Viral Video: ತಾಯಿಯಂತೆ ಮೇಕಪ್ ಮಾಡಿ ಕೊನೆಗೆ ಬಾಲಕಿ ಮಾಡಿದ್ದೇನು? ವಿಡಿಯೋವನ್ನು ಕೊನೆತಕನ ನೋಡಿದರೆ ಖಂಡಿತ ನಗು ಬರುತ್ತೆ

ತನ್ನ ತಾಯಿಯ ಸೌಂದರ್ಯವರ್ಧಕಗಳನ್ನು ಬಳಸಿಕೊಂಡು ಬಾಲಕಿಯೊಬ್ಬಳು ಮೇಕಪ್ ಮಾಡಿ ಕೊನೆಯಲ್ಲಿ ನೀವು ಅಯ್ಯೋ ಛೀ... ಎಂದು ಹೇಳಿಸಿ ನಗುವಂತೆ ಮಾಡಿದ್ದಾಳೆ. ಈ ವಿಡಿಯೋವನ್ನು ಕೊನೆತನಕ ನೋಡಿ.

Viral Video: ತಾಯಿಯಂತೆ ಮೇಕಪ್ ಮಾಡಿ ಕೊನೆಗೆ ಬಾಲಕಿ ಮಾಡಿದ್ದೇನು? ವಿಡಿಯೋವನ್ನು ಕೊನೆತಕನ ನೋಡಿದರೆ ಖಂಡಿತ ನಗು ಬರುತ್ತೆ
ಎಲ್ಲಾಬೆಲ್ಲ ಸೊಲೈಲ್
Follow us
TV9 Web
| Updated By: Rakesh Nayak Manchi

Updated on:Jul 01, 2022 | 7:24 PM

ವೈರಲ್ ವೀಡಿಯೊ: ತನ್ನ ತಾಯಿಯ ಸೌಂದರ್ಯವರ್ಧಕಗಳನ್ನು ಬಳಸಿಕೊಂಡು ಬಾಲಕಿಯೊಬ್ಬಳು ಮೇಕಪ್(Makeup) ಮಾಡಿ ಕೊನೆಯಲ್ಲಿ ನೀವು ಅಯ್ಯೋ ಛೀ… ಎನ್ನುವಂತೆ ಹೇಳಿಸಿ ನಗುವಂತೆ ಮಾಡಿದ್ದಾಳೆ. ಈಕೆ ಬೇರೆಯಾರೂ ಅಲ್ಲ, ಚೈಲ್ಡ್ ಮಾಡೆಲ್ ಎಲ್ಲಾಬೆಲ್ಲಾ ಸೊಲೈಲ್. ಈಕೆಯ ತಾಯಿ ನಿರ್ವಹಿಸುತ್ತಿರುವ ellabella_soleil ಎಂಬ ಇನ್ಸ್ಟಾಗ್ರಾಮ್​ ಪುಟದಿಂದ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್​ನ ರೀಲ್‌ಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅಷ್ಟಕ್ಕೂ ಆ ಬಾಲಕಿ ಹೇಗೆ ಮೇಕಪ್ ಮಾಡಿದ್ದಾಳೆ ಮತ್ತು ಕೊನೆಯಲ್ಲಿ ಏನು ಮಾಡಿದ್ದಾಳೆ ಎಂದು ನೀವೇ ನೋಡಿ.

ಇದನ್ನೂ ಓದಿ: Viral Video: ಕೊಳದಲ್ಲಿ ಸರಳ ರೇಖೆ ಎಳೆದ ಬಾತುಕೋಳಿ, ನೆಟ್ಟಿಗರ ಮನಸ್ಸನ್ನು ಪ್ರಶಾಂತಗೊಳಿಸುವಂತಿದೆ ಈ ವಿಡಿಯೋ

ಎಲ್ಲಾಬೆಲ್ಲಾ ಸೊಲೈಲ್ ಚೈಲ್ಡ್ ಮಾಡೆಲ್ ಆಗಿದ್ದು, ಈಕೆಯ ಇನ್ಸ್ಟಾಗ್ರಾಮ್ ಖಾತೆ  ellabella_soleilಯಲ್ಲಿ 317k ಗಿಂತ ಹೆಚ್ಚಿನ ಫಾಲೋವರ್ಸ್​​ಗಳನ್ನು ಹೊಂದಿದ್ದಾಳೆ. ಈ ಖಾತೆಯಲ್ಲಿ ಆಕೆಯ ಮುದ್ದಾದ ವಿಡಿಯೋಗಳು, ಫೋಟೋಗಳನ್ನು ಹಂಚಿಕೊಳ್ಳಲಾಗುತ್ತದೆ. ಅದರಂತೆ ಆಕೆ ಮೇಕಪ್ ಮಾಡುತ್ತಿರುವ ವಿಡಿಯೋವನ್ನೂ ತಾಯಿ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (Video Viral) ಆಗುತ್ತಿದೆ.

ಇದನ್ನೂ ಓದಿ: Viral Video: ಅಯ್ಯೋ ಆನೆ ಮಾಡಿದ ಕೆಲಸ ಏನು ಗೊತ್ತಾ? ವಿಡಿಯೋ ನೋಡಿ ನೀವು ನಗುವುದು ಖಂಡಿತ

ವೀಡಿಯೊದಲ್ಲಿ ಇರುವಂತೆ, ಪುಟ್ಟ ಹುಡುಗಿ ತನ್ನ ತಾಯಿಯ ಸೌಂದರ್ಯ ಉತ್ಪನ್ನಗಳೊಂದಿಗೆ ತನ್ನ ಮುಖವನ್ನು ಮೇಕಪ್ ಮಾಡುವುದನ್ನು ಕಾಣಬಹುದು. ಕಣ್ಣಿಗೆ ಕಾಡಿಗೆ ಹಾಕಿಕೊಳ್ಳಲು ಹೆಣಗಾಡುವ ಮೂಲಕ ಅವಳು ತನ್ನ ಮೇಕಪ್ ಅನ್ನು ಪ್ರಾರಂಭಿಸುತ್ತಾಳೆ. ನಂತರ ಅವಳು ಕೆನ್ನೆಗಳ ಮೇಲೆ ಕ್ರೀಮ್ ಹಚ್ಚುತ್ತಾಳೆ ಮತ್ತು ಬ್ಲಶ್ ಬ್ರಷ್‌ನಿಂದ ಅದನ್ನು ಸ್ವಲ್ಪ ಸರಿಪಡಿಸುತ್ತಾಳೆ. ಈ ನಡುವೆ ಆಕೆ ಮುದ್ದಾಗಿ ಸೀನುತ್ತಾಳೆ ಮತ್ತು ನಂತರ ಅವಳ ರೆಪ್ಪೆಗೂದಲುಗಳನ್ನು ಮಸ್ಕರಾವನ್ನು ಹಾಕುತ್ತಾಳೆ.

ಅಷ್ಟಕ್ಕೂ ನಿಲ್ಲದ ಬಾಲೆ, ತನ್ನ ಮೂಗಿನಲ್ಲಿ ಬೆರಳನ್ನು ಇರಿಸಿ ನಂತರ ಅದನ್ನು ನೆಕ್ಕುತ್ತಾಳೆ. ಆ ಮೂಲಕ ವಿಡಿಯೋ ಅಂತ್ಯಗೊಳ್ಳುತ್ತದೆ. ಸಂಪೂರ್ಣ ವಿಡಿಯೋ ವೀಕ್ಷಣೆ ಮಾಡಿದ ನೆಟಿಜನ್‌ಗಳು ಅಚ್ಚರಿಗೊಂಡಿದ್ದು, ಅದನ್ನು ನಾವು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಪಡೆದು 3.8 ಮಿಲಿಯನ್ ವೀಕ್ಷಣೆಗಳು ಮತ್ತು 266k ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Viral Photo: ಮುಂಬದಿಯಲ್ಲೇ ಎರಡು ತಲೆಯುಳ್ಳ ಅಪರೂಪದ ಹಾವು ಪತ್ತೆ! ಇಲ್ಲಿದೆ ನೋಡಿ ಫೋಟೋಗಳು

Published On - 7:18 pm, Fri, 1 July 22