4 ತಪ್ಪು ಕಲ್ಪನೆಗಳನ್ನು ಅಳಿಸಿಹಾಕಿದೆ ‘ದಿ ಕಾಶ್ಮೀರ್ ಫೈಲ್ಸ್’; ಪರಿಪರಿಯಾಗಿ ವಿಶ್ಲೇಷಣೆ ಮಾಡಿದ ಆರ್ಜಿವಿ
The Kashmir Files: ಅನುಭವಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ನೋಡಿ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಈ ಚಿತ್ರದ ಕುರಿತು ಕೆಲವು ವಿಷಯಗಳನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
Updated on:Mar 22, 2022 | 6:56 AM

The Kashmir Files movie proved Four myths wrong says Ram Gopal Varma

The Kashmir Files movie proved Four myths wrong says Ram Gopal Varma

ಎರಡನೇ ತಪ್ಪು ಕಲ್ಪನೆ: ದೊಡ್ಡ ಬಜೆಟ್ನ ಸಿನಿಮಾಗಳನ್ನು ನೋಡಲು ಮಾತ್ರ ಜನರು ಚಿತ್ರಮಂದಿರಕ್ಕೆ ಬರುತ್ತಾರೆ. ಈ ಮಾತು ಕೂಡ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಸುಳ್ಳು ಎಂಬುದು ಸಾಬೀತಾಗಿದೆ. ಕಡಿಮೆ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ ಇಂದು 200 ಕೋಟಿ ರೂ. ಕಲೆಕ್ಷನ್ ಮಾಡುವಷ್ಟು ಗೆಲುವು ಪಡೆದುಕೊಂಡಿದೆ.

ಮೂರನೇ ತಪ್ಪು ಕಲ್ಪನೆ: ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಸಿನಿಮಾದ ಪ್ರಚಾರ ಮಾಡಿದರೆ ಜನರು ಚಿತ್ರಮಂದಿರಕ್ಕೆ ಬರುತ್ತಾರೆ. ಬಾಲಿವುಡ್ನ ಅನೇಕ ಚಿತ್ರತಂಡಗಳು ಪ್ರಚಾರಕ್ಕಾಗಿ ‘ದಿ ಕಪಿಲ್ ಶರ್ಮಾ ಶೋ’ ಅನ್ನು ಅವಲಂಬಿಸಿವೆ. ಆದರೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾತಂಡ ಈ ವೇದಿಕೆಯಲ್ಲಿ ಪ್ರಚಾರ ಮಾಡಿರಲಿಲ್ಲ. ಹಾಗಿದ್ದರೂ ಕೂಡ ಚಿತ್ರಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ.

ನಾಲ್ಕನೇ ತಪ್ಪು ಕಲ್ಪನೆ: ಸೂಪರ್ ಹಿಟ್ ಹಾಡುಗಳಿದ್ದರೆ ಜನರು ಚಿತ್ರಮಂದಿರಕ್ಕೆ ಬರುತ್ತಾರೆ. ಹಾಡುಗಳಿಗೆ ಬಾಲಿವುಡ್ ಮಂದಿ ಹೆಚ್ಚು ಮಹತ್ವ ನೀಡುತ್ತಾರೆ. ಹಾಡು ಹಿಟ್ ಆದರೆ ಸಿನಿಮಾ ಕೂಡ ಹಿಟ್ ಎಂಬ ನಂಬಿಕೆ ಇದೆ. ಆದರೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ವಿಚಾರದಲ್ಲಿ ಈ ಸೂತ್ರ ವರ್ಕ್ ಆಗಿಲ್ಲ. ಹಾಗಾಗಿ ಒಂದು ಸಿನಿಮಾದ ಗೆಲುವಿಗೆ ಸೂಪರ್ ಹಿಟ್ ಹಾಡು ಬೇಕು ಎಂಬ ಮಾತು ಕೂಡ ಸುಳ್ಳಾಗಿದೆ ಎಂದು ರಾಮ್ ಗೋಪಾಲ್ ವರ್ಮಾ ವಿಶ್ಲೇಷಣೆ ಮಾಡಿದ್ದಾರೆ.
Published On - 6:30 am, Tue, 22 March 22
























