- Kannada News Photo gallery Kantara movie actor director Rishab Shetty's new Audi Q7 car photos go viral
Rishab Shetty: ಹೊಸ ‘ಆಡಿ ಕ್ಯೂ7’ ಕಾರು ಖರೀದಿಸಿ ಖುಷಿಪಟ್ಟ ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ; ಇಲ್ಲಿದೆ ಫೋಟೋ ಗ್ಯಾಲರಿ
Rishab Shetty | Audi Car: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಈಗ ‘ಆಡಿ ಕ್ಯೂ7’ ಕಾರಿನ ಒಡೆಯ. ಅವರು ಖರೀದಿಸಿರುವ ಹೊಸ ಕಾರಿನ ಫೋಟೋ ವೈರಲ್ ಆಗಿದೆ. ‘ಆಡಿ ಕ್ಯೂ7’ ಕಾರು ರಿಷಬ್ ಶೆಟ್ಟಿ ಮನೆ ಸೇರಿದೆ. ದುಬಾರಿ ಬೆಲೆಯ ಈ ಐಷಾರಾಮಿ ಕಾರು ಖರೀದಿಸಿದ ಅವರಿಗೆ ಅಭಿಮಾನಿಗಳು ಮತ್ತು ಸ್ನೇಹಿತರು ಅಭಿನಂದನೆ ತಿಳಿಸುತ್ತಿದ್ದಾರೆ. ಕಾರಿನ ಜೊತೆ ನಿಂತು ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
Updated on:Apr 01, 2026 | 3:41 PM

‘ಕಾಂತಾರ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿರುವ ರಿಷಬ್ ಶೆಟ್ಟಿ ಅವರು ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಅವರು ಹೊಸ ಕಾರಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

‘ಆಡಿ ಕ್ಯೂ7’ ಕಾರು ರಿಷಬ್ ಶೆಟ್ಟಿ ಮನೆ ಸೇರಿದೆ. ದುಬಾರಿ ಬೆಲೆಯ ಈ ಐಷಾರಾಮಿ ಕಾರು ಖರೀದಿಸಿದ ಅವರಿಗೆ ಅಭಿಮಾನಿಗಳು ಮತ್ತು ಸ್ನೇಹಿತರು ಅಭಿನಂದನೆ ತಿಳಿಸುತ್ತಿದ್ದಾರೆ. ಕಾರಿನ ಜೊತೆ ನಿಂತು ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಸಕ್ರಿಯರಾಗಿದ್ದಾರೆ. ಅವರ ಪ್ರತಿ ಸಿನಿಮಾಗಳು ಕೂಡ ಒಂದಿಲ್ಲೊಂದು ರೀತಿಯಲ್ಲಿ ಗಮನ ಸೆಳೆಯುತ್ತಿವೆ.

ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಅವರು ಕೂಡ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಹಲವಾರು ಸಿನಿಮಾಗಳಿಗೆ ಅವರು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ತಮ್ಮ ಎರಡು ಮಕ್ಕಳ ಆರೈಕೆಯಲ್ಲೂ ಅವರು ತೊಡಗಿಕೊಂಡಿದ್ದಾರೆ.

‘ಆಡಿ ಕ್ಯೂ7 ಹೊಸದಾಗಿ ಸೇರ್ಪಡೆ ಆಯ್ತು. ನಿಮ್ಮ ಪರಿಶ್ರಮ ಮತ್ತು ಬದ್ಧತೆ ಬಗ್ಗೆ ಯಾವಾಗಲೂ ಹೆಮ್ಮೆ ಆಗುತ್ತದೆ’ ಎಂದು ಪ್ರಗತಿ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.
Published On - 5:11 pm, Sun, 3 July 22




