ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ನೋಡಿ ಮೆಚ್ಚಿಕೊಂಡ ನಟಿ ರಮ್ಯಾ ಹೇಳಿದ್ದೇನು?

ಆಯ್ದ ಕೆಲ ಸೆಲೆಬ್ರಿಟಿಗಳಿಗೋಸ್ಕರ ಆಯೋಜಿಸಿದ್ದ ‘777 ಚಾರ್ಲಿ’ ವಿಶೇಷ ಶೋನಲ್ಲಿ ರಮ್ಯಾ ಭಾಗಿ ಆಗಿದ್ದಾರೆ. ಅವರಿಗೆ ಸಿನಿಮಾ ಸಾಕಷ್ಟು ಇಷ್ಟವಾಗಿದೆ.

ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ನೋಡಿ ಮೆಚ್ಚಿಕೊಂಡ ನಟಿ ರಮ್ಯಾ ಹೇಳಿದ್ದೇನು?
ರಕ್ಷಿತ್-ರಮ್ಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 07, 2022 | 1:30 PM

ನಟಿ ರಮ್ಯಾ ಅವರು (Actress Ramya) ನಟನೆ ಹಾಗೂ ರಾಜಕೀಯದಿಂದ ದೂರ ಉಳಿದುಕೊಂಡಿದ್ದಾರೆ. ಅವರು ಮತ್ತೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಇದನ್ನು ಸ್ವತಃ ರಮ್ಯಾ ಕೂಡ ಒಪ್ಪಿಕೊಂಡಿದ್ದಾರೆ. ಆದರೆ, ಯಾವ ತಂಡದ ಮೂಲಕ ಅವರು ಕಂಬ್ಯಾಕ್ ಮಾಡಲಿದ್ದಾರೆ ಅನ್ನೋದು ಇನ್ನೂ ಗುಟ್ಟಾಗಿಯೇ ಇದೆ. ಈಗ ಅವರು ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ (777 Charlie Movie) ನೋಡಿ ಮೆಚ್ಚಿಕೊಂಡಿದ್ದಾರೆ. ತಂಡಕ್ಕೆ ಅವರು ಶುಭಹಾರೈಸಿದ್ದಾರೆ.

ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ ನಿಜ. ಆದರೆ, ಚಿತ್ರರಂಗದ ಜತೆಗಿನ ನಂಟನ್ನು ಕಡಿದುಕೊಂಡಿಲ್ಲ. ಅವರು ಹಲವು ಸಿನಿಮಾ ತಂಡಗಳ ಬೆನ್ನುತಟ್ಟುತ್ತಿದ್ದಾರೆ. ಈ ಮೊದಲು ಅನೇಕ ಸಿನಿಮಾಗಳಿಗೆ ಅವರು ಪ್ರೋತ್ಸಾಹ ನೀಡಿದ್ದರು. ಈಗ ಆಯ್ದ ಕೆಲ ಸೆಲೆಬ್ರಿಟಿಗಳಿಗೋಸ್ಕರ ಆಯೋಜಿಸಿದ್ದ ‘777 ಚಾರ್ಲಿ’ ವಿಶೇಷ ಶೋನಲ್ಲಿ ರಮ್ಯಾ ಭಾಗಿ ಆಗಿದ್ದಾರೆ. ಅವರಿಗೆ ಸಿನಿಮಾ ಸಾಕಷ್ಟು ಇಷ್ಟವಾಗಿದೆ.

ನಟಿ ರಮ್ಯಾಗೆ ಶ್ವಾನ ಎಂದರೆ ತುಂಬಾನೇ ಇಷ್ಟ. ಬೆಂಗಳೂರಿನಲ್ಲಿ ಬೀದಿ ಬದಿ ನಾಯಿಯನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದಾಗ ಇದನ್ನು ಅವರು ವಿರೋಧಿಸಿದ್ದರು. ಈ ಪ್ರತಿಭಟನೆಯಲ್ಲಿ ಅವರು ಕೂಡ ಭಾಗಿ ಆಗಿದ್ದರು. ಈಗ ಶ್ವಾನದ ಬಗ್ಗೆಯೇ ‘777 ಚಾರ್ಲಿ’ ರೆಡಿ ಆಗಿದೆ. ಹೀಗಾಗಿ, ಅವರು ತುಂಬಾನೇ ಇಷ್ಟಪಟ್ಟು ಈ ಸಿನಿಮಾ ವೀಕ್ಷಿಸಿದ್ದಾರೆ.

ಇದನ್ನೂ ಓದಿ
Image
Ramya Divya Spandana: ಚೇತನಾ ರಾಜ್​ ನಿಧನದ ಬಗ್ಗೆ ರಮ್ಯಾ ಪ್ರತಿಕ್ರಿಯೆ; ಚಿತ್ರರಂಗದ ಕಹಿ ಸತ್ಯದ ಕುರಿತು ಮೌನ ಮುರಿದ ನಟಿ
Image
ಉದಯಪುರದಲ್ಲಿ ಪಾಟೀಲ್ – ಡಿಕೆಶಿ ಹೆಗಲ ಮೇಲೆ ಕೈ ಹಾಕಿ ಭಾಯ್ ಭಾಯ್! ಇತ್ತ ನಟಿ ರಮ್ಯಾ ಕೂಲ್ ಕೂಲ್ ಟ್ವೀಟ್! ಏನದು?
Image
Rakshit Shetty: ‘ರಮ್ಯಾ ನನ್ನ ಕ್ರಶ್​, ಆದರೆ ಮದುವೆ ಬಗ್ಗೆ ಹಬ್ಬಿರೋದು ಗಾಸಿಪ್​’: ನೇರ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್​ ಶೆಟ್ಟಿ
Image
Ramya: 8 ಕೋಟಿ ವಂಚಿಸಿ ಎಲ್ಲಿಗೂ ಓಡಿಹೋಗಿಲ್ಲ, ಸುಮ್ಮನಿದ್ದಿದ್ದೇ ನನ್ನ ದೊಡ್ಡ ತಪ್ಪು; ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸಿಡಿದೆದ್ದ ರಮ್ಯಾ

ಇದನ್ನೂ ಓದಿ: Rakshit Shetty: ‘ರಮ್ಯಾ ನನ್ನ ಕ್ರಶ್​, ಆದರೆ ಮದುವೆ ಬಗ್ಗೆ ಹಬ್ಬಿರೋದು ಗಾಸಿಪ್​’: ನೇರ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್​ ಶೆಟ್ಟಿ

‘777 ಚಾರ್ಲಿ ಎಮೋಷನಲ್ ಸಿನಿಮಾ. ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ ಇದು. ಇಂತಹದೊಂದು ಅದ್ಭುತ ವಿಚಾರ ಇರುವ ಸಿನಿಮಾವನ್ನು ಕೊಟ್ಟಿರುವ ರಕ್ಷಿತ್ ಶೆಟ್ಟಿ ಹಾಗೂ ತಂಡಕ್ಕೆ ಶುಭ ಹಾರೈಕೆ’ ಎಂದು ರಮ್ಯಾ ಹೇಳಿದ್ದಾರೆ. ರಮ್ಯಾ ಅವರ ಈ ಧನಾತ್ಮಕ ಪ್ರತಿಕ್ರಿಯೆಯಿಂದ ಚಿತ್ರತಂಡಕ್ಕೆ ಹೊಸ ಬಲ ಸಿಕ್ಕಂತೆ ಆಗಿದೆ. ‘ರಮ್ಯಾ ಅವರ ದೊಡ್ಡ ಫ್ಯಾನ್​ ನಾನು’ ಎಂದು ರಕ್ಷಿತ್ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಈಗ ರಮ್ಯಾ ಅವರಿಂದಲೇ ‘777 ಚಾರ್ಲಿ’ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದಕ್ಕೆ ರಕ್ಷಿತ್ ಕೂಡ ಖುಷಿಯಾಗಿದ್ದಾರೆ.

‘777 ಚಾರ್ಲಿ’ ಪ್ರಚಾರ ಕಾರ್ಯದಲ್ಲಿ ರಕ್ಷಿತ್ ಬ್ಯುಸಿ ಆಗಿದ್ದಾರೆ. ಜೂನ್ 10ಕ್ಕೆ ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾಗೆ ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್