BBK 9: ‘ಬಿಗ್​ ಬಾಸ್ ಕನ್ನಡ ಸೀಸನ್​ 9’​ ಪ್ರೋಮೋ ಶೂಟಿಂಗ್​; ಕಿಚ್ಚ ಸುದೀಪ್​ ಗೆಟಪ್​ ​ನೋಡಿ ಫ್ಯಾನ್ಸ್​ ಫಿದಾ

Kichcha Sudeep | Bigg Boss Kannada Season 9: ಸುದೀಪ್​ ಅವರ ನಿರೂಪಣೆಯ ಶೈಲಿಗೆ ಮನಸೋಲದವರೇ ಇಲ್ಲ. ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ ನಡೆಸಿಕೊಡಲು ಕಿಚ್ಚ ಸಜ್ಜಾಗಿದ್ದಾರೆ.

BBK 9: ‘ಬಿಗ್​ ಬಾಸ್ ಕನ್ನಡ ಸೀಸನ್​ 9’​ ಪ್ರೋಮೋ ಶೂಟಿಂಗ್​; ಕಿಚ್ಚ ಸುದೀಪ್​ ಗೆಟಪ್​ ​ನೋಡಿ ಫ್ಯಾನ್ಸ್​ ಫಿದಾ
ಕಿಚ್ಚ ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 14, 2022 | 12:11 PM

ನಟ ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಬ್ಯಾಕ್​ ಟು ಬ್ಯಾಕ್​ ಸಿಹಿ ಸುದ್ದಿ ಸಿಗುತ್ತಿದೆ. ಅವರು ನಟಿಸಿರುವ ‘ವಿಕ್ರಾಂತ್​ ರೋಣ’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅದೇ ರೀತಿ ಅವರು ನಿರೂಪಿಸಲಿರುವ ‘ಬಿಗ್​ ಬಾಸ್​’ (Bigg Boss Kannada Season 9) ಕಾರ್ಯಕ್ರಮ ಕೂಡ ಸದ್ಯದಲ್ಲೇ ಶುರು ಆಗಲಿದೆ. ಅದಕ್ಕಾಗಿ ಅಭಿಮಾನಿಗಳ ವಲಯದಲ್ಲಿ ಹೆಚ್ಚು ಕಾತರ ಸೃಷ್ಟಿ ಆಗಿದೆ. ಈವರೆಗೂ ಕನ್ನಡದಲ್ಲಿ ಬಿಗ್​ ಬಾಸ್​ ಕಾರ್ಯಕ್ರಮದ 8 ಸೀಸನ್​ಗಳನ್ನು ಕಿಚ್ಚ ಸುದೀಪ್​ (Kichcha Sudeep) ಅವರು ಯಶಸ್ವಿಯಾಗಿ ನಿರೂಪಿಸಿದ್ದಾರೆ. ಈಗ ಮತ್ತೆ ಅವರ ನಿರೂಪಣೆಯಲ್ಲಿ ಬಿಗ್​ ಬಾಸ್​ ಹೊಸ ಸೀಸನ್ (BBK 9)​ ಪ್ರಸಾರಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಮೊದಲ ಹಂತವಾಗಿ ಪ್ರೋಮೋ ಶೂಟಿಂಗ್​ ಮಾಡಲಾಗಿದೆ. ಈ ಸಂದರ್ಭದ ಫೋಟೋ ವೈರಲ್​ ಆಗಿದೆ. ಅದರಲ್ಲಿನ ಸುದೀಪ್​ ಅವರ ಗೆಟಪ್​ ಎಲ್ಲರಿಗೂ ಇಷ್ಟ ಆಗುತ್ತಿದೆ.

ಬಿಗ್​ ಬಾಸ್​ ಎಂದರೆ ಸುದೀಪ್​, ಸುದೀಪ್​ ಎಂದರೆ ಬಿಗ್ ಬಾಸ್​ ಎಂಬಷ್ಟರಮಟ್ಟಿಗೆ ಒಂದು ಬಗೆಯ ನಂಟು ಬೆಳೆದಿದೆ. ಸುದೀಪ್​ ಅವರ ಮಾತಿನ ಶೈಲಿಗೆ ಮನಸೋಲದವರೇ ಇಲ್ಲ. ಹಲವು ಬಗೆಯ ಮನಸ್ಥಿತಿ ಇರುವ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಎಲ್ಲರನ್ನೂ ಸಮನಾಗಿ ನೋಡುತ್ತಾ, ಸೂಕ್ತ ಪ್ರತಿಕ್ರಿಯೆಗಳನ್ನು ನೀಡುತ್ತಾ ಈ ಕಾರ್ಯಕ್ರಮವನ್ನು ಸುದೀಪ್​ ನಡೆಸಿಕೊಡುತ್ತಾರೆ. ಹಾಗಾಗಿ ಪ್ರೇಕ್ಷಕರಿಗೆ ಕಿಚ್ಚ ಸಖತ್​ ಇಷ್ಟ ಆಗುತ್ತಾರೆ.

ಇದನ್ನೂ ಓದಿ
Image
‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​
Image
ಬಿಗ್​ ಬಾಸ್​ ನಿರೂಪಕರು ಚೇಂಜ್​; ಅಧಿಕೃತ ಘೋಷಣೆ ಮಾಡಿದ ಸ್ಟಾರ್​ ನಟ; ವೀಕ್ಷಕರಿಗೆ ಬೇಸರ
Image
‘ಬಿಗ್​ ಬಾಸ್​’ ಮನೆಯಲ್ಲಿ ಅಗ್ನಿ ಅವಘಡ; ಸಾವು-ನೋವಿನ ಬಗ್ಗೆ ಆಗಿಲ್ಲ ವರದಿ
Image
ಬಿಗ್​ ಬಾಸ್​ ಗೆದ್ದವರ ಹಿಂದೆ ಲಾಬಿ ಇದೆಯೋ ಇಲ್ಲವೋ? ನೇರವಾಗಿ ಮಾತಾಡಿದ ಸ್ಪರ್ಧಿ ಕರಣ್​ ಕುಂದ್ರಾ

ಒಮ್ಮೆ ಬಿಗ್​ ಬಾಸ್​ ಶುರುವಾಯಿತು ಎಂದರೆ ಪ್ರತಿ ವೀಕೆಂಡ್​ನಲ್ಲಿ ಅಭಿಮಾನಿಗಳಿಗೆ ಕಿಚ್ಚನ ದರ್ಶನ ಸಿಗುತ್ತದೆ. ಹಾಗಾಗಿ ವಾರಾಂತ್ಯದ ಎಪಿಸೋಡ್​ಗಳು ಹೆಚ್ಚು ಮಜವಾಗಿ ಇರುತ್ತವೆ. ಪ್ರತಿ ಸಂಚಿಕೆಯಲ್ಲೂ ಸುದೀಪ್​ ಅವರು ಬಗೆಬಗೆಯ ಕಾಸ್ಟ್ಯೂಮ್​ ಧರಿಸಿ ಬರುತ್ತಾರೆ. ಅವರ ಫ್ಯಾಷನ್​ ಸೆನ್ಸ್​ ಕೂಡ ಅಭಿಮಾನಿಗಳಿಗೆ ಆಕರ್ಷಕ ವಿಷಯವೇ ಸರಿ.

ಕಲರ್ಸ್​ ಕನ್ನಡ ವಾಹಿನಿಯ ಬಿಸ್ನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಅವರು ಪ್ರೋಮೋ ಶೂಟಿಂಗ್​ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದೊಡ್ಮನೆ ಸೆಟ್​ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿ ಇರುವ ಬಗ್ಗೆಯೂ ಇತ್ತೀಚೆಗೆ ಅಪ್​ಡೇಟ್​ ನೀಡಿದ್ದರು. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಭಾಗವಹಿಸಲಿದ್ದಾರೆ? ಜನ ಸಾಮಾನ್ಯರಿಗೆ ಅವಕಾಶ ಸಿಗಲಿದೆಯಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಕಿರುತೆರೆ ಪ್ರೇಕ್ಷಕರು ಕಾದಿದ್ದಾರೆ.

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್