AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹಡಗಿನಲ್ಲಿ ಭಾರಿ ಜಗಳ, ವಿಡಿಯೋ ವೈರಲ್! ಅಷ್ಟಕ್ಕೂ ಹಡಗಿನಲ್ಲಿ ಆಗಿದ್ದೇನು ಗೊತ್ತಾ?

ನ್ಯೂಯಾರ್ಕ್‌ಗೆ ಹೋಗುವ ಕಾರ್ನಿವಲ್ ಕ್ರೂಸ್ ಹಡಗಿನ ಡ್ಯಾನ್ಸ್ ಫ್ಲೋರ್‌ನಲ್ಲಿ ಮೂವರ ವಿರುದ್ಧ ಭಾರಿ ಜಗಳ ನಡೆದ ಘಟನೆಯೊಂದು ನಡೆದಿದೆ. ಇದರ ವಿಡಿಯೋ ಇಲ್ಲಿದೆ ನೋಡಿ.

Viral Video: ಹಡಗಿನಲ್ಲಿ ಭಾರಿ ಜಗಳ, ವಿಡಿಯೋ ವೈರಲ್! ಅಷ್ಟಕ್ಕೂ ಹಡಗಿನಲ್ಲಿ ಆಗಿದ್ದೇನು ಗೊತ್ತಾ?
ಹಡಗಿನಲ್ಲಿ ಜಗಳ
TV9 Web
| Updated By: Rakesh Nayak Manchi|

Updated on:Jul 01, 2022 | 8:29 PM

Share

ವೈರಲ್ ವಿಡಿಯೋ: ನ್ಯೂಯಾರ್ಕ್‌ಗೆ ಹೋಗುವ ಕಾರ್ನಿವಲ್ ಕ್ರೂಸ್ ಹಡಗಿನ(Carnival cruise ship) ಡ್ಯಾನ್ಸ್ ಫ್ಲೋರ್‌ನಲ್ಲಿ ಮೂವರ ವಿರುದ್ಧ ಭಾರಿ ಜಗಳ(Fight) ನಡೆದ ಘಟನೆಯೊಂದು ನಡೆದಿದೆ. ಮಂಗಳವಾರ ವೆರ್ರಾಜಾನೊ ನ್ಯಾರೋಸ್ ಸೇತುವೆಯ ಬಳಿ ಸುಮಾರು 60 ಜನರು ಒಂದು ಗಂಟೆಗಳ ಕಾಲ ನಡೆದ ಜಗಳ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ. FOX News ಡಿಜಿಟಲ್ ಪ್ರಕಾರ, ಪ್ರಮುಖ ಇತರರು ತಮ್ಮ ಪಾಲುದಾರರನ್ನು ಮೋಸ ಮಾಡಿದ್ದಾರೆ ಎಂದು ಆರೋಪಿಸಿದಾಗ ಜಗಳ ಪ್ರಾರಂಭವಾಗಿದೆ ಎಂದು ಮಹಿಳಾ ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Viral Video: ತಾಯಿಯಂತೆ ಮೇಕಪ್ ಮಾಡಿ ಕೊನೆಗೆ ಬಾಲಕಿ ಮಾಡಿದ್ದೇನು? ವಿಡಿಯೋವನ್ನು ಕೊನೆತಕನ ನೋಡಿದರೆ ಖಂಡಿತ ನಗು ಬರುತ್ತೆ

ಕಾರ್ನಿವಲ್ ಮ್ಯಾಜಿಕ್ ಹಡಗಿನ ಐದನೇ ಮಹಡಿಯಲ್ಲಿರುವ ನೈಟ್‌ಕ್ಲಬ್‌ನಲ್ಲಿ ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಕಾದಾಟ ನಡೆದಿದೆ. ಡ್ಯಾನ್ಸ್ ಫ್ಲೋರ್‌ನ ಮಧ್ಯದಲ್ಲಿ ಪುರುಷರು, ಮಹಿಳೆಯರು ಸೇರಿದಂತೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸೆಕ್ಯುರಿಟಿ ಗಾರ್ಡ್​ಗಳು ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಇದರ ದೃಶ್ಯಾವಳಿಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. nyeem ಎಂಬವರು ಹಡಗಿನಲ್ಲಿ ನಡೆದ ಜಗಳದ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ಕಾರ್ನೀವಲ್ ಕ್ರೂಸ್‌ನಲ್ಲಿ ಕಳೆದ ರಾತ್ರಿಯ ಹಬ್ಬಗಳು” ಎಂದು ಶೀರ್ಷಿಕೆ ನೀಡಿದ್ದಾರೆ.

ಪ್ರಯಾಣಿಕರು ಪರಪಸ್ಪರ ಹೊಡೆದಾಡಿಕೊಂಡಿದ್ದಲ್ಲದೆ ಬಿಯರ್ ಬಾಟಲಿಗಳನ್ನು ಒಡೆದು ಹಾಕಿದ್ದಾರೆ. ಸೆಕ್ಯುರಿಟಿ ಗಾರ್ಡ್​ಗಳ ಕೈಯಲ್ಲಿ ಜಗಳ ನಿಲ್ಲಿಸಲು ಸಾಧ್ಯವಾಗದೆ ಯುಎಸ್ ಕೋಸ್ಟ್ ಗಾರ್ಡ್ ಅನ್ನು ಕರೆಯಲಾಯಿತು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. ”ಜಗಳ ಪ್ರಾರಂಭವಾದಾಗ ನಾನು ಬಾರ್​ನಲ್ಲಿ ನನ್ನ ಸ್ವಂತ ಸಂಗೀತವನ್ನು ಕೇಳುತ್ತಿದ್ದೆ. ಘಟನೆಯಲ್ಲಿ ಗಾಜಿನಿಂದ ಹಲ್ಲೆ ನಡೆಸಿದ ಪರಿಣಾಮ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಹೆಚ್ಚಿನ ಹಿಂಸಾಚಾರ ನಡೆಯದಂತೆ ತಡೆಯಲು ಭದ್ರತಾ ಸಿಬ್ಬಂದಿಗಳು ದಾವಿಸಿದರು ಎಂದು ಕ್ರೂಸ್‌ನಲ್ಲಿ ಪ್ರಯಾಣಿಕನಾಗಿದ್ದ ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. ಸದ್ಯ ಜಗಳದ ವಿಡಿಯೋ ವೈರಲ್ ಪಡೆದು 187k ವೀಕ್ಷಣೆಗಳು ಮತ್ತು 2k ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Viral Video: ಕೊಳದಲ್ಲಿ ಸರಳ ರೇಖೆ ಎಳೆದ ಬಾತುಕೋಳಿ, ನೆಟ್ಟಿಗರ ಮನಸ್ಸನ್ನು ಪ್ರಶಾಂತಗೊಳಿಸುವಂತಿದೆ ಈ ವಿಡಿಯೋ

Published On - 8:28 pm, Fri, 1 July 22