Viral Photo: 20 ರೂಪಾಯಿ ಚಹಾಕ್ಕೆ 70 ರೂಪಾಯಿ ಬಿಲ್ ನೋಡಿ ಪ್ರಯಾಣಿಕ ಶಾಕ್! ರೈಲಿನಲ್ಲಿ ಈ ವ್ಯವಸ್ಥೆ ಇದೆ ಗೊತ್ತಾ?
ಒಂದು ಕಪ್ ಚಹಾಕ್ಕೆ 20 ರೂಪಾಯಿ, ಆದರೆ ಬಿಲ್ನಲ್ಲಿ 70 ರೂಪಾಯಿ ನೋಡಿ ಶಾಕ್ ಆದ ಪ್ರಯಾಣಿಕ. ರೈಲಿನಲ್ಲಿ ಹೆಚ್ಚುವರಿ ಹಣ ವಿಧಿಸುತ್ತಿರುವುದು ಏಕೆ? ಇಲ್ಲಿದೆ ಮಾಹಿತಿ.
ನವದೆಹಲಿ: ರೈಲ್ವೇ ಪ್ರಯಾಣ ಅತ್ಯಂತ ಕಡಿಮೆಯಲ್ಲಿ ಆಗುತ್ತದೆ. ಹಾಗೆಂದ ಮಾತ್ರಕ್ಕೆ ಆಹಾರದ ವಿಚಾರದಲ್ಲಿ ಮಾಡುವ ಸಣ್ಣ ತಪ್ಪು ದುಬಾರಿ ಹಣ ಕೊಟ್ಟು ತಿನ್ನುವ ಸ್ಥಿತಿ ಬರಬಹುದು. ಅದಕ್ಕೆ ನಿದರ್ಶನವೆಂಬಂತೆ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಒಂದು ಕಪ್ ಚಹಾಕ್ಕೆ 70 ರೂಪಾಯಿ ವಿಧಿಸಲಾಗಿದೆ. ಇದರ ಬಿಲ್ನ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಫೋಟೋ ವೈರಲ್ (Viral Photo) ಆಗುತ್ತಿದೆ. ಹಾಗಿದ್ದರೆ ಒಂದು ಕಪ್ ಚಹಾಕ್ಕೆ ಯಾಕಿಷ್ಟು ದೊಡ್ಡ ಮೊತ್ತ ಅಂತ ಅಂದುಕೊಂಡಿದ್ದರೆ ಈ ಸುದ್ದಿ ಓದಿ.
ಇದನ್ನೂ ಓದಿ: Viral Video: ಹುಲಿ ಮರಿಗಳಿಗೆ ಹಾಲು ಕುಡಿಸಿದ ಒರಾಂಗುಟಾನ್! ನೆಟ್ಟಿಗರ ಮನಸೂರೆಗೊಳಿಸುವ ವಿಡಿಯೋ ವೈರಲ್
ಜೂನ್ 28ರಂದು ದೆಹಲಿಯಿಂದ ಭೋಪಾಲ್‌ಗೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಾಯಾಣಿಕರೊಬ್ಬರು 1 ಕಪ್ ಚಹಾ ಆರ್ಡರ್ ಮಾಡಿದ್ದಾರೆ. ಕೊನೆಯಲ್ಲಿ ಬಿಲ್ ಪಡೆದಾಗ ಅದರಲ್ಲಿ 70 ರೂಪಾಯಿ ನೋಡಿ ಪ್ರಯಾಣಿಕ ಶಾಕ್ ಆಗಿದ್ದಾರೆ. ಇದಕ್ಕೆ ಕಾರಣ ಆ ವ್ಯಕ್ತಿ ಟಿಕೆಟ್ ಕಾಯ್ದಿರಿಸುವಾಗ ಯಾವುದೇ ಆಹಾರವನ್ನು ಮುಂಚಿತವಾಗಿ ಆರ್ಡರ್ ಮಾಡದಿರುವುದು. ಇದೇ ಕಾರಣಕ್ಕೆ 20 ರೂಪಾಯಿ ಚಹಾಕ್ಕೆ 50 ರೂಪಾಯಿ ಸೇವಾ ಶುಲ್ಕ ವಿಧಿಸಿ ಬಿಲ್ ನೀಡಲಾಗಿದೆ. ಅರೆ! ಇಂಥ ವ್ಯವಸ್ಥೆ ಇದೆಯಾ ಎಂದು ನೀವು ಪ್ರಶ್ನಿಸುತ್ತೀರಾ? ಮುಂದಕ್ಕೆ ಓದಿ.
20 रुपये की चाय पर 50 रुपये का टैक्स, सच मे देश का अर्थशास्त्र बदल गया, अभी तक तो इतिहास ही बदला था! pic.twitter.com/ZfPhxilurY
— Balgovind Verma (@balgovind7777) June 29, 2022
ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಅಡುಗೆ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳದ ಪ್ರಯಾಣಿಕರು ಮತ್ತು ಆನ್‌ಬೋರ್ಡ್‌ನಲ್ಲಿ ಊಟವನ್ನು ಖರೀದಿಸಲು ನಿರ್ಧರಿಸಿದರೆ ಪ್ರತಿ ಆಹಾರಕ್ಕೆ 50 ರೂಪಾಯಿ ಹೆಚ್ಚುವರಿ ಮೊತ್ತದ ಶುಲ್ಕವನ್ನು IRCTCಯ ಆನ್-ಬೋರ್ಡ್ ಮೇಲ್ವಿಚಾರಕರು ವಿಧಿಸುತ್ತಾರೆ ಎಂದು ಭಾರತೀಯ ರೈಲ್ವೇಯು 2018ರಲ್ಲಿ ಸುತ್ತೋಲೆಯೊಂದನ್ನು ಪ್ರಕಟಿಸಿತ್ತು.
ರೈಲ್ವೇ ಪ್ರಕಾರ, ಪ್ರಯಾಣಿಕರು ತಮ್ಮ ಎಕ್ಸ್‌ಪ್ರೆಸ್ ರೈಲಿಗೆ ಟಿಕೆಟ್ ಕಾಯ್ದಿರಿಸುವಾಗ ಯಾವುದೇ ಆಹಾರವನ್ನು ಮುಂಚಿತವಾಗಿ ಆರ್ಡರ್ ಮಾಡದಿದ್ದರೆ, ಸವಾರಿಯ ಸಮಯದಲ್ಲಿ ಏನನ್ನಾದರೂ ಆರ್ಡರ್ ಮಾಡುವಾಗ ಅವರು 50 ರೂಪಾಯಿ ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: Viral Video: ಹಡಗಿನಲ್ಲಿ ಭಾರಿ ಜಗಳ, ವಿಡಿಯೋ ವೈರಲ್! ಅಷ್ಟಕ್ಕೂ ಹಡಗಿನಲ್ಲಿ ಆಗಿದ್ದೇನು ಗೊತ್ತಾ?
Published On - 10:09 pm, Fri, 1 July 22