Rakshit Shetty: 150 ಕೋಟಿ ರೂ. ಗಳಿಸಿದ ‘777 ಚಾರ್ಲಿ’; ಪ್ರಾಣಿಗಳ ರಕ್ಷಣೆಗೆ ಶೇ.5ರಷ್ಟು ಹಣ ದೇಣಿಗೆ ನೀಡಿದ ರಕ್ಷಿತ್​ ಶೆಟ್ಟಿ

777 Charlie Box Office Collection: ಲಾಭದ ಹಣದಲ್ಲಿ ಚಿತ್ರತಂಡದವರಿಗೆ ಶೇ.10 ಹಾಗೂ ಎನ್​ಜಿಒಗಳಿಗೆ ಶೇ5ರಷ್ಟನ್ನು ನೀಡಲು ರಕ್ಷಿತ್​ ಶೆಟ್ಟಿ ನಿರ್ಧರಿಸಿದ್ದಾರೆ. ‘777 ಚಾರ್ಲಿ’ ತಂಡದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Rakshit Shetty: 150 ಕೋಟಿ ರೂ. ಗಳಿಸಿದ ‘777 ಚಾರ್ಲಿ’; ಪ್ರಾಣಿಗಳ ರಕ್ಷಣೆಗೆ ಶೇ.5ರಷ್ಟು ಹಣ ದೇಣಿಗೆ ನೀಡಿದ ರಕ್ಷಿತ್​ ಶೆಟ್ಟಿ
ರಕ್ಷಿತ್ ಶೆಟ್ಟಿ, ಚಾರ್ಲಿ
TV9kannada Web Team

| Edited By: Madan Kumar

Jul 05, 2022 | 7:04 AM

‘777 ಚಾರ್ಲಿ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಶ್ವಾನ ಮತ್ತು ಮನುಷ್ಯನ ನಡುವೆ ಇರುವ ಬಾಂಧವ್ಯದ ಕಥೆ ಹೊಂದಿರುವ ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ಬಿಡುಗಡೆಯಾಗಿ ಯಶಸ್ವಿ 25 ದಿನಗಳನ್ನು ಈ ಸಿನಿಮಾ ಪೂರೈಸಿದೆ. ಇನ್ನೂ ಅನೇಕ ಕಡೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೇ ಪರಭಾಷೆ ಮಂದಿ ಕೂಡ ‘777 ಚಾರ್ಲಿ’ (777 Charlie) ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​ (Box Office Collection) ಆಗಿದೆ. ಒಟ್ಟಾರೆ ಈ ಚಿತ್ರಕ್ಕೆ ಆಗಿರುವುದು ಬರೋಬ್ಬರಿ 150 ಕೋಟಿ ರೂಪಾಯಿ ಬಿಸ್ನೆಸ್​. ಹಾಗಂತ ಇದು ಅಂಕೆ-ಕಂತೆ ಅಲ್ಲ. ಸ್ವತಃ ರಕ್ಷಿತ್​ ಶೆಟ್ಟಿ (Rakshit Shetty) ಅವರು ಈ ಲೆಕ್ಕ ನೀಡಿದ್ದಾರೆ. ಅಲ್ಲದೇ ಲಾಭದ ಹಣದಲ್ಲಿ ಶೇಕಡ 5ರಷ್ಟನ್ನು ಪ್ರಾಣಿಗಳಿಗಾಗಿ ಮೀಸಲಿಡಲು ಅವರು ನಿರ್ಧರಿಸಿದ್ದಾರೆ.

ಈ ಬಗ್ಗೆ ‘777 ಚಾರ್ಲಿ’ ಚಿತ್ರತಂಡದಿಂದ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ. ‘777 ಚಾರ್ಲಿ ನಿಮ್ಮನ್ನು ತಲುಪಿ 25 ದಿನಗಳು ಕಳೆದರೂ, ಎಂದಿನಂತೆ ನಿಮ್ಮಿಂದ ನಮಗೆ ಸಿಗುತ್ತಿರೋ ಪ್ರೀತಿ ಅನನ್ಯ. ಈ ಚಿತ್ರದಿಂದ ನಾವು ಗಳಿಸಿರುವ ಮೆಚ್ಚುಗೆ ಮತ್ತು ಮನ್ನಣೆಯಿಂದ ನಾವು ಅತ್ಯಂತ ಧನ್ಯರಾಗಿದ್ದೇವೆ’ ಎಂದು ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ರಕ್ಷಿತ್​ ಶೆಟ್ಟಿ ಬರೆದುಕೊಂಡಿದ್ದಾರೆ.

‘ಈ ಅಭೂತಪೂರ್ವ ಯಶಸ್ಸಿಗೆ ನಮ್ಮ ತಂಡದ ಪರಿಶ್ರಮವಿದೆ. ಈ ಚಿತ್ರವನ್ನು ಯಶಸ್ವಿಯಾಗಿ ತೆರೆಗೆ ತರುವಲ್ಲಿ ಹಲವಾರು ರೀತಿಯಲ್ಲಿ ಶ್ರಮಿಸಿರುವ ಚಿತ್ರತಂಡದ ಜೊತೆಗೆ, 777 ಚಾರ್ಲಿ ಗಳಿಸಿರುವ ಲಾಭದ ಶೇಕಡಾ 10ರಷ್ಟು ಹಂಚಿಕೊಳ್ಳಲು ನಾವು ನಿರ್ಧರಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

‘777 ಚಾರ್ಲಿ ಚಿತ್ರತಂಡಕ್ಕೆ ಸಾಕುಪ್ರಾಣಿಗಳ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಬೇಕಾದ ಪರಿಶ್ರಮ ಹಾಗೂ ಸೌಲಭ್ಯಗಳ ಬಗ್ಗೆ ಕಾಳಜಿ ಇದ್ದು, ಈ ನಿಟ್ಟಿನಲ್ಲಿ, ನಿರಾಶ್ರಿತ ಶ್ವಾನಗಳ ಹಾಗೂ ಮೂಕಪ್ರಾಣಿಗಳ ರಕ್ಷಣೆ ಮತ್ತು ಪೋಷಣೆಗೆ ಸಮರ್ಪಿತವಾಗಿ ದೇಶಾದ್ಯಂತ ಕೆಲಸ ಮಾಡುತ್ತಿರುವ ಎನ್​ಜಿಒಗಳಿಗೆ 777 ಚಾರ್ಲಿ ಗಳಿಸಿರುವ ಲಾಭದಲ್ಲಿ ಶೇಕಡ 5ರಷ್ಟು ತಲುಪಿಸಲು ನಾವು ನಿರ್ಧರಿಸಿದ್ದೇವೆ. ನಮ್ಮ ಈ ಅಳಿಲು ಸೇವೆ ಅನ್ನಿತರರಿಗೆ ಸ್ಫೂರ್ತಿಯಾಗಬಹುದು. ನಮ್ಮ ಜಗತ್ತನ್ನು ನಿಮ್ಮ ಪ್ರೀತಿಯಿಂದ ಬೆಳಗಿಸಿದ್ದಕ್ಕಾಗಿ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು’ ಎಂದು ರಕ್ಷಿತ್​ ಶೆಟ್ಟಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಎಷ್ಟು ಕ್ಯೂಟ್ ಆಗಿ ಮಾತಾಡ್ತಾಳೆ ನೋಡಿ ‘777 ಚಾರ್ಲಿ’ ಶಾರ್ವರಿ

ಇದನ್ನೂ ಓದಿ

Rakshit Shetty: ‘777 ಚಾರ್ಲಿ’ ಸಿನಿಮಾಗೆ ಸೀಕ್ವೆಲ್​; ಪ್ಲ್ಯಾನ್ ಬಗ್ಗೆ ಮಾಹಿತಿ ನೀಡಿದ ರಕ್ಷಿತ್ ಶೆಟ್ಟಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada