AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೊಳದಲ್ಲಿ ಸರಳ ರೇಖೆ ಎಳೆದ ಬಾತುಕೋಳಿ, ನೆಟ್ಟಿಗರ ಮನಸ್ಸನ್ನು ಪ್ರಶಾಂತಗೊಳಿಸುವಂತಿದೆ ಈ ವಿಡಿಯೋ

ಚೆರ್ರಿ ಹೂವುಗಳು ಹರಡಿಕೊಂಡಿರುವ ಕೊಳದಲ್ಲಿ ಸರಳ ರೇಖೆ ಎಳೆಯುತ್ತಾ ಹೋದ ಬಾತುಕೋಳಿಯ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಕೆಲಸದ ಒತ್ತಡದಲ್ಲಿರುವ ನೆಟ್ಟಿಗರ ಮನಸ್ಸನ್ನು ಪ್ರಶಾಂತಗೊಳಿಸುವಂತಿದೆ.

Viral Video: ಕೊಳದಲ್ಲಿ ಸರಳ ರೇಖೆ ಎಳೆದ ಬಾತುಕೋಳಿ, ನೆಟ್ಟಿಗರ ಮನಸ್ಸನ್ನು ಪ್ರಶಾಂತಗೊಳಿಸುವಂತಿದೆ ಈ ವಿಡಿಯೋ
ಕೊಳದಲ್ಲಿ ಈಜಾಡುತ್ತಿರುವ ಬಾತುಕೋಳಿ
TV9 Web
| Edited By: |

Updated on:Jul 01, 2022 | 6:37 PM

Share

ವೈರಲ್ ವೀಡಿಯೊ: ಬಾತುಕೋಳಿಗಳು ನೀರಿನಲ್ಲಿ ಈಜಾಡುವುದೇ ಚಂದ, ಅದಾಗ್ಯೂ ಆಕಾಶದಲ್ಲಿ ವಿಮಾನ ಅಥವಾ ರಾಕೇಟ್ ಹೋದಾಗ ಯಾವ ರೀತಿ ಗೆರೆಯೊಂದು ಕಾಣುತ್ತದೆಯೇ ಅದೇ ರೀತಿಯಲ್ಲಿ ಬಾತುಕೋಳಿ(Duck)ಯೊಂದು ಕೊಳದಲ್ಲಿ ಈಜಾಡಿಕೊಂಡು ಹೋಗಿದೆ. ನೋಡುವಾಗ ಬಾತುಕೋಳಿ ಕೊಳದಲ್ಲಿ ಸರಳ ರೇಖೆ ಎಳೆದಂತೆ ಕಾಣುತ್ತಿದೆ. ಪ್ರಾಣಿಗಳ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುವ ‘Yoda4ever’ ಟ್ವಿಟರ್ ಖಾತೆಯಲ್ಲಿ ಶಾಂತವಾಗಿ ಈಜಾಡುವ ಬಾತುಕೋಳಿಯ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (Viral Video) ಆಗುತ್ತಿದೆ. ಈ ವಿಡಿಯೋ ಕೆಲಸದ ಒತ್ತಡದಲ್ಲಿರುವ ನೆಟ್ಟಿಗರ ಮನಸ್ಸನ್ನು ಶಾಂತಗೊಳಿಸುವಂತಿದೆ.

ಇದನ್ನೂ ಓದಿ: Viral Video: ಅಯ್ಯೋ ಆನೆ ಮಾಡಿದ ಕೆಲಸ ಏನು ಗೊತ್ತಾ? ವಿಡಿಯೋ ನೋಡಿ ನೀವು ನಗುವುದು ಖಂಡಿತ

ಬಾತುಕೋಳಿಯ ವಿಡಿಯೋವನ್ನು Yoda4ever ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ನಂತರ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 47ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಕಾಣುವಂತೆ, ಜಪಾನೀಸ್ ಚೆರ್ರಿ ಅಥವಾ ಸಕುರಾ ಎಂದೂ ಕರೆಯಲ್ಪಡುವ ಚೆರ್ರಿ ಹೂವುಗಳ ಸುಂದರವಾದ ದಳಗಳಿಂದ ಆವೃತವಾಗಿರುವ ಕೊಳದಲ್ಲಿ ಬಾತುಕೋಳಿ ಶಾಂತವಾಗಿ ಈಜುತ್ತಿರುವುದನ್ನು ನೋಡಬಹುದು. ಬಾತುಕೋಳಿಯು ಈಜಾಡುತ್ತಾ ಹೋದಾಗ ಹಿಂಬದಿಯಲ್ಲಿ ಹೂವುಗಳೆಲ್ಲವೂ ಪಕ್ಕಕ್ಕೆ ಸರಿದು ದಾರಿ ಮಾಡಿದಂತೆ ಕಾಣುತ್ತಿದ್ದು, ಈ ನೋಟವು ನಿಜವಾಗಿಯೂ ರಮಣೀಯವಾಗಿದೆ.

ಈ ವೀಡಿಯೊವನ್ನು ವೀಕ್ಷಣೆ ಮಾಡಿದ ನೆಟ್ಟಿಗರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ತಾವು ಕೂಡ ಬಾತುಕೋಳಿಯಂತೆ ಆರಾಮವಾಗಿರಲು ಬಯಸುವುದಾಗಿ ಹೇಳಿಕೊಂಡಿದ್ದಾರೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರೊಬ್ಬರು, “ಅದು ತುಂಬಾ ಮುದ್ದಾಗಿದೆ ಮತ್ತು ಮ್ಯಾಜಿಕ್​ ಆಗಿ ಕಾಣುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ. “ಉಸಿರು” ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದು, ಮತ್ತೊಬ್ಬರು, “ಎಂಥ ಒಂದು ಸರಳ ರೇಖೆ !!” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Photo: ಮುಂಬದಿಯಲ್ಲೇ ಎರಡು ತಲೆಯುಳ್ಳ ಅಪರೂಪದ ಹಾವು ಪತ್ತೆ! ಇಲ್ಲಿದೆ ನೋಡಿ ಫೋಟೋಗಳು

Published On - 6:37 pm, Fri, 1 July 22

Follow Us
Web contact
Web contact

TV9 Kannada

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ