Rakshit Shetty: ‘777 ಚಾರ್ಲಿ’ ಸಿನಿಮಾಗೆ ಸೀಕ್ವೆಲ್​; ಪ್ಲ್ಯಾನ್ ಬಗ್ಗೆ ಮಾಹಿತಿ ನೀಡಿದ ರಕ್ಷಿತ್ ಶೆಟ್ಟಿ

‘777 ಚಾರ್ಲಿ’ ಚಿತ್ರಕ್ಕೂ ಸಕ್ಸಸ್ ಟ್ಯಾಗ್ ಸಿಕ್ಕಿದೆ. ಹೀಗಾಗಿ, ಈ ಸಿನಿಮಾಗೆ ಎರಡನೇ ಪಾರ್ಟ್​ ಬರುತ್ತದೆಯೇ ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ಈ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.

Rakshit Shetty: ‘777 ಚಾರ್ಲಿ’ ಸಿನಿಮಾಗೆ ಸೀಕ್ವೆಲ್​; ಪ್ಲ್ಯಾನ್ ಬಗ್ಗೆ ಮಾಹಿತಿ ನೀಡಿದ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ
TV9kannada Web Team

| Edited By: Rajesh Duggumane

Jul 04, 2022 | 5:36 PM

ರಕ್ಷಿತ್ ಶೆಟ್ಟಿ (Rakshit Shetty) ಅವರು ನಟನಾಗಿ, ನಿರ್ಮಾಪಕನಾಗಿ ‘777 ಚಾರ್ಲಿ’ (777 Charlie Movie) ಸಿನಿಮಾ ಮೂಲಕ ಗೆಲುವು ಕಂಡಿದ್ದಾರೆ. ಈ ಸಿನಿಮಾದಿಂದ ಅವರಿಗೆ ಹಣದ ಹೊಳೆ ಹರಿದಿದೆ. ಸಿನಿಮಾ ಯಶಸ್ಸು ಕಂಡ ಬಗ್ಗೆ ಮಾಹಿತಿ ನೀಡಲು ಚಿತ್ರತಂಡದವರು ಸುದ್ದಿಗೋಷ್ಠಿ ಕರೆದಿದ್ದರು. ಈ ಚಿತ್ರದ ಟಿವಿ ಹಕ್ಕು, ಒಟಿಟಿ ಹಕ್ಕು, ಬಾಕ್ಸ್ ಆಫೀಸ್​ ಕಲೆಕ್ಷನ್ ಎಲ್ಲವೂ ಸೇರಿ 150 ಕೋಟಿ ರೂಪಾಯಿ ಬಿಸ್ನೆಸ್​ ಆಗಿದೆ ಎಂಬ ಮಾಹಿತಿಯನ್ನು ಚಿತ್ರತಂಡದವರು ನೀಡಿದರು. ಜತೆಗೆ ಸಿನಿಮಾಗೆ ಸೀಕ್ವೆಲ್ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದರು.

ಸಾಮಾನ್ಯವಾಗಿ ಯಶಸ್ವಿ ಸಿನಿಮಾಗೆ ಸೀಕ್ವೆಲ್ ಮಾಡಲಾಗುತ್ತದೆ. ‘777 ಚಾರ್ಲಿ’ ಚಿತ್ರಕ್ಕೂ ಸಕ್ಸಸ್ ಟ್ಯಾಗ್ ಸಿಕ್ಕಿದೆ. ಹೀಗಾಗಿ, ಈ ಸಿನಿಮಾಗೆ ಎರಡನೇ ಪಾರ್ಟ್​ ಬರುತ್ತದೆಯೇ ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ಈ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ‘ನಾಲ್ಕು ವರ್ಷ ತೆಗೆದುಕೊಂಡು ಈ ಸಿನಿಮಾ ಮಾಡಿದ್ದೇವೆ. ಅದು ಜೀರ್ಣ ಆಗಬೇಕು. ಜೀರ್ಣ ಆಗಬೇಕು ಎಂದರೆ ನಾಲ್ಕೈದು ಸಿನಿಮಾಗಳಲ್ಲಿ ಕೆಲಸ ಮಾಡಬೇಕು. ಹೊಸ ಅನುಭವಗಳನ್ನು ಪಡೆದಾಗ ಆಗ ‘ಚಾರ್ಲಿ 2’ ಮಾಡಬಹುದು’ ಎಂದರು ರಕ್ಷಿತ್​.

ಚಾರ್ಲಿ ಸೀಕ್ವೆಲ್​ಗೆ ನಾಯಕಿ ಯಾರು ಎನ್ನುವ ಬಗ್ಗೆಯೂ ರಕ್ಷಿತ್ ಮಾತನಾಡಿದರು. ‘ಕಿರಣ್​ ರಾಜ್​ಗೆ ಎರಡನೇ ಪಾರ್ಟ್​ ಮಾಡಬೇಕು ಎನಿಸಿದರೆ ನಾವು ಖಂಡಿತವಾಗಿಯೂ ಮಾಡುತ್ತೇವೆ. ಆ ಚಿತ್ರಕ್ಕೆ ನಾನೇ ಬಂಡವಾಳ ಹೂಡುತ್ತೇನೆ. ಶರ್ವರಿ (ಚಾರ್ಲಿ ಸಿನಿಮಾದಲ್ಲಿ ಬಾಲಕಿ ಪಾತ್ರ ಮಾಡಿದ್ದ ಹುಡುಗಿ) ಆಗ ದೊಡ್ಡವಳಾಗಿರುತ್ತಾಳೆ. ಅವಳೇ ಸಿನಿಮಾಗೆ ನಾಯಕಿ ಆಗಬಹುದು’ ಎಂದು ಮುಂದಿನ ಪ್ಲ್ಯಾನ್ ಬಗ್ಗೆ ಮಾಹಿತಿ ನೀಡಿದರು ರಕ್ಷಿತ್ ಶೆಟ್ಟಿ.

‘777 ಚಾರ್ಲಿ ಸಿನಿಮಾ ಬಿಡುಗಡೆ ಆಗಿ 25 ದಿನ ಪೂರೈಸಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈವರೆಗೂ ‘777 ಚಾರ್ಲಿ ಸಿನಿಮಾ ಒಟ್ಟಾರೆಯಾಗಿ 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಹಣದಲ್ಲಿ ನಾಯಿಗಳಿಗಾಗಿಯೂ ಒಂದಷ್ಟು ಮೊತ್ತವನ್ನು ಮೀಸಲಿಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 777 Charlie: ರಕ್ಷಿತ್ ಶೆಟ್ಟಿ ‘ಚಾರ್ಲಿ’ ಅಭಿನಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಫಿದಾ..!

ಇದನ್ನೂ ಓದಿ

777 Charlie: 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ‘777 ಚಾರ್ಲಿ’; ಸಕ್ಸಸ್​ ಮೀಟ್​ನಲ್ಲಿ ಲೆಕ್ಕ ನೀಡಿದ ರಕ್ಷಿತ್ ಶೆಟ್ಟಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada