‘ಡೇಂಜರಸ್​’ ಹುಡುಗಿಯರನ್ನು ಬೆಂಗಳೂರಿಗೆ ಕರೆತಂದು ಪರಿಚಯ ಮಾಡಿಸಿದ ರಾಮ್​ ಗೋಪಾಲ್ ವರ್ಮಾ

Khatra Dangerous: ‘ಖತ್ರಾ ಡೇಂಜರಸ್​’ ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳಲು ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಚಿತ್ರದಲ್ಲಿ ನೈನಾ ಗಂಗೂಲಿ ಮತ್ತು ಅಪ್ಸರಾ ರಾಣಿ ನಟಿಸಿದ್ದಾರೆ.

‘ಡೇಂಜರಸ್​’ ಹುಡುಗಿಯರನ್ನು ಬೆಂಗಳೂರಿಗೆ ಕರೆತಂದು ಪರಿಚಯ ಮಾಡಿಸಿದ ರಾಮ್​ ಗೋಪಾಲ್ ವರ್ಮಾ
ನೈನಾ ಗಂಗೂಲಿ, ರಾಮ್​ ಗೋಪಾಲ್​ ವರ್ಮಾ, ಅಪ್ಸರಾ ರಾಣಿ
Follow us
TV9 Web
| Updated By: ಮದನ್​ ಕುಮಾರ್​

Updated on:Mar 31, 2022 | 4:05 PM

ಒಂದು ಕಾಲದಲ್ಲಿ ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದವರು ನಿರ್ದೇಶಕ ರಾಮ್​ ಗೋಪಾಲ್​​ ವರ್ಮಾ. ಈಗಲೂ ಅವರು ಡಿಫರೆಂಟ್​ ಪ್ರಯತ್ನಗಳ ಮೂಲಕ ಗಮನ ಸೆಳೆಯುತ್ತಾರೆ. ರಾಮ್​ ಗೋಪಾಲ್​ ವರ್ಮಾ (Ram Gopal Varma) ಸಿನಿಮಾ ಮಾಡುತ್ತಾರೆ ಎಂದರೆ ಅದು ವಿವಾದ ಮಾಡುತ್ತದೆ ಅಥವಾ ವಿಭಿನ್ನವಾಗಿ ಇರುತ್ತದೆ ಎಂಬುದರಲ್ಲಿ ಅನುಮಾನವೇ ಬೇಡ. ಈಗ ಅವರು ಹೊಸದೊಂದು ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಚಿತ್ರದ ಹೆಸರು ‘ಖತ್ರಾ ಡೇಂಜರಸ್​’. ಈಗಾಗಲೇ ಪೋಸ್ಟರ್​ ಮತ್ತು ಟ್ರೇಲರ್​ಗಳ ಮೂಲಕ ಈ ಚಿತ್ರ ಸಖತ್​ ಸದ್ದು ಮಾಡುತ್ತಿದೆ. ಹತ್ತು ಹಲವು ಕಾರಣಗಳಿಂದ ‘ಖತ್ರಾ ಡೇಂಜರಸ್​’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ನೈನಾ ಗಂಗೂಲಿ, ಅಪ್ಸರಾ ರಾಣಿ (Apsara Rani), ರಾಜ್​ಪಾಲ್​ ಯಾದವ್​ ಮುಂತಾದವರು ನಟಿಸಿದ್ದಾರೆ. ಟ್ರೇಲರ್​ ನೋಡಿದರೆ ಇದು ಸಲಿಂಗ ಕಾಮದ ಕುರಿತಾದ ಸಿನಿಮಾ ಎನಿಸುವುದು ಸಹಜ. ಆದರೆ ಇನ್ನಷ್ಟು ಆಳವಾದ ವಿಚಾರಗಳನ್ನು ಇಟ್ಟುಕೊಂಡು ರಾಮ್​ ಗೋಪಾಲ್​ ವರ್ಮಾ ಅವರು ‘ಖತ್ರಾ ಡೇಂಜರಸ್​’ (Khatra Dangerous Movie) ಚಿತ್ರವನ್ನು ಕಟ್ಟಿಕೊಟ್ಟಿದ್ದಾರಂತೆ. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಏ.8ರಂದು ಚಿತ್ರಮಂದಿರಗಳಲ್ಲಿ ಇದು ತೆರೆ ಕಾಣಲಿದೆ.

‘ಖತ್ರಾ ಡೇಂಜರಸ್​’ ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳಲು ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ತಮ್ಮ ಜೊತೆ ಚಿತ್ರದ ಪ್ರಮುಖ ಪಾತ್ರಧಾರಿಗಳಾದ ನೈನಾ ಗಂಗೂಲಿ ಮತ್ತು ಅಪ್ಸರಾ ರಾಣಿ ಅವರನ್ನೂ ಕರೆದುಕೊಂಡು ಬಂದು ಪಾತ್ರ ಪರಿಚಯ ಮಾಡಿಸಿದರು. ಕ್ರೈಂ ಥ್ರಿಲ್ಲರ್​ ಕಥಾಹಂದರ ಹೊಂದಿರುವ ಭಾರತದ ಮೊದಲ ಲೆಸ್ಬಿಯನ್​ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಪರಸ್ಪರ ಪ್ರೇಮ-ಕಾಮ ಹೊಂದಿರುವ ಹುಡುಗಿಯರಾಗಿ ನೈನಾ ಗಂಗೂಲಿ ಮತ್ತು ಅಪ್ಸರಾ ರಾಣಿ ಅವರು ನಟಿಸಿದ್ದಾರೆ.

‘ಹುಡುಗ-ಹುಡುಗಿ ಪ್ರೀತಿ ಮಾಡುತ್ತಿದ್ದಾಗ ಜನರು ಅದನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ಇಬ್ಬರು ಹುಡುಗಿಯರು ಪರಸ್ಪರ ಪ್ರೀತಿಸಿದಾಗ ಪ್ರಶ್ನೆ ಎದುರಾಗುತ್ತದೆ. ಅವರಿಬ್ಬರ ಪ್ರೀತಿಯನ್ನು ಈ ಸಿನಿಮಾ ಪ್ರಶ್ನೆ ಮಾಡುವುದಿಲ್ಲ. ಸಮಾಜದಲ್ಲಿ ಅಂಥ ಜನರು ಇದ್ದಾರೆ. ಅವರಲ್ಲಿಯೂ ಹಲವು ಕಥೆಗಳಿವೆ. ಲೆಸ್ಬಿಯನ್​ ಕುರಿತು ಕೆಲವು ಸಿನಿಮಾಗಳು ಬಂದಿವೆ. ಆದರೆ ನಮ್ಮ ಚಿತ್ರದ ಕಥೆ ಭಿನ್ನವಾಗಿದೆ’ ಎಂದು ರಾಮ್​ ಗೋಪಾಲ್​ ವರ್ಮಾ ಹೇಳಿದ್ದಾರೆ.

‘ಇಂಥ ಚಿತ್ರಕ್ಕೆ ನಟಿಯರನ್ನು ಒಪ್ಪಿಸುವುದು ಕಷ್ಟ ಎಂದುಕೊಂಡು ಮೊದಲು ಅಪ್ಸರಾ ಅವರನ್ನು ಸಂಪರ್ಕಿಸಿದೆ. ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅವರು ಹಿಂದೇಟು ಹಾಕಲಿಲ್ಲ. ಇದೊಂದು ಸವಾಲಿನ ಪಾತ್ರ ಎಂದುಕೊಂಡು ಒಪ್ಪಿಕೊಂಡರು. ಆದರೆ ನೈನಾ ಗಂಗೂಲಿ ಅವರು ಒಪ್ಪಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು’ ಎಂದರು ರಾಮ್​ ಗೋಪಾಲ್​ ವರ್ಮಾ. ಟ್ರೇಲರ್​ ಮತ್ತು ಹಾಡುಗಳಲ್ಲಿ ನೈನಾ ಗಂಗೂಲಿ ಮತ್ತು ಅಪ್ಸರಾ ರಾಣಿ ಅವರು ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ.

‘ಈ ಕಥೆ ಕೇಳಿದಾಗ ನನಗೆ ನಂಬಿಕೆ ಮೂಡಿತು. ಸವಾಲಿನ ಪಾತ್ರ ಆದ್ದರಿಂದ ಒಪ್ಪಿಕೊಂಡೆ. ಈ ಚಿತ್ರ ತೆರೆಕಂಡ ಬಳಿಕ ಇದೇ ರೀತಿಯ ಕಾನ್ಸೆಪ್ಟ್​ ಮೇಲೆ ಇನ್ನಷ್ಟು ಸಿನಿಮಾಗಳು ಬರಲಿವೆ ಅಂತ ಅಂದುಕೊಂಡಿದ್ದೇನೆ. ರಾಮ್​ ಗೋಪಾಲ್​ ವರ್ಮಾ ಜೊತೆ ಕೆಲಸ ಮಾಡಿ ತುಂಬ ಕಲಿಯಲು ಸಿಕ್ಕಿತು’ ಎಂದು ಅಪ್ಸರಾ ರಾಣಿ ಹೇಳಿದ್ದಾರೆ.

ಇತ್ತೀಚೆಗೆ ‘ಆರ್​ಆರ್​ಆರ್​’ ಸಿನಿಮಾ ಬಿಡುಗಡೆ ಆಯಿತು. ರಾಜಮೌಳಿ ನಿರ್ದೇಶನದ ಆ ಚಿತ್ರದಲ್ಲಿ ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ನಟಿಸಿದ್ದಾರೆ. ಅದರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪ್ರಸ್ತಾಪಿಸಿರುವ ರಾಮ್​ ಗೋಪಾಲ್​ ವರ್ಮಾ ಅವರು ಹೀಗೊಂದು ಟ್ವೀಟ್​ ಮಾಡಿದ್ದಾರೆ. ತಮ್ಮ ಸಿನಿಮಾದ ನಾಯಕಿಯ ಫೋಟೋ ಹಂಚಿಕೊಂಡು, ‘ರಾಜಮೌಳಿ ಸರ್​.. ನಿಮ್ಮ ಬಳಿ ಡೇಂಜರಸ್​ ಗಂಡಸರು ಇದ್ದರೆ ನನ್ನ ಬಳಿ ಡೇಂಜರಸ್​ ಹೆಂಗಸರು ಇದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

4 ತಪ್ಪು ಕಲ್ಪನೆಗಳನ್ನು ಅಳಿಸಿಹಾಕಿದೆ ‘ದಿ ಕಾಶ್ಮೀರ್​ ಫೈಲ್ಸ್​’; ಪರಿಪರಿಯಾಗಿ ವಿಶ್ಲೇಷಣೆ ಮಾಡಿದ ಆರ್​ಜಿವಿ

‘ಕೆಜಿಎಫ್​ 2’, ಉಪೇಂದ್ರ ಮತ್ತು ಸ್ಯಾಂಡಲ್​ವುಡ್​ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಹೇಳೋದು ಏನು?

Published On - 4:04 pm, Thu, 31 March 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ