Viral Video: ಕಟ್ಟಡ ಕಾರ್ಮಿಕನೊಂದಿಗೆ ಫೋಟೋ ತೆಗೆಸಿಕೊಳ್ಳಲು ಸಾಹಸದ ರೀತಿಯಲ್ಲಿ ಇಳಿದ ನಟ ವಿದ್ಯುತ್ ಜಮ್ವಾಲ್

ಪ್ರಾಜೆಕ್ಟ್​ ಸೆಟ್​ನಲ್ಲಿ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕರೊಬ್ಬರೊಂದಿಗೆ ನಟ ವಿದ್ಯುತ್ ಜಮ್ವಾಲ್ ಅವರು ಸಂಭಾಷಣೆ ನಡೆಸಿ ಫೋಟೋ ತೆಗೆಸಿಕೊಂಡಿದ್ದು, ಇದರ ವಿಡಿಯೋ ಇಲ್ಲಿದೆ ನೋಡಿ.

Viral Video: ಕಟ್ಟಡ ಕಾರ್ಮಿಕನೊಂದಿಗೆ ಫೋಟೋ ತೆಗೆಸಿಕೊಳ್ಳಲು ಸಾಹಸದ ರೀತಿಯಲ್ಲಿ ಇಳಿದ ನಟ ವಿದ್ಯುತ್ ಜಮ್ವಾಲ್
ಕಟ್ಟಡ ಕಾರ್ಮಿಕನೊಂದಿಗೆ ನಟ ವಿದ್ಯುತ್ ಜಮ್ವಾಲ್
Follow us
TV9 Web
| Updated By: Rakesh Nayak Manchi

Updated on:Jul 02, 2022 | 2:08 PM

ವೈರಲ್ ವಿಡಿಯೋ: ನಟ ವಿದ್ಯುತ್ ಜಮ್ವಾಲ್ (Actor Vidyut Jammwal) ಅವರು ಕಟ್ಟಡ ಕಾರ್ಮಿಕನೊಬ್ಬನೊಂದಿಗೆ ಫೋಟೋ ತೆಗೆಸಿಕೊಳ್ಳಲು ಸಾಹಸದ ರೀತಿಯಲ್ಲಿ ಇಳಿದು ಹೋದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಪ್ರೇರೇಪಿಸಿದೆ. ವಿದ್ಯುತ್ ಜಮ್ವಾಲ್ ಅವರ ಪ್ರಾಜೆಕ್ಟ್​ ಸೆಟ್​ನಲ್ಲಿ ಚಿತ್ರೀಕರಿಸಲಾದ ಈ ವಿಡಿಯೋ ವೈರಲ್ (Video Viral) ಆಗುತ್ತಿದ್ದು, ಕಟ್ಟಡ ಕಾರ್ಮಿಕ ಮತ್ತು ನಟನ ನಡುವೆ ಏನೆಲ್ಲಾ ಸಂಭಾಷಣೆ ನಡೆಯಿತು ಎಂದು ಹೇಳುತ್ತೇವೆ ಈ ಸುದ್ದಿಯನ್ನು ಸಂಪೂರ್ಣ ಓದಿ.

ಇದನ್ನೂ ಓದಿ: Viral Video: ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಬೆಚ್ಚಿಬೀಳಿಸಿದ ಸುಂಟರಗಾಳಿಯಂತಹ ರಚನೆಯ ವಿಡಿಯೋ

ಪ್ರಾಜೆಕ್ಟ್​ ಸೆಟ್​ನಲ್ಲಿ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕರೊಬ್ಬರೊಂದಿಗೆ ನಟ ವಿದ್ಯುತ್ ಅವರು ಸಂಭಾಷಣೆ ನಡೆಸಿದ್ದಾರೆ. ವಿಡಿಯೋದಲ್ಲಿ ಕೇಳುವಂತೆ, ನಟ ವಿದ್ಯುತ್ ಅವರು ನೀವು ಏನು ನೋಡಿದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕಾರ್ಮಿಕ, ನಾನು ನಿಮ್ಮ ಚಲನಚಿತ್ರವನ್ನು ನೋಡಿದ್ದೇನೆ. ನೀವು ತುಂಬಾ ಚೆನ್ನಾಗಿ ಆಕ್ಷನ್ ಸೀನ್​ಗಳನ್ನು ಮಾಡುತ್ತೀರಿ ಎಂದು ಹೇಳಿದ್ದಾರೆ. ಇದಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಿದ ನಟ, ಚಿತ್ರಗಳಲ್ಲಿ ನಿಮ್ಮಂತೆ ಯಾರೂ ಸಾಹಸಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಸಂಭಾಷಣೆಯ ನಂತರ ನಟ ವಿದ್ಯುತ್ ಅವರು ಕಾರ್ಮಿಕನೊಂದಿಗೆ ಫೋಟೋ ತೆಗೆದುಕೊಳ್ಳಲು ಕೇಳಿಕೊಳ್ಳುತ್ತಾರೆ ಮತ್ತು ತಡಮಾಡದೆ ಕಂಬಗಳನ್ನು ಹಿಡಿದು ಕೆಳಗಿಳಿದ ನಟ ಕಾರ್ಮಿಕನ ಮೊಬೈಲ್​ ಮೂಲಕ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.

ಈ ವಿಡಿಯೋವನ್ನು ಸ್ವತಃ ನಟ ವಿದ್ಯುತ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, 3.74 ಲಕ್ಷ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಸಮರ ಕಲೆಗಳ ಮೇಲಿನ ಪ್ರೀತಿಗೆ ಹೆಸರುವಾಸಿಯಾದ ವಿದ್ಯುತ್, ಕಲರಿಪಯಟ್ಟು ಅಭ್ಯಾಸ ಮಾಡುತ್ತಾರೆ. ಹಿಮಾಲಯದಲ್ಲಿ ದೇಹದ ಅರ್ಧಭಾಗವನ್ನು ಹಿಮದ ಒಳಗಿರಿಸಿ ಸಾಹಸ ಮಾಡುವ ವಿಡಿಯೋವನ್ನು ಕೂಡ ನೀವು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೋಡಬಹುದು.

ಇದನ್ನೂ ಓದಿ: Viral Photo: 48 ವರ್ಷಗಳ ಹಿಂದಿನ ತನ್ನ ರೆಸ್ಯೂಮ್ ಶೇರ್ ಮಾಡಿಕೊಂಡ ಬಿಲ್ ಗೇಟ್ಸ್ ಏನು ಹೇಳಿದ್ರು ಗೊತ್ತಾ?

Published On - 12:59 pm, Sat, 2 July 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್