Viral: ಕೊಕೊಕೋಲ, ಕ್ರೀಮ್ ಚೀಸ್, ಆರೆಂಜ್ ಜೆಲ್ಲೋದಲ್ಲೂ ಮಾಡಬಹುದು ಸಲಾಡ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಪಡೆದ ಪೋಸ್ಟ್
ಕೊಕೊಕೋಲ ಮತ್ತು ಇತರ ಕ್ರೀಮ್ಗಳನ್ನು ಬಳಸಿಕೊಂಡು ಸಲಾಡ್ ತಯಾರಿಸಲಾಗುತ್ತದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಆಹಾರದ ಮೇಲೆ ಸಂಶೋಧನೆಗಳು ನಡೆಯುತ್ತಲೇ ಇದೆ, ಕೆಲವೊಂದು ವಿಲಕ್ಷಣ ಆಹಾರ ಸಂಯೋಜನೆಗಳಿಗೆ ಇಂಟರ್ನೆಟ್ ಹಾಟ್ಸ್ಪಾಟ್ ಆಗಿದೆ. ಆದಾಗ್ಯೂ, ಸಲಾಡ್ ರೀತಿಯ ಈ ಪಾಕ ವಿಧಾನವು ಎಲ್ಲಾ ರೀತಿಯ ಭಕ್ಷ್ಯಗಳನ್ನು ಮೀರಿಸುವಂತಿದೆ. ಅಷ್ಟಕ್ಕೂ ಈ ಸಲಾಡ್ (Salad) ಮಾಡಿರುವುದು ಕೊಕೊಕೋಲ (CoCo-Cola) ಮತ್ತು ಇತರ ಕ್ರೀಮ್ಗಳನ್ನು ಬಳಸಿಕೊಂಡು. ಕೊಕೊಕೋಲದಿಂದಲೂ ಸಲಾಡ್ ಮಾಡಬಹುದಾ ಎಂದು ಆಹಾರ ಪ್ರಿಯರು ಹಾಗೂ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: Viral Video: IND vs ENG ಪಂದ್ಯಕ್ಕೆ ಮಳೆಯಡ್ಡಿ, ಛತ್ರಿ, ಬಾಲ್ ಹಿಡಿದು ಕ್ರಿಕೆಟ್ ಆಡಿದ ಅಭಿಮಾನಿಗಳು
ಲಿಜ್ಜೀ ಒ’ಲಿಯರಿ ಎಂಬವರು ಟ್ವಿಟರ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ಇದು ಕೊಕೊಕೋಲ, ಕ್ರೀಮ್ ಚೀಸ್ ಅನ್ನು ಒಳಗೊಂಡ ಸಲಾಡ್ ವಿಷಯವಾಗಿತ್ತು. ಇದನ್ನು ನೋಡಿದ ನೆಟ್ಟಿಗರನ್ನು ಅಚ್ಚರಿಗೊಂಡಿದ್ದಾರೆ. ಈ ಖಾದ್ಯವನ್ನು ತಯಾರಿಸಲು ಕಿತ್ತಳೆ ಜೆಲ್ಲೋ, ಕೋಕಾ-ಕೋಲಾ, ಕ್ರೀಮ್ ಚೀಸ್ ಮತ್ತು ಬೀಜಗಳನ್ನು ಉಪಯೋಗಿಸಲಾಗಿದೆ. ಸಲಾಡ್ ಮಾಡಲು ಕೆನೆ ಚೀಸ್ ಮೇಲೆ ಜೆಲ್ಲೊವನ್ನು ಹಾಕಬೇಕು. ನಂತರ ಕೊಕೊಕೋಲಾವನ್ನು ಹಾಕಿ ಬೀಜಗಳನ್ನು ಹಾಕಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: Viral Video: ಕಟ್ಟಡ ಕಾರ್ಮಿಕನೊಂದಿಗೆ ಫೋಟೋ ತೆಗೆಸಿಕೊಳ್ಳಲು ಸಾಹಸದ ರೀತಿಯಲ್ಲಿ ಇಳಿದ ನಟ ವಿದ್ಯುತ್ ಜಮ್ವಾಲ್
ಸಲಾಡ್‌ಗಾಗಿ ಇಂತಹ ವಿಲಕ್ಷಣ ಪಾಕವಿಧಾನವನ್ನು ನೋಡಿ ನೆಟಿಜನ್‌ಗಳು ನಿಸ್ಸಂಶಯವಾಗಿ ಗಾಬರಿಗೊಂಡಿದ್ದಾರೆ. ಕೆಲವರಿಗೆ ಇದು ಕುತೂಹಲ ಕೆರಳಿಸಿದ್ದು, ಇನ್ನೂ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, ”ದಯವಿಟ್ಟು ಯಾರಾದರೂ ಇದನ್ನು ತಯಾರಿಸಿ ಮತ್ತು ಇಲ್ಲಿ ಪೋಸ್ಟ್ ಮಾಡಿ” ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ”ಆ ಸಾಲು ನನ್ನ ಹೃದಯದಲ್ಲಿ ಭಯಾನಕತೆಯನ್ನು ಹೊಡೆದಿದೆ” ಎಂದಿದ್ದಾರೆ.
ಇದನ್ನೂ ಓದಿ: Viral Video: ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಬೆಚ್ಚಿಬೀಳಿಸಿದ ಸುಂಟರಗಾಳಿಯಂತಹ ರಚನೆಯ ವಿಡಿಯೋ
Published On - 3:48 pm, Sat, 2 July 22