Viral Video: ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಬೆಚ್ಚಿಬೀಳಿಸಿದ ಸುಂಟರಗಾಳಿಯಂತಹ ರಚನೆಯ ವಿಡಿಯೋ
ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸುಂಟರಗಾಳಿಯಂತಹ ರಚನೆಯನ್ನು ಹೊಂದಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ದೃಶ್ಯಾವಳಿಯನ್ನು ನೀಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
ವೈರಲ್ ವಿಡಿಯೋ: ಹವಾಮಾನಗಳು ಬದಲಾಗುತ್ತಿರುವ ಈ ಜಗತ್ತಿನಲ್ಲಿ ವಿಚಿತ್ರ ಹವಾಮಾನಗಳ ವಿದ್ಯಮಾನನಗಳು ಸಾಮಾನ್ಯವಾಗಿವೆ. ಇಂಥ ವಿದ್ಯಮಾನಗಳು ಜನರನ್ನು ಭೀತಿಗೊಳಿಸುತ್ತದೆ. ಅದೇ ರೀತಿ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸುಂಟರಗಾಳಿ (Tornado)ಯಂತಹ ರಚನೆಯನ್ನು ಹೊಂದಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ದೃಶ್ಯಾವಳಿಯನ್ನು ನೀಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ವೈರಲ್ ವಿಡಿಯೋ(Viral Video)ದಲ್ಲಿ ಸುಂಟರಗಾಳಿಯಂತಹ ರಚನೆಯನ್ನು ನೋಡಬಹುದಾದರೂ, ಸ್ಪಷ್ಟವಾದ ಮೋಡಗಳ ಮೂಲಕ ಸೂರ್ಯನು ಹೊಳೆಯುತ್ತಿದ್ದಾನೆ.
winstonwildcat ಎಂದ ಟ್ವಿಟರ್ ಖಾತೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, “ಇಂದು ವಾಟ್ರಸ್/ಮ್ಯಾನಿಟೌ ಹತ್ತಿರ,” ಎಂದು ಶೀರ್ಷಿಕೆ ನೀಡಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಪಡೆದು 620.4k ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Viral Photo: 48 ವರ್ಷಗಳ ಹಿಂದಿನ ತನ್ನ ರೆಸ್ಯೂಮ್ ಶೇರ್ ಮಾಡಿಕೊಂಡ ಬಿಲ್ ಗೇಟ್ಸ್ ಏನು ಹೇಳಿದ್ರು ಗೊತ್ತಾ?
ವಿಡಿಯೋದಲ್ಲಿ ಕಾಣುವಂತೆ, ಸುಂಟರಗಾಳಿಯಂತಹ ರಚನೆಯನ್ನು ಹೊಂದಿರುವ ಮೋಡವನ್ನು ಕಾಣಬಹುದು. ಇದನ್ನು ನೋಡಿದ ಅಲ್ಲಿನ ಓರ್ವ ಮಹಿಳೆ, ”ಓ ದೇವರೇ ಅದು ಸುಂಟರಗಾಳಿ” ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ಕಡಲತೀರದಲ್ಲಿದ್ದ ಪ್ರವಾಸಿಗರು ಇದನ್ನು ಕುತೂಹಲದಿಂದ ನೋಡಿದ್ದು, ಶೀಘ್ರದಲ್ಲೇ ಭೀತಿಗೊಂಡು ಸುರಕ್ಷತೆಯಾಗಿ ಆ ಪ್ರದೇಶವನ್ನು ತೊರೆಯಲು ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: Viral Photo: 20 ರೂಪಾಯಿ ಚಹಾಕ್ಕೆ 70 ರೂಪಾಯಿ ಬಿಲ್ ನೋಡಿ ಪ್ರಯಾಣಿಕ ಶಾಕ್! ರೈಲಿನಲ್ಲಿ ಈ ವ್ಯವಸ್ಥೆ ಇದೆ ಗೊತ್ತಾ?
Near Watrous/Manitou today pic.twitter.com/599NLcn2ke
— Douglas Thomas (@winstonwildcat) June 29, 2022
ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರ ಪೈಕಿ ಕೆಲವರು ಪ್ರತಿಕ್ರಿಯಿಸಿದ್ದು, “OMG! ಮ್ಯಾನಿಟೌ ಬೀಚ್ ಪ್ರವಾಹದಂತಹ ಸಾಕಷ್ಟು ಹವಾಮಾನ ಸಮಸ್ಯೆಗಳನ್ನು ನಿಭಾಯಿಸಲಿಲ್ಲ ಮತ್ತು ಈಗ ಸುಂಟರಗಾಳಿ?!?” ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. “ಇದು ವಿಚಿತ್ರವಾಗಿ ಕಾಣುವ ಸುಂಟರಗಾಳಿ! ಅದರ ಪ್ರತಿಯೊಂದು ಫೋಟೋ ಅಥವಾ ವೀಡಿಯೋ ನಕಲಿಯಾಗಿ ಕಾಣುತ್ತದೆ ಮತ್ತು ಮೋಡಗಳು ಸಾಮಾನ್ಯ ದಿನದಂತೆ ಕಾಣುತ್ತವೆ” ಎಂದು ಮತ್ತೊಬ್ಬರು ಹೇಳಿದ್ದಾರೆ.
ಚೀನಾದ ಝೌಶಾನ್ ನಗರದ ಜನರು ನಿಗೂಢ ರಕ್ತ ಕೆಂಪು ಆಕಾಶವನ್ನು ಇತ್ತೀಚೆಗೆ ವೀಕ್ಷಿಸಿದ್ದರು ಮತ್ತು ಇದು ನಿವಾಸಿಗಳಲ್ಲಿ ಭೀತಿ ಹುಟ್ಟಿಸಿತ್ತು. ಬಂದರು ನಗರದ ಮೇಲೆ ದಟ್ಟವಾದ ಮಂಜಿನ ಪದರಗಳ ಜೊತೆಗೆ ಕಡುಗೆಂಪು ಬಣ್ಣದಲ್ಲಿ ಆಕಾಶವನ್ನು ಕ್ಯಾಮಾರ ಮೂಲಕ ಸೆರೆಹಿಡಿಯಲಾಗಿದ್ದು, ಇದರ ವಿಡಿಯೋ ವೈರಲ್ ಆಗಿತ್ತು. ಈ ವಿದ್ಯಮಾನದ ವೀಡಿಯೊಗಳು ಮತ್ತು ಫೋಟೋಗಳು ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಸಿನಾ ಮತ್ತು ವೈಬೊದಲ್ಲಿ 150 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿವೆ. ದೇಶದಲ್ಲಿ ಕೋವಿಡ್ -19 ಅನ್ನು ಚೀನಾ ಸರ್ಕಾರ ನಿರ್ವಹಿಸಿದ ಮೇಲೆ ಅನೇಕ ಬಳಕೆದಾರರು ಈ ವಿದ್ಯಮಾನವನ್ನು ಕೆಟ್ಟ ಶಕುನ ಎಂದು ಕರೆದಿದ್ದಾರೆ.
ಇದನ್ನೂ ಓದಿ: Viral Video: ಅಪಘಾತ ತಪ್ಪಿಸಲು ಮುಂದಾದರೂ ನಡೆಯಿತು ಭೀಕರ ಅಪಘಾತ! ವಿಡಿಯೋ ಇಲ್ಲಿದೆ ನೋಡಿ