AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kishore Pathikonda: ‘ಜೇಮ್ಸ್​’ ನಿರ್ಮಾಪಕ ಕಿಶೋರ್​ ಪತ್ತಿಕೊಂಡ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು

James Movie | Kishore Pathikonda: ನಿರ್ಮಾಪಕ ಕಿಶೋರ್​ ಪತ್ತಿಕೊಂಡ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.

Kishore Pathikonda: ‘ಜೇಮ್ಸ್​’ ನಿರ್ಮಾಪಕ ಕಿಶೋರ್​ ಪತ್ತಿಕೊಂಡ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು
ಕಿಶೋರ್ ಪತ್ತಿಕೊಂಡ
TV9 Web
| Updated By: ಮದನ್​ ಕುಮಾರ್​|

Updated on:Jul 05, 2022 | 1:17 PM

Share

ಪುನೀತ್​ ರಾಜ್​ಕುಮಾರ್​​ ನಟನೆಯ ‘ಜೇಮ್ಸ್​’ (James Movie) ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಕಿಶೋರ್​ ಪತ್ತಿಕೊಂಡ (Kishore Pathikonda) ಅವರ ಆರೋಗ್ಯದಲ್ಲಿ ಏರುಪೇರು ಆಗಿದೆ. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೃದಯ ಬಡಿತದಲ್ಲಿ ವ್ಯತ್ಯಾಸ ಆಗಿದೆ ಎಂಬ ಮಾಹಿತಿ ಕೇಳಿಬಂದಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ ಎಂಬುದಾಗಿ ವರದಿ ಆಗಿದೆ. ಸೋಮವಾರ (ಜುಲೈ 4) ರಾತ್ರಿ ಕಿಶೋರ್​ ಪತ್ತಿಕೊಂಡ ಅವರು ಪ್ರಜ್ಞೆ ತಪ್ಪಿ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಅವರ ಕುಟುಂಬದವರು ಕೂಡ ರಾತ್ರಿಯಿಂದಲೇ ಬೆಂಗಳೂರಿನ ಶೇಷಾದ್ರಿಪುರದಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಕಿಶೋರ್​ ಪತ್ತಿಕೊಂಡ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಹಾಗಾಗಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಕುಟುಂಬದವರಿಂದ ಅಥವಾ ವೈದ್ಯರಿಂದ ಅಧಿಕೃತ ಹೆಲ್ತ್​​ ಅಪ್​ಡೇಟ್​ ಹೊರಬರಬೇಕಿದೆ. ಕಿಶೋರ್​ ಪತ್ತಿಕೊಂಡ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರ ಆಪ್ತರು ಪ್ರಾರ್ಥಿಸುತ್ತಿದ್ದಾರೆ.

ಪುನೀತ್​ ರಾಜ್​ಕುಮಾರ್​ ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ಎಂಬ ಕಾರಣಕ್ಕೆ ‘ಜೇಮ್ಸ್​’ ಚಿತ್ರ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಅಪ್ಪು ನಿಧನದ ಬಳಿಕ ಈ ಸಿನಿಮಾ ಬಿಡುಗಡೆ ಆಯಿತು. ಬಹಳ ಕಾಳಜಿ ವಹಿಸಿ ಕಿಶೋರ್​ ಪತ್ತಿಕೊಂಡ ಅವರು ಚಿತ್ರದ ಪ್ರಚಾರ ಮಾಡಿದ್ದರು. ಅದ್ದೂರಿಯಾಗಿ ರಿಲೀಸ್​ ಆಗುವಂತೆ ನೋಡಿಕೊಂಡಿದ್ದರು. ಪುನೀತ್​ ಅಭಿಮಾನಿಗಳಿಂದ ನಿರ್ಮಾಪಕರಿಗೆ ಸಿಕ್ಕಿದ್ದ ಸಹಕಾರ ಅಪಾರ. ಗಲ್ಲಾಪೆಟ್ಟಿಗೆಯಲ್ಲೂ ಈ ಚಿತ್ರ ಒಳ್ಳೆಯ ಕಲೆಕ್ಷನ್​ ಮಾಡಿತ್ತು.

‘ಜೇಮ್ಸ್​’ ಚಿತ್ರದ ಯಶಸ್ಸಿನ ಬಳಿಕ ಕಿಶೋರ್​ ಪತ್ತಿಕೊಂಡ ಅವರು ಮುಂದಿನ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡರು. ರಾಜ್​ಕುಮಾರ್​ ಮೊಮ್ಮಗ ಧೀರೇನ್​ ರಾಮ್​ಕುಮಾರ್​ ನಟನೆಯ ಹೊಸ ಚಿತ್ರಕ್ಕೆ ಅವರು ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಕಿಶೋರ್ ಅವರ ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಎಲ್ಲರಲ್ಲೂ ಆತಂಕ ಮೂಡಿದೆ.

ಇದನ್ನೂ ಓದಿ: ಡಾ. ರಾಜ್​ಕುಮಾರ್​ ಮೊಮ್ಮೊಗ ಧೀರೇನ್​​ ಜತೆ ‘ಜೇಮ್ಸ್​’ ನಿರ್ಮಾಪಕರ ಹೊಸ ಸಿನಿಮಾ ಅನೌನ್ಸ್​

Anekal Balaraj Death: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಇನ್ನಿಲ್ಲ; ಬೆಂಗಳೂರಿನಲ್ಲಿ ಅಪಘಾತದಿಂದ ನಿಧನ

Published On - 12:56 pm, Tue, 5 July 22