AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಾರ್ ಸುವರ್ಣದಲ್ಲಿ ಭಾನುವಾರ ಪುನೀತ್ ನಟನೆಯ ‘ಜೇಮ್ಸ್’ ಸಿನಿಮಾ; ಇದರಲ್ಲಿ ಇರೋದು ಯಾರ ಧ್ವನಿ?

ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದುವುದಕ್ಕೂ ಮೊದಲು ‘ಜೇಮ್ಸ್’ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿದ್ದರು. ಆದರೆ, ಈ ಚಿತ್ರಕ್ಕೆ ಅವರು ಡಬ್ ಮಾಡಿರಲಿಲ್ಲ. ಈ ಕಾರಣಕ್ಕೆ ಶಿವರಾಜ್​ಕುಮಾರ್ ಅವರು ಪುನೀತ್ ಪಾತ್ರಕ್ಕೆ ಧ್ವನಿ ನೀಡಿದರು.

ಸ್ಟಾರ್ ಸುವರ್ಣದಲ್ಲಿ ಭಾನುವಾರ ಪುನೀತ್ ನಟನೆಯ ‘ಜೇಮ್ಸ್’ ಸಿನಿಮಾ; ಇದರಲ್ಲಿ ಇರೋದು ಯಾರ ಧ್ವನಿ?
ಪುನೀತ್
TV9 Web
| Edited By: |

Updated on:Jul 14, 2022 | 6:09 PM

Share

ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’. ಈ ಚಿತ್ರ ಪುನೀತ್ ಬರ್ತ್​ಡೇ ಪ್ರಯುಕ್ತ ಮಾರ್ಚ್​ 17ರಂದು ಬಿಡುಗಡೆ ಆಯಿತು. ಚೇತನ್ ಕುಮಾರ್ (Chetan Kumar) ನಿರ್ದೇಶನದ ಈ ಚಿತ್ರ ಫ್ಯಾನ್ಸ್​ಗೆ ಇಷ್ಟವಾಯಿತು. ಪುನೀತ್ ಅವರ ಜತೆ ಫ್ಯಾನ್ಸ್ ಭಾವನಾತ್ಮಕವಾಗಿ ಕನೆಕ್ಟ್ ಆದರು. ‘ಜೇಮ್ಸ್​’ (James Movie) ಬಗ್ಗೆ ಫ್ಯಾನ್ಸ್ ಮೆಚ್ಚುಗೆಯ ಮಾತುಗಳನ್ನು ಕೂಡ ಆಡಿದರು. ಈಗಾಗಲೇ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಈಗ ಈ ಚಿತ್ರ ಕಿರುತೆರೆಯಲ್ಲಿ ಬರೋಕೆ ರೆಡಿ ಆಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಭಾನುವಾರ 5:30ಕ್ಕೆ ಈ ಸಿನಿಮಾ ಪ್ರಸಾರ ಕಾಣಲಿದೆ.

ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದುವುದಕ್ಕೂ ಮೊದಲು ‘ಜೇಮ್ಸ್’ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿದ್ದರು. ಆದರೆ, ಈ ಚಿತ್ರಕ್ಕೆ ಅವರು ಡಬ್ ಮಾಡಿರಲಿಲ್ಲ. ಈ ಕಾರಣಕ್ಕೆ ಶಿವರಾಜ್​ಕುಮಾರ್ ಅವರು ಪುನೀತ್ ಪಾತ್ರಕ್ಕೆ ಧ್ವನಿ ನೀಡಿದರು. ಅಪ್ಪು ಧ್ವನಿಯನ್ನು ಸಾಕಷ್ಟು ಮಂದಿ ಮಿಸ್ ಮಾಡಿಕೊಂಡರು. ಸಿನಿಮಾ ರಿಲೀಸ್ ಆದ ಹಲವು ದಿನಗಳ ಬಳಿಕ ಈ ಚಿತ್ರ ಪುನೀತ್ ಧ್ವನಿಯಲ್ಲೇ ರೀ-ರೀಲೀಸ್ ಆಯಿತು. ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಜೇಮ್ಸ್​’ ಸಿನಿಮಾ ಪುನೀತ್ ಧ್ವನಿಯಲ್ಲೇ ಪ್ರಸಾರ ಕಾಣಲಿದೆ.

ಇದನ್ನೂ ಓದಿ
Image
ಆಗಸ್ಟ್​​ನಲ್ಲಿ ‘ಲಕ್ಕಿ ಮ್ಯಾನ್​’ ಸಿನಿಮಾ ತೆರೆಗೆ; ಪುನೀತ್ ನೋಡಲು ಕಾದಿದ್ದಾರೆ ಫ್ಯಾನ್ಸ್​
Image
‘ಕಿಶೋರ್ ಪತ್ತಿಕೊಂಡಗೆ ಮೆದುಳಿನ ಸರ್ಜರಿ ಆಗಿದೆ, ಅವರು ಔಟ್​ ಆಫ್​ ಡೇಂಜರ್​’; ಧೀರೇನ್ ರಾಮ್​ಕುಮಾರ್
Image
Kishore Pathikonda: ‘ಜೇಮ್ಸ್​’ ನಿರ್ಮಾಪಕ ಕಿಶೋರ್​ ಪತ್ತಿಕೊಂಡ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು
Image
ಆತ್ಮೀಯತೆಯಿಂದ ಮಾತನಾಡಿದ ಶಿವರಾಜ್​ಕುಮಾರ್ ಹಾಗೂ ಅಶ್ವಿನಿ ಪುನೀತ್​ರಾಜ್​ಕುಮಾರ್; ಇಲ್ಲಿದೆ ವಿಡಿಯೋ

ಸ್ಟಾರ್ ಸುವರ್ಣ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಪುನೀತ್ ಅವರ ಧ್ವನಿ ಕೇಳಿಸಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಈ ಪ್ರೋಮೋಗೆ ಫ್ಯಾನ್ಸ್​ ‘ಮಿಸ್ ಯೂ ಅಪ್ಪು’ ಎಂದು ಕಮೆಂಟ್ ಮಾಡಿದ್ದಾರೆ. ಒಂದಷ್ಟು ಮಂದಿ ಪುನೀತ್ ಅವರ ಧ್ವನಿ ಕೇಳಿ ಖುಷಿಯಾಗಿದ್ದಾರೆ.

View this post on Instagram

A post shared by Star Suvarna (@starsuvarna)

ಇದನ್ನೂ ಓದಿ: ಆಗಸ್ಟ್​​ನಲ್ಲಿ ‘ಲಕ್ಕಿ ಮ್ಯಾನ್​’ ಸಿನಿಮಾ ತೆರೆಗೆ; ಪುನೀತ್ ನೋಡಲು ಕಾದಿದ್ದಾರೆ ಫ್ಯಾನ್ಸ್​

‘ಜೇಮ್ಸ್’ ಪುನೀತ್ ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ. ಅವರು ಅತಿಥಿ ಪಾತ್ರ ಮಾಡಿದ ‘ಲಕ್ಕಿ ಮ್ಯಾನ್​’ ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ. ಈ ಸಿನಿಮಾದಲ್ಲಿ ದೇವರ ರೂಪದಲ್ಲಿ ಪುನೀತ್ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ನಿರ್ಮಾಣದ ‘ಗಂಧದಗುಡಿ’ ಡಾಕ್ಯುಮೆಂಟರಿ ಬಗ್ಗೆಯೂ ಫ್ಯಾನ್ಸ್​ಗೆ ನಿರೀಕ್ಷೆ ಇದೆ. ಈ ಸಾಕ್ಷ್ಯ ಚಿತ್ರ ನವೆಂಬರ್​ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

Published On - 6:07 pm, Thu, 14 July 22

Follow Us
TV9 Web
TV9 Web

TV9 Kannada

Read More
ಬದ್ಧ ವೈರಿಗಳ ಭೇಟಿ: ಎದುರು ಬದುರು ಕುಳಿತು ವಿಜಯೇಂದ್ರ-ಯತ್ನಾಳ್ ಮಾತುಕತೆ
ಬದ್ಧ ವೈರಿಗಳ ಭೇಟಿ: ಎದುರು ಬದುರು ಕುಳಿತು ವಿಜಯೇಂದ್ರ-ಯತ್ನಾಳ್ ಮಾತುಕತೆ
ಕಾವ್ಯಾಗೆ ಹಾಡಲು ಬರ್ತಿಲ್ಲ, ಸುದೀಪ್ ಬಿಡ್ತಿಲ್ಲ: ವಿಡಿಯೋ ನೋಡಿ
ಕಾವ್ಯಾಗೆ ಹಾಡಲು ಬರ್ತಿಲ್ಲ, ಸುದೀಪ್ ಬಿಡ್ತಿಲ್ಲ: ವಿಡಿಯೋ ನೋಡಿ
ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಸಂಚಲನ: ರಾಜಕಾರಣಿಗಳಿಗೆ ಜೋಶಿ ಕಿವಿಮಾತು
ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಸಂಚಲನ: ರಾಜಕಾರಣಿಗಳಿಗೆ ಜೋಶಿ ಕಿವಿಮಾತು
ಮೆಜೆಸ್ಟಿಕ್ ಸಮೀಪದ ಹೋಟೆಲ್​​​ನಲ್ಲಿ ಬೆಂಕಿ ಅವಘಡ
ಮೆಜೆಸ್ಟಿಕ್ ಸಮೀಪದ ಹೋಟೆಲ್​​​ನಲ್ಲಿ ಬೆಂಕಿ ಅವಘಡ
ಮಾಜಿ ಪ್ರಧಾನಿ ದೇವೇಗೌಡ್ರಿಗೆ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ ಪ್ರದಾನ
ಮಾಜಿ ಪ್ರಧಾನಿ ದೇವೇಗೌಡ್ರಿಗೆ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ ಪ್ರದಾನ
ಲೋಕಭವನದಲ್ಲಿ ಕನ್ಯಾಪೂಜೆ ನೆರವೇರಿಸಿದ ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್
ಲೋಕಭವನದಲ್ಲಿ ಕನ್ಯಾಪೂಜೆ ನೆರವೇರಿಸಿದ ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್
ಕಿರೀಟ ತೊಟ್ಟು ಸಹ ಸ್ಪರ್ಧಿಗಳ ವಿರುದ್ಧ ದೂರುಗಳ ಸರಮಾಲೆ ಪೋಣಿಸಿದ ಕುಮಾರಿ
ಕಿರೀಟ ತೊಟ್ಟು ಸಹ ಸ್ಪರ್ಧಿಗಳ ವಿರುದ್ಧ ದೂರುಗಳ ಸರಮಾಲೆ ಪೋಣಿಸಿದ ಕುಮಾರಿ
ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್:ನೈಸ್ ರಸ್ತೆಯಲ್ಲಿ 4 ಕಿಲೋಮೀಟರ್ ಟ್ರಾಫಿಕ್
ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್:ನೈಸ್ ರಸ್ತೆಯಲ್ಲಿ 4 ಕಿಲೋಮೀಟರ್ ಟ್ರಾಫಿಕ್
ಆಗುಂಬೆ ಘಾಟ್​ ತಿರುವಿನಲ್ಲಿ ​ಬಸ್ ಮೇಲೆ ಹತ್ತಿಸಲು ಆಗದೆ ಚಾಲಕನ ಹರಸಾಹಸ!
ಆಗುಂಬೆ ಘಾಟ್​ ತಿರುವಿನಲ್ಲಿ ​ಬಸ್ ಮೇಲೆ ಹತ್ತಿಸಲು ಆಗದೆ ಚಾಲಕನ ಹರಸಾಹಸ!
ಹವಾಮಾನ ವೈಪರೀತ್ಯದಿಂದ ಮೊಟಕುಗೊಂಡ ವಾಯುಪಡೆಯ ಏರ್ ಶೋ!
ಹವಾಮಾನ ವೈಪರೀತ್ಯದಿಂದ ಮೊಟಕುಗೊಂಡ ವಾಯುಪಡೆಯ ಏರ್ ಶೋ!