Viral Video: ಮಂಗವನ್ನು ಬೇಟೆಯಾಡುವ ಚಿರತೆಯ ರೋಮಾಂಚನಕಾರಿ ವಿಡಿಯೋ ವೈರಲ್
ಚಿರತೆಯೊಂದು ಮಂಗವನ್ನು ಬೇಟೆಯಾಡುವ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಬೆರಗಾಗಿಸಿದ್ದು, ವಿಡಿಯೋ ವೈರಲ್ ಆಗುತ್ತಿದೆ.
ಅತ್ಯಂತ ವೇಗವಾಗಿ ಓಡುವ ಚಿರತೆ (leopard)ಗಳು ಕಾಡು ಪ್ರಾಣಿಗಳನ್ನು ಬೇಟೆಯಾಡುವುದು (hunting) ರೋಮಾಂಚನಕಾರಿಯಾಗಿರುತ್ತದೆ. ಇದೀಗ ಚಿರತೆಯೊಂದು ಮಂಗ(Monkey)ನ ಮರಿಯನ್ನು ಬೇಟೆಯಾಡುವ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಬೆರಗಾಗಿಸಿದ್ದು, ವಿಡಿಯೋ ವೈರಲ್ (Video Viral) ಆಗುತ್ತಿದೆ. ಅಷ್ಟಕ್ಕೂ ಈ ಘಟನೆಯ ದೃಶ್ಯಾವಳಿಯನ್ನು ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ. ಭಾರತೀಯ ರಣಹದ್ದು, ಕೆಂಪು ತಲೆಯ ರಣಹದ್ದು, ಹೂವು-ತಲೆಯ ಗಿಳಿ, ಕ್ರೆಸ್ಟೆಡ್ ಜೇನು ಬಜಾರ್ಡ್ ಮತ್ತು ಬಾರ್-ಹೆಡೆಡ್ ಹೆಬ್ಬಾತುಗಳಂತಹ ಸುಮಾರು 200 ವಿವಿಧ ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿರುವ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ, ಹುಲಿಗಳು, ಕರಡಿಗಳು, ಭಾರತೀಯ ತೋಳಗಳು, ಪ್ಯಾಂಗೊಲಿನ್‌ಗಳು, ಚಿರತೆಗಳು, ಘಾರಿಯಲ್‌ಗಳು ಮತ್ತು ಭಾರತೀಯ ನರಿಗಳು ಸೇರಿದಂತೆ ಹಲವಾರು ಪ್ರಾಣಿಗಳು ಕಂಡುಬರುತ್ತವೆ.
ಇದನ್ನೂ ಓದಿ: Viral Video: ಈ ಶ್ವಾನಕ್ಕೆ ಮನೆಯಲ್ಲಿ ಸ್ನಾನ ಮಾಡುವುದೆಂದರೆ ಬಹಳ ದುಃಖ, ಆದರೆ…
pannatigerreserve ಎಂಬ ಟ್ವಿಟರ್ ಖಾತೆಯಲ್ಲಿ ಚಿರತೆ ಬೇಟೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ”ಅಪರೂಪದ ದೃಶ್ಯ, ಚಿರತೆಯೊಂದು ಮರಕ್ಕೆ ಹಾರಿ ಕೋತಿಯನ್ನು ಬೇಟೆಯಾಡುತ್ತಿರುವುದನ್ನು ಕಾಣಬಹುದು” ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋವನ್ನು ಜೂನ್ 28ರಂದು ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್ ಪಡೆದು 5ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ವಿಡಿಯೋದಲ್ಲಿ ಕಾಣುವಂತೆ, ಮಂಗವೊಂದು ಮರವೇರಿ ಕುಳಿತುಕೊಂಡಿತ್ತು, ಇದರ ಪಕ್ಕದ ಮರಕ್ಕೆ ಹತ್ತಿದ ಚಿರತೆ ತನ್ನ ಬೇಟೆಯ ಗುರಿ ಸ್ವಲ್ಪವೂ ತಪ್ಪದಂತೆ ಎಚ್ಚರಿಕೆವಹಿಸಿ ನೇರವಾಗಿ ಮಂಗವನ್ನು ಬಾಯಲ್ಲಿ ಕಚ್ಚಿಕೊಂಡು ಬಹಳ ಎತ್ತರದಿಂದ ಕೆಳಗೆ ಬಿದ್ದಿದೆ. ನಂತರ ತನ್ನ ಬೇಟೆಯನ್ನು ಬಾಯಲ್ಲಿಯೇ ಇಟ್ಟುಕೊಂಡು ಅರಾಮವಾಗಿ ಕುಳಿತುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
1/nA rare sight @pannatigerreserve. A leopard can be seen hunting a baby monkey by jumping on the tree. pic.twitter.com/utT4h58uuF
— Panna Tiger Reserve (@PannaTigerResrv) June 28, 2022
ವಿಡಿಯೋ ವೀಕ್ಷಣೆ ಮಾಡಿದ ಒಂದಷ್ಟು ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಒಬ್ಬರು, “ಪ್ರಕೃತಿಯ ವಿವೇಚನಾರಹಿತ ಶಕ್ತಿ” ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, “ಅಪರೂಪದ ದೃಶ್ಯ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಕ್ಯಾಮಾರಾ ಕಣ್ಣಿಗೆ ಬಿದ್ದ ‘ಚಿನ್ನದ ಸರ ಸಾಗಾಣಿಕದಾರರು’: ಇರುವೆಗಳ ಸಾಹಸದ ವಿಡಿಯೋ ವೈರಲ್
Published On - 2:58 pm, Fri, 1 July 22