್ಕಾಪಟ್ಟೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಪೋಸ್ಟರ್​ಗಳು ಸಾಕ್ಷಿ ಒದಗಿಸುತ್ತಿವೆ. ಮಾರ್ಷಲ್​ ಆರ್ಟ್ಸ್​ ಬಲ್ಲಂತಹ ಹುಡುಗಿಯಾಗಿ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಿಯಲ್​ ಲೈಫ್​ನಲ್ಲಿಯೂ ಅವರು ಈ ಸಮರ ಕಲೆಯನ್ನು ಕಲಿತಿದ್ದಾರೆ ಎಂಬುದು ವಿಶೇಷ. ಈ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಮಾತನಾಡಿದ್ದಾರೆ.

‘ಇದು ತುಂಬಾ ವಿಶೇಷವಾದ ಸಿನಿಮಾ. ನಾನು ಚಿಕ್ಕವನಿದ್ದಾಗ ಎಂಟರ್ ದಿ ಡ್ರ್ಯಾಗನ್ ಸಿನಿಮಾ ನೋಡಿದ್ದೆ. ಆ ಕಥೆಯ ನಾಯಕ‌ ಬ್ರೂಸ್ಲಿ ಅವರಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಿದ್ದೇನೆ. ಮಾರ್ಷಲ್ ಆರ್ಟ್ಸ್​ಗೆ ಸಂಬಂಧಪಟ್ಟ ಸಿನಿಮಾವಾಗಿದ್ದು, ಈ ಕಲೆ ಅಭ್ಯಾಸ ಮಾಡುವವರ ಸಂಖ್ಯೆ ತೀರಾ ವಿರಳ. ಅದರಲ್ಲೂ ಹುಡುಗಿಯರು ಕಲಿಯುವುದು ಕಡಿಮೆ. ನಾಯಕಿ ಪೂಜಾ 12 ವರ್ಷದಿಂದ ಸಮರಕಲೆ ಅಭ್ಯಾಸ ಮಾಡ್ತಿದ್ದಾರೆ. ಹೀಗಾಗಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
‘ಕೆಜಿಎಫ್​ 2’, ಉಪೇಂದ್ರ ಮತ್ತು ಸ್ಯಾಂಡಲ್​ವುಡ್​ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಹೇಳೋದು ಏನು?
Image
ಹುಡುಗಿಯ​ ಅಂಗದ ಬಗ್ಗೆ ಮಾತನಾಡಿ ಕಾಫಿ ಶಾಪ್​ನಲ್ಲಿ ಕೆನ್ನೆಗೆ ಏಟು ತಿಂದ ರಾಮ್​ ಗೋಪಾಲ್​ ವರ್ಮಾ
Image
ಇದು ಗೆಳೆಯರ ದಿನವಲ್ಲ ವೈರಿಗಳ ದಿನ ಎಂದ ರಾಮ್​ ಗೋಪಾಲ್​ ವರ್ಮಾ
Image
Ram Gopal Varma Birthday: ಇದು ನನ್ನ ಬರ್ತ್​ಡೇ ಅಲ್ಲ; ಡೆತ್​ ಡೇ! ಹುಟ್ಟುಹಬ್ಬದ ದಿನವೇ ರಾಮ್​ ಗೋಪಾಲ್​ ವರ್ಮಾ ಶಾಕಿಂಗ್​ ಮಾತು

ಭಾರತದ ಜೊತೆಗೆ ಚೀನಾದಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದೆ ಎಂಬುದು ವಿಶೇಷ. ಸಾವಿರಾರು ಪರದೆಗಳಲ್ಲಿ ರಿಲೀಸ್​ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾರ್ಷಲ್​ ಆರ್ಟ್ಸ್​ ಮಾತ್ರವಲ್ಲದೇ ಒಂದು ತ್ರಿಕೋನ ಪ್ರೇಮಕಥೆ ಕೂಡ ಈ ಚಿತ್ರದಲ್ಲಿ ಇದೆ ಎಂದು ತಂಡ ಹೇಳಿಕೊಂಡಿದೆ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ