‘ಕಿಶೋರ್ ಪತ್ತಿಕೊಂಡಗೆ ಮೆದುಳಿನ ಸರ್ಜರಿ ಆಗಿದೆ, ಅವರು ಔಟ್​ ಆಫ್​ ಡೇಂಜರ್​’; ಧೀರೇನ್ ರಾಮ್​ಕುಮಾರ್

ಸೋಮವಾರ (ಜುಲೈ 4) ರಾತ್ರಿ ಕಿಶೋರ್​ ಪತ್ತಿಕೊಂಡ ಅವರು ಪ್ರಜ್ಞೆ ತಪ್ಪಿ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು.

‘ಕಿಶೋರ್ ಪತ್ತಿಕೊಂಡಗೆ ಮೆದುಳಿನ ಸರ್ಜರಿ ಆಗಿದೆ, ಅವರು ಔಟ್​ ಆಫ್​ ಡೇಂಜರ್​’; ಧೀರೇನ್ ರಾಮ್​ಕುಮಾರ್
ಧೀರನ್-ಕಿಶೋರ್
TV9kannada Web Team

| Edited By: Rajesh Duggumane

Jul 05, 2022 | 5:17 PM

‘ಜೇಮ್ಸ್’ ಸಿನಿಮಾ (James Movie) ನಿರ್ಮಾಣ ಮಾಡಿ ಸಾಕಷ್ಟು ಖ್ಯಾತಿ ಗಳಿಸಿದ ನಿರ್ಮಾಪಕ ಕಿಶೋರ್ ಪತ್ತಿಕೊಂಡ (Kishore Pathikonda) ಅವರಿಗೆ ಏಕಾಏಕಿ ಅನಾರೋಗ್ಯ ಕಾಡಿದೆ. ಹೀಗಾಗಿ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಅವರ ಅಭಿಮಾನಿಗಳು ಕೊಂಚ ನಿಟ್ಟುಸಿರು ಬಿಡುವ ಸುದ್ದಿ ಸಿಕ್ಕಿದೆ. ಕಿಶೋರ್ ಅವರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರು ಔಟ್ ಆಫ್ ಡೇಂಜರ್​ನಲ್ಲಿದ್ದಾರೆ ಎಂದು ರಾಜ್​ಕುಮಾರ್ ಮೊಮ್ಮಗ ಧೀರೇನ್​ ರಾಮ್​ಕುಮಾರ್ (Dheeren Ramkumar) ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸೋಮವಾರ (ಜುಲೈ 4) ರಾತ್ರಿ ಕಿಶೋರ್​ ಪತ್ತಿಕೊಂಡ ಅವರು ಪ್ರಜ್ಞೆ ತಪ್ಪಿ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಕಿಶೋರ್​ ಪತ್ತಿಕೊಂಡ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರ ಆಪ್ತರು ಪ್ರಾರ್ಥಿಸುತ್ತಿದ್ದಾರೆ. ಹೀಗಿರುವಾಗಲೇ ಅವರ ಆರೋಗ್ಯದ ಬಗ್ಗೆ ಅಪ್​ಡೇಟ್ ಸಿಕ್ಕಿದೆ.

‘ಕಿಶೋರ್ ಪತ್ತಿಕೊಂಡ ಅವರಿಗೆ ಬಿಪಿ ಏರುಪೇರಾಗಿತ್ತು. ಕಿಶೋರ್ ಪತ್ತಿಕೊಂಡ ಔಟ್ ಆಫ್ ಡೇಂಜರ್ ಆಗಿದ್ದಾರೆ. ನಿನ್ನೆ (ಜುಲೈ 4) ಮನೆಯಲ್ಲಿ ಬಿಪಿ ಏರುಪೇರಾಗಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆವು. ಈಗ ಏನೂ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಮೆದುಳಿನ ಸರ್ಜರಿ ಆಗಿದೆ. ಚಿಕಿತ್ಸೆ ನಡೆಯುತ್ತಿದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದಾರೆ. ಮುಂದೇನು ಎಂಬುದು 24 ಗಂಟೆಗಳಲ್ಲಿ ಗೊತ್ತಾಗುತ್ತದೆ. ಕುಟುಂಬದವರು ಹಾಗೂ ಚಿತ್ರರಂಗದ ಕೆಲ ಗಣ್ಯರು ಜೊತೆ ಇದ್ದಾರೆ’ ಎಂದು ಧೀರೇನ್​ ರಾಮ್​ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ಎಂಬ ಕಾರಣಕ್ಕೆ ‘ಜೇಮ್ಸ್​’ ಚಿತ್ರ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಅಪ್ಪು ನಿಧನದ ಬಳಿಕ ಈ ಸಿನಿಮಾ ಬಿಡುಗಡೆ ಆಯಿತು. ಬಹಳ ಕಾಳಜಿ ವಹಿಸಿ ಕಿಶೋರ್​ ಪತ್ತಿಕೊಂಡ ಅವರು ಚಿತ್ರದ ಪ್ರಚಾರ ಮಾಡಿದ್ದರು. ಅದ್ದೂರಿಯಾಗಿ ರಿಲೀಸ್​ ಆಗುವಂತೆ ನೋಡಿಕೊಂಡಿದ್ದರು. ಪುನೀತ್​ ಅಭಿಮಾನಿಗಳಿಂದ ನಿರ್ಮಾಪಕರಿಗೆ ಸಿಕ್ಕಿದ್ದ ಸಹಕಾರ ಅಪಾರ. ಗಲ್ಲಾಪೆಟ್ಟಿಗೆಯಲ್ಲೂ ಈ ಚಿತ್ರ ಒಳ್ಳೆಯ ಕಲೆಕ್ಷನ್​ ಮಾಡಿತ್ತು. ‘ಜೇಮ್ಸ್​’ ಚಿತ್ರದ ಯಶಸ್ಸಿನ ಬಳಿಕ ಕಿಶೋರ್​ ಪತ್ತಿಕೊಂಡ ಅವರು ಮುಂದಿನ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡರು. ರಾಜ್​ಕುಮಾರ್​ ಮೊಮ್ಮಗ ಧೀರೇನ್​ ರಾಮ್​ಕುಮಾರ್​ ನಟನೆಯ ಹೊಸ ಚಿತ್ರಕ್ಕೆ ಅವರು ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: ಪುನೀತ್​ ನಟನೆಯ ‘ಜೇ357716ಮ್ಸ್’ ಮೂರು ದಿನಕ್ಕೆ ಗಳಿಸಿದ್ದೆಷ್ಟು? ಇಲ್ಲಿದೆ ಸಂಪೂರ್ಣ ರಿಪೋರ್ಟ್​

ಇದನ್ನೂ ಓದಿ

Kishore Pathikonda: ‘ಜೇಮ್ಸ್​’ ನಿರ್ಮಾಪಕ ಕಿಶೋರ್​ ಪತ್ತಿಕೊಂಡ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada