ವಿಕ್ರಂ ಪ್ರಭು ಅವರನ್ನು ಮತ್ತೆ ಚಿತ್ರರಂಗಕ್ಕೆ ಕರೆತಂದ ‘ವೆಡ್ಡಿಂಗ್ ಗಿಫ್ಟ್’

‘ವೆಡ್ಡಿಂಗ್ ಗಿಫ್ಟ್’ ಸಿನಿಮಾ ಹಿಂದೆ ಒಂದು ಇಂಟರೆಸ್ಟಿಂಗ್ ಸ್ಟೋರಿಯೇ ಇದೆ. ನಿರ್ದೇಶಕನಾಗಬೇಕು ಎನ್ನುವ ಆಸಕ್ತಿ ಹೊಂದಿದ್ದ ವಿಕ್ರಂ ಪ್ರಭು ಸಿನಿಮಾ ನಿರ್ದೇಶನದ ವಿಭಾಗದಲ್ಲಿ ಹಲವು ವರ್ಷಗಳು ಕಾರ್ಯ ನಿರ್ವಹಿಸಿದ್ದರು.

ವಿಕ್ರಂ ಪ್ರಭು ಅವರನ್ನು ಮತ್ತೆ ಚಿತ್ರರಂಗಕ್ಕೆ ಕರೆತಂದ ‘ವೆಡ್ಡಿಂಗ್ ಗಿಫ್ಟ್’
ವೆಡ್ಡಿಂಗ್ ಗಿಫ್ಟ್ ಸಿನಿಮಾ ತಂಡ
TV9kannada Web Team

| Edited By: Rajesh Duggumane

Jul 04, 2022 | 4:17 PM

ಪ್ರಸ್ತುತ ಸಮಾಜದ ಹಲವು ವಿಚಾರಗಳು ಸಿನಿಮಾಗಳಾಗಿ ರೂಪುಗೊಳ್ಳುತ್ತಿವೆ. ಅಂತಹದ್ದೇ ಒಂದು ಕಥಾಹಂದರದ ಸಿನಿಮಾ ‘ವೆಡ್ಡಿಂಗ್ ಗಿಫ್ಟ್’ (Wedding Gift Movie). ನಿಶಾನ್, ಸೋನು ಗೌಡ (Sonu Gowda), ಪ್ರೇಮಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡಿನ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಜುಲೈ 8ಕ್ಕೆ ಸಿನಿಮಾ ತೆರೆ ತಾಣಲಿದೆ.

‘ವೆಡ್ಡಿಂಗ್ ಗಿಫ್ಟ್’ ಸಿನಿಮಾ ಹಿಂದೆ ಒಂದು ಇಂಟರೆಸ್ಟಿಂಗ್ ಸ್ಟೋರಿಯೇ ಇದೆ. ನಿರ್ದೇಶಕನಾಗಬೇಕು ಎನ್ನುವ ಆಸಕ್ತಿ ಹೊಂದಿದ್ದ ವಿಕ್ರಂ ಪ್ರಭು ಸಿನಿಮಾ ನಿರ್ದೇಶನದ ವಿಭಾಗದಲ್ಲಿ ಹಲವು ವರ್ಷಗಳು ಕಾರ್ಯ ನಿರ್ವಹಿಸಿದ್ದರು. ಅದರಲ್ಲೂ ಕನ್ನಡದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಗರಡಿಯಲ್ಲಿಯೂ ಪಳಗಿ ‘ಲವ್’ ಹೆಸರಿನ ಸಿನಿಮಾದಲ್ಲಿಯೂ ಕೆಲಸ ಮಾಡಿದ್ದರು. ಆ ನಂತರ ವೈಯಕ್ತಿಕ ಜೀವನದ ಕಾರಣ ಪುಣೆಗೆ ತೆರಳಿ ಅಲ್ಲಿಯೇ ಹಲವು ವರ್ಷಗಳು ವಾಸವಿದ್ದರು.

ಅಷ್ಟು ವರ್ಷಗಳು ಚಿತ್ರರಂಗದಿಂದ ದೂರವಿದ್ದರೂ ಸಿನಿಮಾ ನಿರ್ದೇಶಕನಾಗಲೇಬೇಕು ಎಂಬ ಹಂಬಲ ಅವರಲ್ಲಿತ್ತು. ಕೇವಲ ಕಮರ್ಷಿಯಲ್ ಅಂಶಗಳಲ್ಲದೇ, ಅದರ ಜೊತೆಗೆ ಒಂದು ಉತ್ತಮ ಸಾಮಾಜಿಕ ಅಂಶವಿರುವ ಸಿನಿಮಾ ಮಾಡಬೇಕು ಎಂಬ ಉದ್ದೇಶ ಹೊಂದಿದ್ದರು. ಹೀಗಾಗಿಯೇ ವಿಕ್ರಂ ಪ್ರಭು ಈಗಿನ ದಾಂಪತ್ಯ ಜೀವನದಲ್ಲಿರುವ ಸಮಸ್ಯೆಗಳ ಎಳೆಯನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದರು.

ವಿಕ್ರಂ ಪ್ರಭು ನೈಜ ಘಟನಾವಳಿಗಳನ್ನಾಧರಿಸಿ, ಕೊಂಚ ಫೀಲ್ಡ್ ವರ್ಕ್ ಮಾಡಿ ಕಥೆಯೊಂದನ್ನು ಸಿದ್ಧಪಡಿಸಿದ್ದರು. ಆಗ ಮೂಡಿಬಂದಿದ್ದೇ ‘ವೆಡ್ಡಿಂಗ್ ಗಿಫ್ಟ್’ ಸಿನಿಮಾ. ನಿರ್ದೇಶನದ ಜೊತೆಗೆ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡರು. ಸಾಮಾಜಿಕ ಸಂದೇಶವಿರುವ ಚಿತ್ರವನ್ನು ಕಮರ್ಷಿಯಲ್ ಚೌಕಟ್ಟಿನೊಳಗೆ ರೂಪಿಸೋದು ಒಂದು ಸವಾಲು. ಇಂತಹ ಚಿತ್ರವನ್ನು ತಯಾರು ಮಾಡುವ ಸವಾಲಿನಲ್ಲಿ ನಿರ್ದೇಶಕ ವಿಕ್ರಂ ಪ್ರಭು ಗೆದ್ದಿದ್ದಾರೆ.

ವಿಕ್ರಂ ಪ್ರಭು ಫಿಲ್ಮ್ಸ್ ಲಾಂಛನದಲ್ಲಿ ‘ವೆಡ್ಡಿಂಗ್ ಗಿಫ್ಟ್’ ಸಿನಿಮಾ ಮೂಡಿಬಂದಿದೆ. ಬಾಲಚಂದ್ರ ಪ್ರಭು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಮಾಡಿದ್ದಾರೆ. ‘ವೆಡ್ಡಿಂಗ್ ಗಿಫ್ಟ್’ ಸಿನಿಮಾ ಇನ್ನೇನು ಕೆಲ ದಿನಗಳಲ್ಲಿ ರಿಲೀಸ್ ಆಗಲಿದ್ದು ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ನೋಡಬೇಕು.

ಇದನ್ನೂ ಓದಿ: ‘ವೆಡ್ಡಿಂಗ್ ಗಿಫ್ಟ್’ ಡ್ಯುಯೆಟ್ ಸಾಂಗ್​ಗೆ ಸಖತ್ ರೆಸ್ಪಾನ್ಸ್; ಮೋಡಿ ಮಾಡುತ್ತಿದೆ ಜಯಂತ ಕಾಯ್ಕಿಣಿ ಸಾಹಿತ್ಯ

 ವಿಕ್ರಂ ಪ್ರಭು ನಿರ್ದೇಶನದ ‘ವೆಡ್ಡಿಂಗ್ ಗಿಫ್ಟ್’ ಕುಟುಂಬ ಕಲಹಕ್ಕೆ ಟ್ಯಾಬ್ಲೆಟ್! ಇಂಟ್ರಸ್ಟಿಂಗ್ ಆಗಿದೆ ಟೀಸರ್

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada