Viral Video: ಅಯ್ಯೋ ಆನೆ ಮಾಡಿದ ಕೆಲಸ ಏನು ಗೊತ್ತಾ? ವಿಡಿಯೋ ನೋಡಿ ನೀವು ನಗುವುದು ಖಂಡಿತ

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ  ಪಾಡಿಗೆ ನಿಂತಿರುವುದನ್ನು ಕಾಣಬಹುದು, ಹಿಂದೆಯಿಂದ ಆನೆ ಬಂದದ್ದು ಆತನಿಗೆ ಗೊತ್ತೇ ಆಗುವುದಿಲ್ಲ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ.

Viral Video: ಅಯ್ಯೋ ಆನೆ ಮಾಡಿದ ಕೆಲಸ ಏನು ಗೊತ್ತಾ? ವಿಡಿಯೋ ನೋಡಿ ನೀವು  ನಗುವುದು ಖಂಡಿತ
elephant Viral video
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 01, 2022 | 5:30 PM

ಆನೆಗಳ ಮಾಡುವ ತಮಾಷೆಯ ಮತ್ತು ಅವಂತಾರದ ವಿಡಿಯೋವನ್ನು ನೀವು ಅನೇಕ ಬಾರಿ ನೋಡಿರಬಹುದು. ಅವುಗಳು ಜನರ ಮೇಲೆ ದಾಳಿ ಮಾಡುವುದನ್ನು ಮತ್ತು ತಮಾಷೆಯಾಗಿ ಆಟವಾಡುವುದನ್ನು ನೀವು ನೋಡಿರಬಹುದು. ಇದರ ಜೊತೆಗೆ ಆನೆಗಳು ಮತ್ತು ಅವುಗಳ ಮರಿಯು ಸಂಕಷ್ಟದಲ್ಲಿ ಸಿಲುಕಿರುವುದನ್ನು ನೀವು ನೋಡಿದ್ದೀರಾ. ಆದರೆ ಇಲ್ಲೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೀವು ನೋಡ್ರಿ ನಗುವುದು ಖಂಡಿತ ಏಕೆಂದರೆ ಆನೆ ಮಾಡಿದ ಕೆಲಸ ಏನು ಗೊತ್ತಾ ಇಲ್ಲಿದೆ ನೋಡಿ.

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ  ಪಾಡಿಗೆ ನಿಂತಿರುವುದನ್ನು ಕಾಣಬಹುದು, ಹಿಂದೆಯಿಂದ ಆನೆ ಬಂದದ್ದು ಆತನಿಗೆ ಗೊತ್ತೇ ಆಗುವುದಿಲ್ಲ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ. ಆ ವ್ಯಕ್ತಿಯ ಹಿಂಭಾಗದಿಂದ ಬಂದು ತನ್ನ ಮುಂಭಾಗದ ಪಾದಗಳಿಂದ ಸ್ವಲ್ಪ ಮಣ್ಣನ್ನು ಆತನ ಕಡೆಗೆ ಎಸೆಯುತ್ತದೆ ಮತ್ತು ದಾರಿ ಬೀಡುವಂತೆ ಸೂಚನೆಯನ್ನು ನೀಡುತ್ತದೆ. ಆ ವ್ಯಕ್ತಿ  ಪ್ರಾಣ ಹೋಗಿ ಬಂದಂತೆ ಆಗಿರುಬಹುದು. ಏಕೆಂದರೆ ಆ ಕಾಡು ಆನೆ ಎಲ್ಲಿಂದ ಪ್ರತ್ಯಕ್ಷವಾಯಿತು ಎಂಬ ಯೋಚನೆ ಒಂದು ಬಾರಿ ಅವನಿಗೆ ಬಂದಿದೆ. ಆ ವ್ಯಕ್ತಿ ಅಲ್ಲಿಂದ ತಕ್ಷಣ ಓಡಿ ಹೋಗುತ್ತಾನೆ.

ಇದನ್ನು ಓದಿ; ಈ ಹುಡುಗನ ಮ್ಯಾಜಿಕ್ ನೋಡಿ, ನಿಮಗೂ ನಿಮ್ಮ ಬಾಲ್ಯ ನೆನಪಾಗಬಹುದು

ಈ ವಿಡಿಯೋ  261k ವೀಕ್ಷಣೆಗಳನ್ನು ಮತ್ತು ಸಾವಿರದಷ್ಟು ಕಮೆಂಟ್ ನ್ನು ಪಡೆದಿದೆ.  ವಿಡಿಯೋ ನೋಡಿ ಅನೇಕ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಒಂದು ಬಾರಿ ಆತನ ಜೀವ ಬಾಯಿಗೆ ಬಂದಿರಬಹುದು ಎಮದು ಕಮೆಂಟ್ ಮಾಡಿದ್ದಾರೆ. ಆನೆಯ ಈ  ಸೌಮ್ಯ ನಡವಳಿಕೆಯಿಂದ ಕೆಲವರು ಆಶ್ಚರ್ಯಚಕಿತರಾಗಿದ್ದರೆ.

Published On - 5:30 pm, Fri, 1 July 22