Anita Bhat: ‘ನನ್ನ ಮಗಳಿಗೆ ಬಾಯ್ ಫ್ರೆಂಡ್ ಇದಾನೆ, ಆದ್ರೂ ಅವಳಿಗೆ ಮದುವೆ ಇಷ್ಟ ಇಲ್ಲ’: ಅನಿತಾ ಭಟ್ ನೇರ ಮಾತು
Anita Bhat Daughter: ಸಂಬಂಧಗಳ ಬಗ್ಗೆ ನಟಿ ಅನಿತಾ ಭಟ್ ಅವರು ನೇರವಾಗಿ ಮಾತನಾಡಿದ್ದಾರೆ. ಕೆಲವು ವೈಯಕ್ತಿಕ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ.
ಕನ್ನಡದ ಹಲವು (Sandalwood) ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿರುವ ನಟಿ ಅನಿತಾ ಭಟ್ (Anita Bhat) ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ಮಗಳ ಫೋಟೋಗಳನ್ನೂ ಅವರು ಆಗಾಗ ಹಂಚಿಕೊಳ್ಳುತ್ತಾರೆ. ‘ಟಿವಿ9 ಕನ್ನಡ’ಕ್ಕೆ ಅವರು ಸಂದರ್ಶನ ನೀಡಿದ್ದು, ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆ (Marriage), ಮಕ್ಕಳು, ಕುಟುಂಬ, ಲಿವ್ ಇನ್ ರಿಲೇಷನ್ಶಿಪ್ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ಅವರು ತಿಳಿಸಿದ್ದಾರೆ. ‘ಮದುವೆ ಬಗ್ಗೆ ನನಗೆ ಒಲವು ಇಲ್ಲ. ನನ್ನ ಮಗಳಿಗೆ ಬಾಯ್ ಫ್ರೆಂಡ್ ಇದ್ದಾನೆ. ಆದರೆ ಅವಳಿಗೂ ಮದುವೆ ಬಗ್ಗೆ ಇಷ್ಟ ಇಲ್ಲ’ ಎಂದು ಅನಿತಾ ಭಟ್ ಹೇಳಿದ್ದಾರೆ.
Latest Videos