ಹೊಸ ಫೋಟೋದಲ್ಲಿ ಮಿಂಚಿದ ನಟಿ ಅಮೂಲ್ಯ; ಎರಡು ಮಕ್ಕಳ ತಾಯಿಗೆ ಫ್ಯಾನ್ಸ್ ಕೇಳಿದ್ದು ಒಂದೇ ಪ್ರಶ್ನೆ

ಅವಳಿ ಮಕ್ಕಳು ಜನಿಸಿದ ನಂತರ ಅಮೂಲ್ಯ ಹಂಚಿಕೊಂಡಿರುವ ಫೋಟೋ ಅನೇಕರ ಗಮನ ಸೆಳೆದಿದೆ. ಅವರು ಈ ಫೋಟೋದಲ್ಲಿ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ.

ಹೊಸ ಫೋಟೋದಲ್ಲಿ ಮಿಂಚಿದ ನಟಿ ಅಮೂಲ್ಯ; ಎರಡು ಮಕ್ಕಳ ತಾಯಿಗೆ ಫ್ಯಾನ್ಸ್ ಕೇಳಿದ್ದು ಒಂದೇ ಪ್ರಶ್ನೆ
ಅಮೂಲ್ಯ
TV9kannada Web Team

| Edited By: Vinay Bhat

Jul 07, 2022 | 7:54 AM

ನಟಿ ಅಮೂಲ್ಯ (Amulya) ಅವರು ಕೆಲ ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಅಮೂಲ್ಯ ತಾಯಿ ಆಗಿರುವ ವಿಚಾರ ಅವರ ಆಪ್ತ ಬಳಗ ಹಾಗೂ ಫ್ಯಾನ್ಸ್​ಗೆ ಖುಷಿ ನೀಡಿದೆ. ಅಮೂಲ್ಯ ಅವರು ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟೀವ್ ಆಗಿದ್ದಾರೆ. ಪ್ರೆಗ್ನೆಂಟ್ ಆಗಿದ್ದ ಸಂದರ್ಭದ ಹಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಮಗು ಜನಿಸಿದ ನಂತರ ಅವರು ಸಾಮಾಜಿಕ ಜಾಲತಾಣದಿಂದ ಒಂದು ಬ್ರೇಕ್ ತೆಗೆದುಕೊಂಡಿದ್ದರು. ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಹೊಸಹೊಸ ಫೋಟೋಗಳ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ.

ಮಗು ಜನಿಸಿದ ನಂತರ ಮಹಿಳೆಯರ ದೇಹದ ತೂಕ ಕೊಂಚ ಹೆಚ್ಚುತ್ತದೆ. ಸಾಕಷ್ಟು ಹೀರೋಯಿನ್​ಗಳಿಗೆ ಈ ವಿಚಾರದಲ್ಲಿ ಚಿಂತೆ ಇದೆ. ಇದೇ ಕಾರಣಕ್ಕೆ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಕೆಲ ನಟಿಯರು ಆದ್ಯತೆ ನೀಡುತ್ತಾರೆ. ಅವಳಿ ಮಕ್ಕಳು ಜನಿಸಿದ ನಂತರ ಅಮೂಲ್ಯ ಹಂಚಿಕೊಂಡಿರುವ ಫೋಟೋ ಅನೇಕರ ಗಮನ ಸೆಳೆದಿದೆ. ಅವರು ಈ ಫೋಟೋದಲ್ಲಿ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ.

ಅಮೂಲ್ಯ ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಜಿಮ್ ಹಾಗೂ ಯೋಗ ಮಾಡುತ್ತಾರೆ. ಮಗು ಜನಿಸಿದ ಕೆಲವೇ ತಿಂಗಳ ಬಳಿಕ ಅವರು ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಫೋಟೋ ನೋಡಿ ಅವರ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ. ಅಲ್ಲದೆ, ಅವರ ಎದುರು ಒಂದು ಪ್ರಶ್ನೆ ಇಡುತ್ತಿದ್ದಾರೆ. ‘ಅಮೂಲ್ಯ ಅವರೇ ಸಖತ್ ಸ್ಲಿಮ್ ಆಗಿ ಕಾಣಿಸುತ್ತಿದ್ದೀರಿ. ದಯವಿಟ್ಟು ನೀವು ಮಾಡುವ ವರ್ಕೌಟ್​ ದಿನಚರಿ ತಿಳಿಸಿ’ ಎಂದು ಕೆಲವರು ಕೋರಿದ್ದಾರೆ. ಇನ್ನೂ ಕೆಲವರು ‘ನೀವು ಯಾವ ರೀತಿಯ ಆಹಾರ ಸೇವಿಸುತ್ತೀರಿ’ ಎಂಬ ಪ್ರಶ್ನೆ ಇಟ್ಟಿದ್ದಾರೆ.

ಅಮೂಲ್ಯ ಅವರು ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇತ್ತೀಚೆಗೆ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಇನ್ನು ಕೆಲ ವರ್ಷ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಲಿದ್ದಾರೆ. ಇತ್ತೀಚೆಗೆ ಅವಳಿ ಮಕ್ಕಳ ಕೈ ಫೋಟೋ ಹಂಚಿಕೊಂಡಿದ್ದರು. ಮಗುವಿನ ಮುಖ ನೋಡಬೇಕು ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅದರ ಫೋಟೋಗಳನ್ನು ಅವರು ಯಾವಾಗ ಅಪ್​ಲೋಡ್ ಮಾಡುತ್ತಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ನಟಿ ಅಮೂಲ್ಯ; ಸಂತೂರ್ ಮಮ್ಮಿ ಎಂದ ಫ್ಯಾನ್ಸ್

ಇದನ್ನೂ ಓದಿ

Amulya: ನಟಿ ಅಮೂಲ್ಯ ಜೀವನ ಬದಲಿಸಿದ ‘ಚೆಲುವಿನ ಚಿತ್ತಾರ’ ಸಿನಿಮಾಗೆ 15 ವರ್ಷ; ನೆನಪಿನ ಪುಟ ತೆರೆದ ಐಸೂ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada