ವರುಧಿನಿ ಸಾರಥ್ಯದಲ್ಲೇ ಬದಲಾಯಿತು ತಾಂಬೂಲ; ಹರ್ಷ-ಭುವಿ ನಿಶ್ಚಿತಾರ್ಥಕ್ಕೆ ಮುಹೂರ್ತ ನಿಗದಿ
ಹೆಣ್ಣು ಕೇಳೋಕೆ ಭುವಿಯ ಮನೆಗೆ ರತ್ನಮಾಲಾ ಹಾಗೂ ಹರ್ಷ ಬಂದಿದ್ದಾರೆ. ವಿಶೇಷ ಎಂದರೆ, ವರುಧಿನಿಯೇ ಮುಂದೆ ನಿಂತು ಅಜ್ಜಿಯ ಮನ ಒಲಿಸಿದ್ದಾಳೆ. ತಾಂಬೂಲ ಬದಲಾಯಿಸಿಕೊಳ್ಳಲು ಒಪ್ಪಿಸಿದ್ದಾಳೆ.
‘ಕನ್ನಡತಿ’ ಧಾರಾವಾಹಿಗೆ (Kannadathi Serial) ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಹರ್ಷ ಎಂದರೆ ಏನನ್ನು ಮಾಡೋಕೂ ರೆಡಿ ಇದ್ದ ವರುಧಿನಿ ಈಗ ಸಂಪೂರ್ಣ ಬದಲಾಗಿದ್ದಾಳೆ. ಅದು ಭುವಿಗೋಸ್ಕರ. ಚಿಕ್ಕಂದಿನಿಂದಲೂ ಅವಳು ಭುವಿಯ ಜತೆ ಬೆಳೆದಿದ್ದಾಳೆ. ಈ ಕಾರಣಕ್ಕೆ ಏನೇ ಇದ್ದರೂ ಆಕೆಗೆ ನೆನಪಾಗೋದು ಭುವಿ. ಈಗ ಹರ್ಷನನ್ನು ಭುವಿ ಪ್ರೀತಿಸುತ್ತಿದ್ದಾಳೆ ಎನ್ನುವ ವಿಚಾರ ತಿಳಿದು ಆಕೆ ನಿಜಕ್ಕೂ ಬೇಸರಗೊಂಡಿದ್ದಾಳೆ. ಗಳಗಳ ಅತ್ತಿದ್ದಾಳೆ. ಭುವಿಯನ್ನು ಸಾಯಿಸುವ ಆಲೋಚನೆಯೂ ಆಕೆಯ ತಲೆಯಲ್ಲಿ ಹಾದು ಹೋಗಿದೆ. ಆದರೆ, ಈಗ ಭುವಿಗೋಸ್ಕರ ಹರ್ಷನನ್ನು ಬಿಟ್ಟುಕೊಡುವ ನಿರ್ಧಾರಕ್ಕೆ ಬಂದಿದ್ದಾಳೆ. ತಾನೇ ಮುಂದೆ ನಿಂತು ಇಬ್ಬರ ನಿಶ್ಚಿತಾರ್ಥ (Engagement) ಮಾಡಿಸುತ್ತಿದ್ದಾಳೆ.
ಹರ್ಷನ ಮೇಲೆ ವರುಧಿನಿಗೆ ಮೊದಲಿನಿಂದಲೂ ಪ್ರೀತಿ. ಆದರೆ, ಹರ್ಷನಿಗೆ ಪ್ರೀತಿ ಮೂಡಿದ್ದು ಭುವಿ ಮೇಲೆ. ತಾನೇ ಮುಂದೆನಿಂತು ಆತ ಪ್ರೇಮನಿವೇದನೆ ಮಾಡಿಕೊಂಡಿದ್ದ. ಕೊನೆಗೂ ಹರ್ಷನ ಪ್ರೀತಿಯನ್ನು ಭುವಿ ಒಪ್ಪಿಕೊಂಡಳು. ಆದರೆ, ಇದನ್ನು ವರುಗೆ ಹೇಗೆ ಹೇಳಬೇಕು ಎನ್ನುವ ಗೊಂದಲದಲ್ಲಿ ಇದ್ದಳು ಭುವಿ. ಹಸಿರುಪೇಟೆಯಲ್ಲಿ ವರುಗೆ ಈ ವಿಚಾರವನ್ನು ಭುವಿ ಹೇಳಿದ್ದಾಳೆ. ಆರಂಭದಲ್ಲಿ ತುಂಬಾನೇ ಒದ್ದಾಡಿದ್ದ ವರುಧಿನಿ, ಈಗ ಕೊಂಚ ಬದಲಾಗುತ್ತಿದ್ದಾಳೆ. ‘ನಾನು ಭುವಿಯನ್ನೇ ಮದುವೆ ಆಗೋದು’ ಎಂದು ಹರ್ಷ ಖಡಾಖಂಡಿತವಾಗಿ ಹೇಳಿದ ನಂತರದಲ್ಲಿ ಆತನನ್ನು ಭುವಿಗೆ ಬಿಟ್ಟುಕೊಡುವ ನಿರ್ಧಾರಕ್ಕೆ ಬಂದಿದ್ದಾಳೆ.
ಹೆಣ್ಣು ಕೇಳೋಕೆ ಭುವಿಯ ಮನೆಗೆ ರತ್ನಮಾಲಾ ಹಾಗೂ ಹರ್ಷ ಬಂದಿದ್ದಾರೆ. ವಿಶೇಷ ಎಂದರೆ, ವರುಧಿನಿಯೇ ಮುಂದೆ ನಿಂತು ಅಜ್ಜಿಯ ಮನ ಒಲಿಸಿದ್ದಾಳೆ. ತಾಂಬೂಲ ಬದಲಾಯಿಸಿಕೊಳ್ಳಲು ಒಪ್ಪಿಸಿದ್ದಾಳೆ. ಹೀಗೆ ಒಪ್ಪಿಸಿದ ನಂತರದಲ್ಲಿ ವರುಧಿನಿ ನೇರವಾಗಿ ರೂಮ್ಗೆ ತೆರಳಿ ಬಾಗಿಲು ಹಾಕಿಕೊಂಡು ಅತ್ತಿದ್ದಾಳೆ. ಯಾರಿಗೆ ಕರೆ ಮಾಡಬೇಕು ಎಂಬುದನ್ನು ತೋಚದೆ ಒದ್ದಾಡಿದ್ದಾಳೆ.
ಈ ಮಧ್ಯೆ ನಿಶ್ಚಿತಾರ್ಥ ನೆರವೇರಿಸಿಕೊಳ್ಳಬೇಕು ಎನ್ನುವ ಆಲೋಚನೆ ಹರ್ಷನ ತಲೆಗೆ ಬಂದಿದೆ. ಈ ವಿಚಾರವನ್ನು ತಾಯಿ ಬಳಿ ಮಾತನಾಡಿದ್ದಾನೆ ಹರ್ಷ. ಗುರುಗಳಿಗೆ ಕರೆ ಮಾಡಿ ಕೇಳಿದಾಗ ‘ನಾಳೆ ಒಳ್ಳೆಯ ಮುಹೂರ್ತ ಇದೆ’ ಎನ್ನುವ ಉತ್ತರ ಬಂದಿದೆ. ಹೀಗಾಗಿ, ಹರ್ಷ ಹಾಗೂ ಭುವಿ ನಿಶ್ಚಿತಾರ್ಥಕ್ಕೆ ತಯಾರಿ ನಡೆದಿದೆ. ಇದಕ್ಕೆ ಅಜ್ಜಿಯ ಒಪ್ಪಿಗೆಯೂ ಸಿಕ್ಕಿದೆ ಈ ವಿಚಾರ ತಿಳಿದು ಸಾನಿಯಾ ಉರಿದುಕೊಂಡಿದ್ದಾಳೆ. ಈ ಎಲ್ಲಾ ಘಟನೆಗಳು ಮಾರ್ಚ್ 31ರ ಎಪಿಸೋಡ್ನಲ್ಲಿ ಪ್ರಸಾರವಾಗಲಿದೆ.
ಇದನ್ನೂ ಓದಿ: ಅಜ್ಜಿಗೆ ನಿಂತ ಜಾಗದಲ್ಲೇ 32 ಲಕ್ಷ ರೂ. ನೀಡಿದ ಹರ್ಷ; ಭುವಿಗೆ ಹೀರೋನ ಬಿಟ್ಟುಕೊಟ್ಟ ವರುಧಿನಿ
ಮಂಗಳಮ್ಮನ ವಿರುದ್ಧ ತಿರುಗಿಬಿದ್ದ ಭುವಿ; ‘ಕನ್ನಡತಿ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್