AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹುಡುಗನ ಮ್ಯಾಜಿಕ್ ನೋಡಿ, ನಿಮಗೂ ನಿಮ್ಮ ಬಾಲ್ಯ ನೆನಪಾಗಬಹುದು

ಒಬ್ಬ ಹುಡುಗ ತನ್ನ ಸ್ನೇಹಿತರ ನಡುವೆ ನಿಂತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.  ಹುಡುಗ ತನ್ನ ಕೈಯಲ್ಲಿ ಸಣ್ಣ ಚೆಂಡುಗಳಂತೆ ಕಾಣುವ ಎರಡು ಸಣ್ಣ ವಸ್ತುಗಳನ್ನು ಹಿಡಿದಿರುವುದು ನೀವು ಇಲ್ಲಿ ನೋಡಬಹುದು.

ಈ ಹುಡುಗನ ಮ್ಯಾಜಿಕ್ ನೋಡಿ, ನಿಮಗೂ ನಿಮ್ಮ ಬಾಲ್ಯ ನೆನಪಾಗಬಹುದು
boy's magic
ಅಕ್ಷಯ್​ ಪಲ್ಲಮಜಲು​​
|

Updated on: Jul 01, 2022 | 4:22 PM

Share

ಬಾಲ್ಯದ ನೆನಪುಗಳನ್ನು ಮರೆಯಲು ಸಾಧ್ಯವಿಲ್ಲ ಏಕೆಂದರೆ ಅದು ಕೇವಲ ನೆನಪಲ್ಲ ಅದು ಜೀವನದ ಪ್ರಥಮ ಹೆಜ್ಜೆ. ಚಿಕ್ಕ ವಯಸ್ಸಿನಲ್ಲಿ ಬೇರೆ ಬೇರೆ  ಆಟ, ಜಾದುಗಳನ್ನು ಮಾಡಿರುವುದನ್ನು ಮರೆಯಲು ಸಾಧ್ಯವಿಲ್ಲ. ನಿಮ್ಮ ಜೀವನದಲ್ಲೂ ಕೆಲವೊಂದು ಇಂತಹ ನೆನಪುಗಳು ನಿಮ್ಮನ್ನು ಕಾಡುವುದು ಸಹಜ. ಇದೀಗ ಇಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಜಾದೂ ಮಾಡುವುದು ಒಂದು ರೀತಿಯಲ್ಲಿ ಮನಸ್ಸು ಆನಂದ ನೀಡುತ್ತದೆ. ಇಂದಿಗೂ ನಿಮಗೆ ಎಷ್ಟೇ ವಯಸ್ಸಾಗಿದರು ಇದರ ಬಗ್ಗೆ ಆಸಕ್ತಿ ಇರುತ್ತದೆ.  ಮ್ಯಾಜಿಕ್ ತಂತ್ರಗಳು ಸಾಮಾನ್ಯವಾಗಿ ಹೆಚ್ಚಿನ ಜನರನ್ನು ಆಕರ್ಷಿಸುತ್ತವೆ. ಈ ಮ್ಯಾಜಿಕ್ ಎನ್ನುವುದನ್ನು ಮಕ್ಕಳ ಮಾಡಿದ್ದರೆ ಇನ್ನೂ ತಮಾಷೆಯಾಗಿರುತ್ತದೆ.  ಇದೀಗ ಇಂತಹ ಒಂದು ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಇದನ್ನು  ಕ್ರಿಕೆಟಿಗ ಶಿಖರ್ ಧವನ್ ಸೇರಿದಂತೆ ಅನೇಕರು ಈ ವಿಡಿಯೋ ಹಂಚಿಕೊಂಡಿದ್ದಾರೆ.  ಒಬ್ಬ ಶಾಲಾ ಹುಡುಗ ಈ ಮ್ಯಾಜಿಕ್ ನ್ನು ಮಾಡುವುದನ್ನು ನೀವು ಇಲ್ಲಿ ಕಾಣಬಹುದು.

ಒಬ್ಬ ಹುಡುಗ ತನ್ನ ಸ್ನೇಹಿತರ ನಡುವೆ ನಿಂತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.  ಹುಡುಗ ತನ್ನ ಕೈಯಲ್ಲಿ ಸಣ್ಣ ಚೆಂಡುಗಳಂತೆ ಕಾಣುವ ಎರಡು ಸಣ್ಣ ವಸ್ತುಗಳನ್ನು ಹಿಡಿದಿರುವುದು ನೀವು ಇಲ್ಲಿ ನೋಡಬಹುದು. ಆಮೇಲೆ ಒಂದಲ್ಲ ಎರಡೆರಡು ಬಾರಿ ತನ್ನ ಮ್ಯಾಜಿಕ್ ಟ್ರಿಕ್ ತೋರಿಸುತ್ತಾನೆ. ಈ ವಿಡಿಯೋವನ್ನು ಒಂದು ಬಾರಿ ನೀವು ನೋಡಿದರೆ ಖಂಡಿತ ನೀವು   ಆಶ್ಚರ್ಯ ಪಡುವುದು ಖಂಡಿತ, ಇದನ್ನು ನೀವೇ ಒಂದು ಬಾರಿ ನೋಡಿ.

ಇದನ್ನೂ ಓದಿ
Image
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ
Image
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು
View this post on Instagram

A post shared by Sahil Saifi (@sahil.aazam)

ಇದನ್ನು ಓದಿ: ಮುಂಬದಿಯಲ್ಲೇ ಎರಡು ತಲೆಯುಳ್ಳ ಅಪರೂಪದ ಹಾವು ಪತ್ತೆ! ಇಲ್ಲಿದೆ ನೋಡಿ ಫೋಟೋಗಳು

ವೀಡಿಯೊವನ್ನು ಜೂನ್ 9 ರಂದು ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ, ಕ್ಲಿಪ್ 125 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಸಂಖ್ಯೆಗಳು ಹೆಚ್ಚುತ್ತಿವೆ. ಕ್ರಿಕೆಟಿಗ ಶಿಖರ್ ಧವನ್ ಸೇರಿದಂತೆ ಐದು ಮಿಲಿಯನ್‌ಗೂ ಹೆಚ್ಚು ಲೈಕ್‌ಗಳನ್ನು ಶೇರ್ ಸಂಗ್ರಹಿಸಿದೆ. ವಿವಿಧ ಕಾಮೆಂಟ್‌ಗಳನ್ನು ಹಂಚಿಕೊಳ್ಳಲು ವೀಡಿಯೊ ಜನರನ್ನು ಪ್ರೇರೇಪಿಸಿದೆ.

ಈ ಬಗ್ಗೆ Instagram ನಲ್ಲಿ ಅನೇಕರು ಈ ಬಗ್ಗೆ ಹಂಚಿಕೊಂಡಿದ್ದು, ಕಮೆಂಟ್  ಕೂಡ ಮಾಡಿದ್ದಾರೆ.  ಆ ಹುಡುಗನಿಗೆ ಒಳ್ಳೆಯ ಭವಿಷ್ಯ ಇದೆ. ತನ್ನ  18 ವರ್ಷ ತುಂಬಿದಾಗ ಅವನ ಸಾಮರ್ಥ್ಯ ಏನೆಂದು ತಿಳಿಯುತ್ತದೆ. ಒಳ್ಳೆಯ ಜೀವನ ಈ ಹುಡುಗನಿಗೆ ಇದೆ ಎಂದು ಹೇಳಿದ್ದಾರೆ.