‘ಕಾಂತಾರ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿರುವ ರಿಷಬ್ ಶೆಟ್ಟಿ ಅವರು ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಅವರು ಹೊಸ ಕಾರಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
1 / 5
‘ಆಡಿ ಕ್ಯೂ7’ ಕಾರು ರಿಷಬ್ ಶೆಟ್ಟಿ ಮನೆ ಸೇರಿದೆ. ದುಬಾರಿ ಬೆಲೆಯ ಈ ಐಷಾರಾಮಿ ಕಾರು ಖರೀದಿಸಿದ ಅವರಿಗೆ ಅಭಿಮಾನಿಗಳು ಮತ್ತು ಸ್ನೇಹಿತರು ಅಭಿನಂದನೆ ತಿಳಿಸುತ್ತಿದ್ದಾರೆ. ಕಾರಿನ ಜೊತೆ ನಿಂತು ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
2 / 5
ಕನ್ನಡ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಸಕ್ರಿಯರಾಗಿದ್ದಾರೆ. ಅವರ ಪ್ರತಿ ಸಿನಿಮಾಗಳು ಕೂಡ ಒಂದಿಲ್ಲೊಂದು ರೀತಿಯಲ್ಲಿ ಗಮನ ಸೆಳೆಯುತ್ತಿವೆ.
3 / 5
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಅವರು ಕೂಡ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಹಲವಾರು ಸಿನಿಮಾಗಳಿಗೆ ಅವರು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ತಮ್ಮ ಎರಡು ಮಕ್ಕಳ ಆರೈಕೆಯಲ್ಲೂ ಅವರು ತೊಡಗಿಕೊಂಡಿದ್ದಾರೆ.
4 / 5
‘ಆಡಿ ಕ್ಯೂ7 ಹೊಸದಾಗಿ ಸೇರ್ಪಡೆ ಆಯ್ತು. ನಿಮ್ಮ ಪರಿಶ್ರಮ ಮತ್ತು ಬದ್ಧತೆ ಬಗ್ಗೆ ಯಾವಾಗಲೂ ಹೆಮ್ಮೆ ಆಗುತ್ತದೆ’ ಎಂದು ಪ್ರಗತಿ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.