Viral Video: ಹುಲಿ ಮರಿಗಳಿಗೆ ಹಾಲು ಕುಡಿಸಿದ ಒರಾಂಗುಟಾನ್! ನೆಟ್ಟಿಗರ ಮನಸೂರೆಗೊಳಿಸುವ ವಿಡಿಯೋ ವೈರಲ್

ಗಂಡು ಒರಾಂಗುಟಾನ್ 3 ಮರಿ ಹುಲಿ ಮರಿಗಳಿಗೆ ಪ್ರೀತಿಯಿಂದ ಹಾಲು ನೀಡಿ ಆಟವಾಡುತ್ತಿರುವ ಸುಂದರ ವೀಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ.

Viral Video: ಹುಲಿ ಮರಿಗಳಿಗೆ ಹಾಲು ಕುಡಿಸಿದ ಒರಾಂಗುಟಾನ್! ನೆಟ್ಟಿಗರ ಮನಸೂರೆಗೊಳಿಸುವ ವಿಡಿಯೋ ವೈರಲ್
ಹುಲಿ ಮರಿಗಳ ಜೊತೆ ಒರಾಂಗುಟಾನ್
Follow us
TV9 Web
| Updated By: Rakesh Nayak Manchi

Updated on:Jul 01, 2022 | 9:16 PM

Viral Video: ಮೌಖಿಕ ಸಂವಹನದ ಕೊರತೆಯ ಹೊರತಾಗಿಯೂ ಪ್ರಾಣಿಗಳು ಸಹಾನುಭೂತಿಯ ಜೀವಿಗಳು, ಪರಸ್ಪರ ದಯೆ ಮತ್ತು ಔದಾರ್ಯವನ್ನು ತೋರಿಸುವ ನಿದರ್ಶನಗಳನ್ನು ನೀವೆಲ್ಲರೂ ಕಂಡಿದ್ದೀರಿ. ಇದೀಗ ಗಂಡು ಒರಾಂಗುಟಾನ್ 3 ಮರಿ ಹುಲಿ ಮರಿಗಳಿಗೆ ಪ್ರೀತಿಯಿಂದ ಹಾಲು ನೀಡಿ ಆಟವಾಡುತ್ತಿರುವ ಸುಂದರ ವೀಡಿಯೋವೊಂದು ಮತ್ತೆ ಇಂಟರ್ನೆಟ್​ನಲ್ಲಿ ಮುನ್ನಲೆಗೆ ಬಂದಿದೆ. ಈ ವಿಡಿಯೋ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.

ಇದನ್ನೂ ಓದಿ: Viral Video: ಹಡಗಿನಲ್ಲಿ ಭಾರಿ ಜಗಳ, ವಿಡಿಯೋ ವೈರಲ್! ಅಷ್ಟಕ್ಕೂ ಹಡಗಿನಲ್ಲಿ ಆಗಿದ್ದೇನು ಗೊತ್ತಾ?

ವೈರಲ್ ವಿಡಿಯೋದಲ್ಲಿ ನೋಡುವಂತೆ, ಹರ್ಷಚಿತ್ತದಿಂದ ಬಾಟಲ್​ನಲ್ಲಿ ಹುಲಿಮರಿಗೆ ಒರಾಂಗುಟನ್ ಹಾಲನ್ನು ನೀಡುವುದು, ಮುದ್ದಾದ ಹುಲಿ ಮರಿಗಳೊಂದಿಗೆ ಆಟವಾಡುವುದು ಮತ್ತು ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದನ್ನು ಕಾಣಬಹುದು. ಈ ವಿಡಿಯೋ ಖಂಡಿತವಾಗಿಯೂ ನಿಮ್ಮನ್ನು ಭಾವುಕರನ್ನಾಗಿಸುತ್ತದೆ ಮತ್ತು ಅಂತಹ ಸುಂದರವಾದ ದೃಶ್ಯವನ್ನು ವೀಕ್ಷಿಸಲು ನಿಮ್ಮನ್ನು ಭಾವುಕರನ್ನಾಗಿಸುವುದರಲ್ಲಿ ಸಂಶಯವೇ ಇಲ್ಲ.

ಇದನ್ನೂ ಓದಿ: Viral Video: ಕೊಳದಲ್ಲಿ ಸರಳ ರೇಖೆ ಎಳೆದ ಬಾತುಕೋಳಿ, ನೆಟ್ಟಿಗರ ಮನಸ್ಸನ್ನು ಪ್ರಶಾಂತಗೊಳಿಸುವಂತಿದೆ ಈ ವಿಡಿಯೋ

ದಯೆ ಮತ್ತು ಸಹಾನುಭೂತಿಯ ವಿಡಿಯೋ ಜನರ ಹೃದಯಗಳನ್ನು ಗೆದ್ದಿದ್ದು, ಮನುಷ್ಯರಿಗಿಂತ ಪ್ರಾಣಿಗಳು ಉತ್ತಮವಾಗಿವೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು, “ಪ್ರೀತಿಯು ಜೀವನದ ಪ್ರತಿಯೊಂದು ರೂಪವನ್ನು ಬಂಧಿಸುವ ಮತ್ತು ರಕ್ಷಿಸುವ ಶಕ್ತಿಯಾಗಿದೆ” ಎಂದಿದ್ದಾರೆ.

ಇನ್ನೊಬ್ಬರು, “ಅಮ್ಮನ ಪ್ರೀತಿಯ ಬೇಷರತ್ತಾದ ಮತ್ತು ಶುದ್ಧ ರೂಪ !!” ಮತ್ತೋರ್ವ ಬಳಕೆದಾರರು, ”ಅದು ಮರಿಯೊಂದಿಗೆ ಹೇಗೆ ಆಟವಾಡುತ್ತಿದೆ ಮತ್ತು ಅದು ತನ್ನ ಸ್ವಂತ ಶಿಶುಗಳಂತೆ ಪ್ರೀತಿ ಮತ್ತು ವಾತ್ಸಲ್ಯವನ್ನು ಹೇಗೆ ತೋರಿಸುತ್ತಿದೆ, ಇದು ಅದ್ಭುತವಾಗಿದೆ” ಎಂದಿದ್ದಾರೆ.

ಇದನ್ನೂ ಓದಿ: Viral Video: ತಾಯಿಯಂತೆ ಮೇಕಪ್ ಮಾಡಿ ಕೊನೆಗೆ ಬಾಲಕಿ ಮಾಡಿದ್ದೇನು? ವಿಡಿಯೋವನ್ನು ಕೊನೆತಕನ ನೋಡಿದರೆ ಖಂಡಿತ ನಗು ಬರುತ್ತೆ

Published On - 9:15 pm, Fri, 1 July 22